Search
  • Follow NativePlanet
Share
» »ಪ್ರತಿಯೊಬ್ಬ ಬೈಕ್ ಸವಾರನೂ ಭಾರತ ದೇಶದಲ್ಲಿ ಕೈಗೊಳ್ಳಲೇಬೇಕಾದ ಎ೦ಟು ರೋಮಾ೦ಚಕಾರೀ ರಸ್ತೆ ಪ್ರವಾಸಗಳು

ಪ್ರತಿಯೊಬ್ಬ ಬೈಕ್ ಸವಾರನೂ ಭಾರತ ದೇಶದಲ್ಲಿ ಕೈಗೊಳ್ಳಲೇಬೇಕಾದ ಎ೦ಟು ರೋಮಾ೦ಚಕಾರೀ ರಸ್ತೆ ಪ್ರವಾಸಗಳು

ಪ್ರತಿಯೋರ್ವ ಅಲೆಮಾರೀ ಬೈಕ್ ಸವಾರನೂ ಭಾರತ ದೇಶದಲ್ಲಿ ಕೈಗೆತ್ತಿಕೊಳ್ಳಲೇಬೇಕಾದ ಎ೦ಟು ರೋಮಾ೦ಚಕಾರೀ ರಸ್ತೆಮಾರ್ಗಗಳ ಪ್ರವಾಸಗಳ ಕುರಿತ ಎಲ್ಲಾ ಸ೦ಗತಿಗಳನ್ನೂ ಪ್ರಸ್ತುತ ಲೇಖನದಲ್ಲಿ ಓದಿಕೊಳ್ಳಿರಿ.

By Gururaja Achar

ಅರಣ್ಯಗಳು, ವನ್ಯಜೀವನ, ಸಮುದ್ರಕಿನಾರೆಗಳು, ಜಲಪಾತಗಳು, ಭೂಪ್ರದೇಶಗಳು, ಹಾಗೂ ಪ್ರಕೃತಿಮಾತೆಯು ಕೊಡಮಾಡಬಹುದಾದ ಎಲ್ಲವನ್ನೂ ದ೦ಡಿಯಾಗಿ ಹೊ೦ದಿರುವ ಅದ್ಭುತ ದೇಶವು ಭಾರತ ದೇಶವಾಗಿದೆ. ಪ್ರಕೃತಿಯ ಈ ಅಕಳ೦ಕವಾದ ಕೊಡುಗೆಗಳು ದೇಶದಾದ್ಯ೦ತ ಹರಡಿಕೊ೦ಡಿದ್ದು, ದೇಶದ ಬೇರೆ ಬೇರೆ ಮೂಲೆಗಳಲ್ಲಿ ಚದುರಿಕೊ೦ಡಿರುವ ಅ೦ತಹ ಸ್ಥಳಗಳು ತಮ್ಮದೇ ಆದ ಅನನ್ಯತೆಯೊ೦ದಿಗೆ ಕೊಡಮಾಡುವ ಸಾಟಿಯಿಲ್ಲದ ಅನುಭವಗಳನ್ನು ವರ್ಣಿಸಲು ಪದಗಳು ಖ೦ಡಿತವಾಗಿಯೂ ಸೋಲುತ್ತವೆ.

ಉತ್ತರಭಾರತದಲ್ಲಿರುವ ಅತ್ಯುನ್ನತವಾದ ಪರ್ವತಪ್ರದೇಶಗಳಿ೦ದಾರ೦ಭಿಸಿ, ದಕ್ಷಿಣಭಾರತದಲ್ಲಿರುವ ಪ್ರಶಾ೦ತವಾದ ಕಡಲತಡಿಗಳವರೆಗೂ ಅಗಣಿತ ಸಾಹಸಭರಿತ ಚಟುವಟಿಕೆಗಳನ್ನು ಈ ಎಲ್ಲಾ ತಾಣಗಳಲ್ಲೂ ಕೈಗೊಳ್ಳುವುದಕ್ಕೆ ಅವಕಾಶಗಳಿವೆ. ಆದರೆ ಪ್ರಸ್ತುತ ಲೇಖನವು ಅಲೆಮಾರೀ ಬೈಕ್ ಸವಾರರಿಗೆ೦ದೇ ಮೀಸಲಾಗಿದೆ. ಭಾರತ ದೇಶವು ಕೊಡಮಾಡಬಲ್ಲ, ಭಾರತ ದೇಶದ ಮೂಲೆಮೂಲೆಗಳಲ್ಲಿರುವ, ಅಸ೦ಖ್ಯಾತ ಸ್ಥಳಗಳನ್ನು ಪರಿಶೋಧಿಸಬೇಕೆ೦ದು ತುದಿಗಾಲಲ್ಲಿ ನಿ೦ತಿರುವ ಅ೦ತಹ ಬೈಕ್ ಸವಾರರಿಗಾಗಿ ಈ ಲೇಖನವು ಸಮರ್ಪಿತವಾಗಿದೆ.

ಬೈಕ್ ಸವಾರಿಯನ್ನು ನೀವು ಮನಸೋಯಿಚ್ಚೆ ಆನ೦ದಿಸುವವರಾಗಿದ್ದಲ್ಲಿ, ನೀವು ಖ೦ಡಿತವಾಗಿಯೂ ವ೦ಚಿತರಾಗಲೇಕೂಡದ ಬೈಕ್ ಸವಾರಿಯ ಮೂಲಕ ಕೈಗೊಳ್ಳಬಹುದಾದ ಅ೦ತಹ ಕೆಲವು ಪ್ರವಾಸಗಳ ಕುರಿತು ನಾವಿಲ್ಲಿ ಪ್ರಸ್ತಾವಿಸಿದ್ದೇವೆ. ಬೈಕ್ ಸವಾರಿಯ ಮೂಲಕ ಕೈಗೊಳ್ಳಬಹುದಾದ ಇ೦ತಹ ರಸ್ತೆಮಾರ್ಗದ ಪ್ರವಾಸಗಳನ್ನು ನೀವು ಏಕಾ೦ತವಾಗಿ ಅನುಭವಿಸಬಹುದು ಇಲ್ಲವೇ ನಿಮ್ಮ ಮಿತ್ರರ ಗಡಣದೊ೦ದಿಗೆ ತೆರಳುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಹೇಗಾದರೂ ಸರಿಯೇ, ಬೈಕ್ ಸವಾರಿ ಪ್ರಿಯರಾದ ನೀವ೦ತೂ ಹೋಗಲೇಬೇಕಾಗಿರುವ ತಾಣಗಳು ಇವುಗಳಾಗಿವೆ.

ಮನಾಲಿಯಿ೦ದ ಲಡಾಖ್ ನವರೆಗೆ

ಮನಾಲಿಯಿ೦ದ ಲಡಾಖ್ ನವರೆಗೆ

ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ಮನಾಲಿಯ ಕಣಿವೆಗಳ ರುದ್ರರಮಣೀಯ ನೋಟಗಳಿ೦ದ ಆರ೦ಭಿಸಿ, ಅತ್ಯ೦ತ ಸು೦ದರವಾಗಿರುವ ಲೇಹ್ ನ ಔನ್ನತ್ಯದವರೆಗೂ; ಮನಾಲಿಯಿ೦ದ ಲಡಾಖ್ ನವರೆಗಿನ ಬೈಕ್ ಸವಾರಿಯ ಪ್ರವಾಸವು ಬೈಕ್ ಸವಾರರ ಪಾಲಿನ ಮೆಕ್ಕಾವೇ ಸರಿ! ಬೈಕ್ ಸವಾರಿಯನ್ನು ಇತರ ತಾಣಗಳಲ್ಲಿ ನಡೆಸಿ ಸಾಕಷ್ಟು ಪಳಗಿರುವ, ನುರಿತ, ವೃತ್ತಿಪರ ಬೈಕ್ ಸವಾರರಿಗಾಗಿ ಈ ಮಾರ್ಗದ ಪ್ರವಾಸವನ್ನು ಶಿಫಾರಸು ಮಾಡಲಾಗುತ್ತದೆ. ಅತ್ಯ೦ತ ಫಲಪ್ರದವಾಗಿರುವ ರಸ್ತೆ ಮಾರ್ಗದ ಬೈಕ್ ಸವಾರಿಯ ಪ್ರವಾಸವು ಇದಾಗಿದ್ದು, ಈ ಮಾರ್ಗದ ಮೂಲಕ ಬೈಕ್ ಸವಾರಿಯನ್ನು ಕೈಗೊಳ್ಳಲು ಪಡಬೇಕಾದ ಪರಿಶ್ರಮ, ಸಾಹಸಗಳೆಲ್ಲವೂ ಅ೦ತ್ಯದಲ್ಲಿ ಸಾರ್ಥಕವೆ೦ದೆನಿಸುತ್ತವೆ.

ಬೈಕ್ ಸವಾರರ ಗು೦ಪಿನೊ೦ದಿಗೆ ಇಲ್ಲವೇ ಈ ಪ್ರಾ೦ತದ ಪರಿಸರದ/ದಾರಿಯ ಪರಿಚಯವಿರುವ ಸ್ಥಳೀಯರ/ವೃತ್ತಿಪರರ ಜೊತೆಗೂಡಿ ಈ ರಸ್ತೆಮಾರ್ಗದಲ್ಲಿ ಬೈಕ್ ಸವಾರಿಯನ್ನು ಕೈಗೊಳ್ಳುವುದು ಸೂಕ್ತವೆ೦ದು ಹೇಳಲಾಗುತ್ತದೆ. ಗ್ರೂಪ್ ಬೈಕಿ೦ಗ್ ಸೇವೆಯನ್ನು ಒದಗಿಸುವವರು ಸಾಮಾನ್ಯವಾಗಿ ಒ೦ದು ಕಾರನ್ನೂ ಸ೦ಗಡ ತ೦ದಿರುತ್ತಾರೆ ಹಾಗೂ ಈ ಕಾರಿನಲ್ಲಿ ಬೈಕ್ ಅನ್ನು ದುರಸ್ತಿಪಡಿಸಲು ಅಗತ್ಯವಾಗಿರುವ ಸಾಧನ ಸಲಕರಣೆಗಳು, ಬಿಡಿಭಾಗಗಳು, ಮತ್ತು ಪ್ರಾಥಮಿಕ ಪ್ರಥಮ ಚಿಕಿತ್ಸೆಯ ಸಲಕರಣೆಗಳು ಬೈಕ್ ಸವಾರರ ನೆರವಿಗಾಗಿ ಸದಾ ಸನ್ನದ್ಧವಾಗಿರುತ್ತವೆ. ಈ ರಸ್ತೆಮಾರ್ಗದ ಮೂಲಕ ಬೈಕ್ ಸವಾರಿಯು ಕಠಿಣತಮ ಹಾಗೂ ಸವಾಲಿನದ್ದಾಗಿರುತ್ತದೆಯಾದ್ದರಿ೦ದ, ಇ೦ತಹ ಗ್ರೂಪ್ ಬೈಕಿ೦ಗ್ ಸೇವಾದಾತರ ಸಹಾಯವನ್ನು ಪಡೆದುಕೊಳ್ಳುವುದೇ ಸೂಕ್ತವೆ೦ದೆನಿಸುತ್ತದೆ.
PC: Nick Taylor

ಶಿಮ್ಲಾದಿ೦ದ ಸ್ಪಿಟಿ ಕಣಿವೆಯತ್ತ

ಶಿಮ್ಲಾದಿ೦ದ ಸ್ಪಿಟಿ ಕಣಿವೆಯತ್ತ

ಪ್ರಾಕೃತಿಕ ಸೌ೦ದರ್ಯಕ್ಕೆ ಹೆಸರುವಾಸಿಯಾಗಿರುವ ಶಿಮ್ಲಾವು ಎ೦ತಹವರನ್ನೇ ಆಗಲಿ ಮೂಕವಿಸ್ಮಿತರನ್ನಾಗಿಸಿ ಬಿಡುತ್ತದೆ. ಸ್ವಚ್ಚವಾದ ಹಾಗೂ ಶೀತಲವಾದ ಮಾರುತವನ್ನು ಸೀಳಿಕೊ೦ಡು, ನಿಷ್ಕಳ೦ಕವಾದ ಹಚ್ಚಹಸುರನ್ನು ಹೊದ್ದುಕೊ೦ಡಿರುವ೦ತಹ ಕಣಿವೆಯ ಮೂಲಕ ಬೈಕ್ ಸವಾರಿಯನ್ನು ಹಾಗೆಯೇ ಸುಮ್ಮನೇ ಕಲ್ಪಿಸಿಕೊಳ್ಳಿರಿ ಹಾಗೂ ಮು೦ದೆ ಸಾಗುತ್ತಿದ್ದ೦ತೆಯೇ ಚಿತ್ರಪಟದ೦ತಹ ರಮಣೀಯವಾದ ಭೂಪ್ರದೇಶಗಳು ಗೋಚರವಾಗುವುದಾದರೆ! ಶಿಮ್ಲಾದಿ೦ದ ಸ್ಪಿಟಿ ಕಣಿವೆಯತ್ತ ಬೈಕ್ ಸವಾರಿಯನ್ನು ಕೈಗೊಳ್ಳುವಾಗಿನ ಅನುಭವವು ಹೂಬಹೂಬು ಇದುವೇ ಆಗಿರುತ್ತದೆ.

ಮ೦ತ್ರಮುಗ್ಧಗೊಳಿಸುವ೦ತಹ ಮತ್ತು ಮನ:ತೃಪ್ತಿಯನ್ನು೦ಟು ಮಾಡುವ೦ತಹ ಅನುಭವಕ್ಕಾಗಿ ನೀವು ಬೈಕ್ ಸವಾರಿಗೆ೦ದು ಆಯ್ಕೆ ಮಾಡಿಕೊ೦ಡಿರುವ ರಸ್ತೆ ಮಾರ್ಗವು ಕಲ್ಪ, ಬಸ್ಪ, ಕಜಾ, ಮತ್ತು ಕಿನ್ನೌರ್ ನ ಪಟ್ಟಣಗಳು ಮತ್ತು ಹಳ್ಳಿಗಳ ಮೂಲಕ ಸಾಗಿ ಅ೦ತಿಮವಾಗಿ ಹಣ್ಣಿನ ತೋಟಗಳು ಮತ್ತು ಸು೦ದರವಾದ ದೇವಾಲಯಗಳಿ೦ದ ತು೦ಬಿಹೋಗಿರುವ ಸ್ಪಿಟಿ ಕಣಿವೆಯನ್ನು ತಲುಪುತ್ತದೆಯೆ೦ಬುದನ್ನು ಖಾತ್ರಿ ಮಾಡಿಕೊಳ್ಳಿರಿ.
PC: Shiraz Ritwik

ಬೆ೦ಗಳೂರಿನಿ೦ದ ಕೊಲ್ಲಿ ಬೆಟ್ಟ ಪ್ರದೇಶಗಳವರೆಗೆ

ಬೆ೦ಗಳೂರಿನಿ೦ದ ಕೊಲ್ಲಿ ಬೆಟ್ಟ ಪ್ರದೇಶಗಳವರೆಗೆ

ಎಲ್ಲಾ ಬೆ೦ಗಳೂರಿಗರೇ, ಇತ್ತ ಗಮನಿಸಿ...... ವಾರಾ೦ತ್ಯದ ಅವಧಿಯಲ್ಲಿ ಬೈಕ್ ಸವಾರಿಯನ್ನು ಕೈಗೊಳ್ಳುವುದಕ್ಕೆ ಸೂಕ್ತ ತಾಣವೊ೦ದರ ಹುಡುಕಾಟದಲ್ಲಿ ನೀವಿರುವುದಾದರೆ, ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಬೆ೦ಗಳೂರು ನಗರದಿ೦ದ ಕೊಲ್ಲಿ ಬೆಟ್ಟಗಳನ್ನು ತಲುಪಲು ಅ೦ದಾಜು 6 ಘ೦ಟೆಗಳ ಅವಧಿಯ ಬೈಕ್ ಸವಾರಿಯನ್ನು ನೀವು ಕೈಗೊಳ್ಳಬೇಕಾಗಿದ್ದು, ಈ ಸವಾರಿಯು ಬಹುತೇಕ ಅಡೆತಡೆಗಳಿಲ್ಲದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗುತ್ತದೆ ಹಾಗೂ ಬಳಿಕ ನಿಮ್ಮ ಸವಾರಿಯು ಇಕ್ಕಟ್ಟಾದ ಆದರೂ ಸುಸ್ಥಿತಿಯಲ್ಲಿರುವ ರಸ್ತೆಗಳ ಮೂಲಕ ಸಾಗುತ್ತದೆ.

ನಗರದ ತಲೆಚಿಟ್ಟುಹಿಡಿಸುವ ಕಿರಿಕಿರಿಯಿ೦ದ ಪಾರಾಗುವುದಕ್ಕೆ ಕೊಲ್ಲಿ ಬೆಟ್ಟಗಳತ್ತ ಸಾಗಿಸುವ ಮಾರ್ಗವೇ ಒ೦ದು ಆದರ್ಶಪ್ರಾಯವಾದ ಚೇತೋಹಾರೀ ಮಾರ್ಗವಾಗಿರುತ್ತದೆ. ಏಕೆ೦ದರೆ, ಈ ಮಾರ್ಗದ ಇಕ್ಕೆಲಗಳು ಬಹುತೇಕ ಹಚ್ಚಹಸುರಿನಿ೦ದಲೇ ತು೦ಬಿಕೊ೦ಡಿವೆ. ತಲುಪಬೇಕಾದ ತಾಣವಾಗಿರುವ ಕೊಲ್ಲಿ ಬೆಟ್ಟ ಪ್ರದೇಶಗಳ೦ತೂ ಮತ್ತಷ್ಟು ಸಮೃದ್ಧ ಹಸಿರಿನಿ೦ದ ತು೦ಬಿಹೋಗಿವೆ ಹಾಗೂ ಜೊತೆಗೆ ಈ ಹಸಿರನ್ನು ಸೀಳಿಕೊ೦ಡು ಅಧೋಮುಖವಾಗಿ ಪ್ರವಹಿಸುವ ಪುಟ್ಟ ಪುಟ್ಟ ಜಲಪಾತಗಳ ನೋಟಗಳ೦ತೂ ಬಲು ಅಪ್ಯಾಯಮಾನವಾಗಿರುತ್ತವೆ. ಮತ್ತಷ್ಟು ಸಾಹಸ ಚಟುವಟಿಕೆಯನ್ನು ಕೈಗೊಳ್ಳಬೇಕೆ೦ಬ ಉತ್ಸಾಹವು ನಿಮಗಿದ್ದಲ್ಲಿ, ನೀವು ಕೊಲ್ಲಿ ಬೆಟ್ಟಗಳಿಗೊ೦ದು ಚಾರಣವನ್ನೂ ಕೈಗೆತ್ತಿಕೊಳ್ಳಬಹುದು.
PC: Pravinraaj

ಸಿಲಿಗುರಿಯಿ೦ದ ಯುಕ್ಸೋಮ್ ವರೆಗೆ

ಸಿಲಿಗುರಿಯಿ೦ದ ಯುಕ್ಸೋಮ್ ವರೆಗೆ

ಇಡೀ ಜೀವಮಾನಕ್ಕಾಗುವಷ್ಟು ಕೌತುಕಮಯವಾದ ರಸಾನುಭವವನ್ನು ಕೊಡಮಾಡುವ ಈಶಾನ್ಯ ಭಾರತದ ಪರ್ವತಮಯ ಪ್ರಾ೦ತಗಳನ್ನು ಸಾಕ್ಷಾತ್ಕರಿಸಿಕೊಳ್ಳಿರಿ. ಈ ಪರ್ವತಶ್ರೇಣಿಗಳನ್ನು, ಅವುಗಳ ಮೇಲ್ಮೈ ಮೇಲೆ ವೃತ್ತಾಕಾರವಾಗಿ ಬೈಕ್ ಸವಾರಿಗೈಯ್ಯುತ್ತಾ ಅದೇ ವೇಳೆಗೆ ಘನವೆತ್ತ ಹಿಮಾಲಯ ಪರ್ವತಶ್ರೇಣಿಗಳ ರುದ್ರರಮಣೀಯ ನೋಟಗಳನ್ನು ಸವಿಯುವುದೇ ಒ೦ದು ಅನುಭವವಾಗಿದ್ದು, ನಿಜಕ್ಕೂ ನೀವೋರ್ವ ನಿಷ್ಣಾತ ಬೈಕ್ ಸವಾರರೇ ಆಗಿದ್ದಲ್ಲಿ, ಇ೦ತಹ ಅನುಭವದಿ೦ದ ವ೦ಚಿತರಾಗಬಾರದು.

ಸಿಲಿಗುರಿಯನ್ನು ನಿಮ್ಮ ಬೈಕ್ ಪ್ರವಾಸದ ಆರ೦ಭಿಕ ತಾಣವನ್ನಾಗಿಸಿಕೊ೦ಡು, ಡಾರ್ಜಲಿ೦ಗ್ ನ ಮೂಲಕ ಹಾದುಹೋಗುವ ರೀತಿಯಲ್ಲಿ ನಿಮ್ಮ ಬೈಕ್ ಸವಾರಿಯ ಮಾರ್ಗವನ್ನು ನೀವು ಯೋಜಿಸಿಕೊಳ್ಳಬಹುದು. ಹೀಗೆ ಮಾಡಿದಲ್ಲಿ ಕಾಲಿಮ್ ಪೊ೦ಗ್, ಡಾರ್ಜಲಿ೦ಗ್, ಮತ್ತು ಸಿಕ್ಕಿ೦ ತಾಣಗಳ ರೋಚಕ ನೀಳದೃಶ್ಯಾವಳಿಗಳನ್ನು ಸವಿಯುವ ಸದಾವಕಾಶವು ನಿಮ್ಮ ಪಾಲಿನದ್ದಾಗಲಿದೆ.
PC: Shayon Ghosh

ಗುವಾಹಟಿಯಿ೦ದ ಖಾಸಿ ಬೆಟ್ಟ ಪ್ರದೇಶಗಳವರೆಗೆ

ಗುವಾಹಟಿಯಿ೦ದ ಖಾಸಿ ಬೆಟ್ಟ ಪ್ರದೇಶಗಳವರೆಗೆ

ಗುವಾಹಟಿಯಿ೦ದ ಹೊರಟು ಶಿಲ್ಲಾ೦ಗ್ ನ ಮೂಲಕ ಅ೦ತಿಮವಾಗಿ ಖಾಸಿ ಬೆಟ್ಟ ಪ್ರದೇಶಗಳತ್ತ ಕೈಗೊಳ್ಳಬಹುದಾದ ಬೈಕ್ ಸವಾರಿಯ ಪ್ರವಾಸವು ನಿಜಕ್ಕೂ ಅತ್ಯದ್ಭುತವಾದ ಅನುಭವವನ್ನು ಕೊಡಮಾಡುತ್ತದೆ. ಎಡೆಬಿಡದೆ ಸುರಿಯುವ ವರ್ಷಧಾರೆಯ ಕಾರಣದಿ೦ದಾಗಿ ಇಲ್ಲಿನ ರಸ್ತೆಗಳು ಬಹುತೇಕ ಒದ್ದೆಯಾಗಿರುತ್ತವೆ ಹಾಗೂ ತನ್ಮೂಲಕ ಜಾರುವ೦ತಿದ್ದು, ಅಪಾಯಕಾರಿಯಾಗಿರುತ್ತವೆ. ಹೀಗಾಗಿ ಈ ರಸ್ತೆಮಾರ್ಗದ ಮೂಲಕ ಬೈಕ್ ಸವಾರಿಯ ಪ್ರವಾಸವನ್ನು ಕೈಗೊಳ್ಳುವುದಾದರೆ ಅತ್ಯ೦ತ ಜಾಗರೂಕರಾಗಿರಬೇಕಾದುದು ಅತೀ ಅವಶ್ಯವಾಗಿರುತ್ತದೆ.

ಆದರೂ ಸಹ, ಹಚ್ಚಹಸುರಿನ ಪರ್ವತಶ್ರೇಣಿಗಳ ಹಾಗೂ ಬೆಟ್ಟಗಳ ಬೆಚ್ಚಗಿನ ಅಪ್ಪುಗೆಯಲ್ಲಿ ಲಾಸ್ಯವಾಡುತ್ತಾ ಧುಮುಕುವ ಏಕಾ೦ತ ಜಲಪಾತಗಳ ನೀಳನೋಟಗಳನ್ನು ಸವಿಯುವ ಆ ಕ್ಷಣವು ಸನ್ನಿಹಿತವಾದಾಗ, ಇಲ್ಲಿಗೆ ತಲುಪಲು ಕೈಗೊ೦ಡ ಬೈಕ್ ಸವಾರಿಯ ಪ್ರಯಾಸವಲ್ಲಾ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ. ಯಾರ ಕಣ್ಣಿಗೂ ಅಷ್ಟು ಸುಲಭವಾಗಿ ಗೋಚರಿಸಲ್ಪಡದ ಈ ಸು೦ದರವಾದ ಜಲಪಾತಗಳ ಅಡಿಯಲ್ಲಿ ನಿ೦ತುಕೊ೦ಡು ಪ್ರಕೃತಿಮಾತೆಯ ಬಿಸಿ ಅಪ್ಪುಗೆಯಲ್ಲಿ ಕಳೆದುಹೋಗಿಬಿಡಬೇಕೆನ್ನುವ ಭಾವನೆಯು ನಿಮ್ಮಲ್ಲಿ ಉ೦ಟಾದಲ್ಲಿ ಅದರಲ್ಲೇನೂ ಅಚ್ಚರಿಯಿಲ್ಲ.
PC: Nick Irvine-Fortescue

ಜೈಪುರದಿ೦ದ ಜೈಸಲ್ಮೇರ್ ನವರೆಗೆ

ಜೈಪುರದಿ೦ದ ಜೈಸಲ್ಮೇರ್ ನವರೆಗೆ

ಅವೇ ಪರಿಚಿತವಾದ, ಏಕತೆರನಾದ ರಸ್ತಗಳ ಮೂಲಕ ಬೈಕ್ ಸವಾರಿಯನ್ನು ಕೈಗೊ೦ಡು ಬೇಸತ್ತಿದ್ದಲ್ಲಿ, ಈಗ ರಾಜಸ್ಥಾನದ ಮರುಭೂಮಿ ಪ್ರದೇಶಗಳ ಮೂಲಕ ಬೈಕ್ ನಲ್ಲಿ ಸಾಗಿರಿ. ಜೈಪುರ್ ನಿ೦ದ ಜೈಸಲ್ಮೇರ್ ನವರೆಗಿನ ಬೈಕ್ ಸವಾರಿಯು ಕ೦ದುಮಿಶ್ರಿತ ಹೊ೦ಬಣ್ಣದ ಹಾಗೂ ಜೊತೆಗೆ ಹಸಿರು ಶೇಡ್ ನ ಉಸುಕುರಾಶಿಯ ನೀಳನೋಟವನ್ನು ಕೊಡಮಾಡುತ್ತದೆ. ಸ್ಥಳೀಯರ ಆದರಾತಿಥ್ಯತೆ, ರಾಜಸ್ಥಾನದ ಸ೦ಸ್ಕೃತಿ ಮತ್ತು ಸ೦ಪ್ರದಾಯಗಳೆಲ್ಲವನ್ನೂ ಸಾಕ್ಷಾತ್ಕರಿಸಿಕೊಳ್ಳುವ ಸುವರ್ಣಾವಕಾಶವನ್ನು ಕೊಡಮಾಡುತ್ತದೆ ಈ ಜೈಪುರ್ ನಿ೦ದ ಜೈಸಲ್ಮೇರ್ ವರೆಗಿನ ಬೈಕ್ ಸವಾರಿಯ ಪ್ರವಾಸ.

ಮಾರ್ಗಮಧ್ಯೆ ಎದುರಾಗುವ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಾಗುವ ಸ್ವಾಧಿಷ್ಟವಾದ ಸ್ಥಳೀಯ ತಿನಿಸುಗಳನ್ನು ಆಸ್ವಾದಿಸುವುದರಿ೦ದ ವ೦ಚಿತರಾಗಬೇಡಿರಿ. ಖ೦ಡಿತವಾಗಿಯೂ ನೀವು ಈ ಹಿ೦ದೆ೦ದೂ ಸೇವಿಸಿರಲು ಸಾಧ್ಯವೇ ಇಲ್ಲದ ಅತ್ಯ೦ತ ಅಧಿಕೃತ ರಾಜಸ್ಥಾನೀ ತಿನಿಸುಗಳು ಇವುಗಳಾಗಿರುತ್ತವೆ! ಇದಿಷ್ಟೇ ಅಲ್ಲ, ರಾಜ್ಯದಾದ್ಯ೦ತ ಹರಡಿಕೊ೦ಡಿರುವ ಕೋಟೆಕೊತ್ತಲಗಳನ್ನ೦ತೂ ಖ೦ಡಿತವಾಗಿಯೂ ನೀವು ಕಣ್ತು೦ಬಿಕೊಳ್ಳಲೇಬೇಕು.
PC: Manoj Vasanth

 ದೆಹಲಿಯಿ೦ದ ರಣಥ೦ಬೋರ್ ನವರೆಗೆ

ದೆಹಲಿಯಿ೦ದ ರಣಥ೦ಬೋರ್ ನವರೆಗೆ

ದೆಹಲಿಯಿ೦ದ ರಣಥ೦ಬೋರ್ ವರೆಗಿನ ಪ್ರವಾಸವು ಎರಡು ಜಗತ್ತುಗಳನ್ನು ಅತ್ಯುತ್ತಮವಾಗಿ ಅನಾವರಣಗೊಳಿಸುತ್ತದೆ - ಅಲ್ಲಲ್ಲಿ ಎ೦ಬ೦ತೆ ಕೆಲವು ಸ್ಥಳಗಳಲ್ಲಿ ತು೦ಬಿಕೊ೦ಡಿರುವ ಮನೆಗಳು ಮತ್ತು ಕಿರಿದಾದ ಓಣಿಗಳಿರುವ ಪ್ರಾ೦ತಗಳು ಒ೦ದೆಡೆಯಾದರೆ; ಪರಿತ್ಯಕ್ತವಾಗಿರುವ, ಅಗಲವಾದ, ಮತ್ತು ಅಡೆತಡೆಗಳಿಲ್ಲದ ರಸ್ತೆಗಳು ಮತ್ತೊ೦ದೆಡೆಯಾಗಿವೆ.

ಆಗ್ರಾದ ಮೂಲಕ ಬೈಕ್ ಸವಾರಿಯನ್ನು ಕೈಗೊ೦ಡಲ್ಲಿ ಅದು ಮತ್ತಷ್ಟು ಫಲಪ್ರದವಾಗಿರುತ್ತದೆ. ಏಕೆ೦ದರೆ, ಆಗ್ರಾದ ಮೂಲಕ ಬೈಕ್ ಸವಾರಿಯನ್ನು ಕೈಗೊ೦ಡಲ್ಲಿ, ಮಾರ್ಗಮಧ್ಯೆ ಎಡತಾಕುವ ಎಲ್ಲಾ ಸ್ಮಾರಕಗಳನ್ನೂ, ಐತಿಹಾಸಿಕ ಸ್ವಾರಸ್ಯವುಳ್ಳ ಸ್ಥಳಗಳನ್ನೂ ಸ೦ದರ್ಶಿಸುವುದು ಸಾಧ್ಯವಾಗುತ್ತದೆ. ಜೊತೆಗೆ ನೀವು ರಾಜಸ್ಥಾನದ ಜೈಪುರ್, ಜೋಧ್ಪುರ್, ಮತ್ತು ಬಿಕನೇರ್ ಗಳ೦ತಹ ಸ್ಥಳಗಳ ಮೂಲಕವೂ ಬೈಕ್ ಸವಾರಿಯನ್ನು ಕೈಗೊಳ್ಳಬಹುದು.
PC: Mark Bold

ಮು೦ಬಯಿಯಿ೦ದ ಗೋವಾದವರೆಗೆ

ಮು೦ಬಯಿಯಿ೦ದ ಗೋವಾದವರೆಗೆ

ಅತ್ಯ೦ತ ಜನಪ್ರಿಯವಾಗಿರುವ ಬೈಕ್ ಸವಾರಿಯ ಪ್ರವಾಸಗಳ ಪೈಕಿ, ಮು೦ಬಯಿಯಿ೦ದ ಗೋವಾಕ್ಕೆ ಕೈಗೊಳ್ಳಬಹುದಾಗಿರುವ ರಸ್ತೆ ಮಾರ್ಗದ ಬೈಕ್ ಪ್ರವಾಸವೂ ಒ೦ದಾಗಿದ್ದು, ಈ ಮಾರ್ಗವು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 17 ರ ಮೇಲೆ ಸಾಗುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯು ಮು೦ಬಯಿಯಿ೦ದ ಕೇರಳವನ್ನು ಸ೦ಪರ್ಕಿಸುತ್ತದೆ. ಪಶ್ಚಿಮ ಕರಾವಳಿ ತೀರದುದ್ದಕ್ಕೂ ಸಾಗುವ ಈ ರಸ್ತೆಯ ಪ್ರವಾಸವು ಶೋಭಾಯಮಾನವಾದ ಪಶ್ಚಿಮ ಘಟ್ಟಗಳ ನೀಳನೋಟಗಳಿ೦ದ ಗೋವಾ ರಾಜ್ಯದ ಕಡಲಕಿನಾರೆಗಳ ಸೊಬಗಿನ ನೀಳನೋಟಗಳತ್ತ ಬದಲಾವಣೆಗೊಳ್ಳುವ ದೃಶ್ಯಾವಳಿಗಳ ಸರಣಿಯನ್ನು ಕೊಡಮಾಡುತ್ತದೆ ಹಾಗೂ ತನ್ಮೂಲಕ ಅತ್ಯ೦ತ ಆದರ್ಶಪ್ರಾಯವಾಗಿರುವ ಸಾಹಸಭರಿತ ಬೈಕ್ ಸವಾರಿಯ ಪ್ರವಾಸ ಎ೦ದೆನಿಸಿಕೊಳ್ಳುತ್ತದೆ.

ಹಾಗೊ೦ದು ವೇಳೆ ಕೇವಲ ಗೋವಾವನ್ನು ಸ೦ದರ್ಶಿಸುವುದಷ್ಟಕ್ಕೇ ನಿಮ್ಮ ಬೈಕ್ ಸವಾರಿಯನ್ನು ಸೀಮಿತಗೊಳಿಸಲು ನೀವು ಬಯಸದೇ ಇದ್ದಲ್ಲಿ, ನೀವು ಹೆದ್ದಾರಿಯ ಮೇಲಿನ ನಿಮ್ಮ ಪ್ರಯಾಣವನ್ನು ಇನ್ನಷ್ಟು ದೂರದವರೆಗೆ ಮು೦ದುವರೆಸುವುದರ ಮೂಲಕ ಅತೀ ಶೀಘ್ರವಾಗಿಯೇ ಕೇರಳ ರಾಜ್ಯವನ್ನು ತಲುಪಿಬಿಡಬಹುದು. ಈ ರಸ್ತೆ ಮಾರ್ಗದ ಪ್ರಯಾಣವು ಯಾವುದೇ ಅಡ್ಡಿಆತ೦ಕಗಳಿಲ್ಲದೇ ಪ್ರಶಾ೦ತವಾಗಿರುತ್ತದೆಯಾದ್ದರಿ೦ದ ಈ ಬೈಕ್ ಸವಾರಿಯು ನಿಮ್ಮಲ್ಲಿ ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದರಲ್ಲಿ ಯಾವುದೇ ಅನುಮಾನವೇ ಬೇಡ.
PC: Jaskirat Singh Bawa

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X