Search
  • Follow NativePlanet
Share
» »ಕೇರಳದ ಕಡಲ ತೀರ... ಬೆಂಗಳೂರಿಗೆ ಹತ್ತಿರ...

ಕೇರಳದ ಕಡಲ ತೀರ... ಬೆಂಗಳೂರಿಗೆ ಹತ್ತಿರ...

ಎಲ್ಲೆಲ್ಲೂ ಹಚ್ಚ ಹಸುರಿನ ಪರಿಸರ, ಅಲ್ಲಲ್ಲಿ ಕಡಲ ತೀರದ ನಾದ, ಅವುಗಳನ್ನು ನೋಡುತ್ತಾ ನಿಂತಿರುವ ತೆಂಗಿನ ಮರಗಳ ಸಾಲು, ಹತ್ತಿರದಲ್ಲೇ ಪ್ರಜ್ವಲಿಸುವ ದೇಗುಲಗಳು, ಪ್ರಸನ್ನವಾಗಿ ಹರಿಯುವ ಹಿನ್ನೀರು, ಅಲ್ಲಲ್ಲಿ ತೇಲುತ್ತಿರುವ ದೋಣಿ ಮನೆಗಳು...

By Divya

ಎಲ್ಲೆಲ್ಲೂ ಹಚ್ಚ ಹಸುರಿನ ಪರಿಸರ, ಅಲ್ಲಲ್ಲಿ ಕಡಲ ತೀರದ ನಾದ, ಅವುಗಳನ್ನು ನೋಡುತ್ತಾ ನಿಂತಿರುವ ತೆಂಗಿನ ಮರಗಳ ಸಾಲು, ಹತ್ತಿರದಲ್ಲೇ ಪ್ರಜ್ವಲಿಸುವ ದೇಗುಲಗಳು, ಪ್ರಸನ್ನವಾಗಿ ಹರಿಯುವ ಹಿನ್ನೀರು, ಅಲ್ಲಲ್ಲಿ ತೇಲುತ್ತಿರುವ ದೋಣಿ ಮನೆಗಳು... ಅಬ್ಬಾ! ಈ ಸುಂದರ ದೃಶ್ಯ ಎಷ್ಟು ಮನೋಹರ ಅಲ್ಲವಾ? ಹೌದು, ಇವೆಲ್ಲವೂ ನೋಡಲು ಸಿಗುವುದು ಕೇರಳದಲ್ಲಿ.

ಪ್ರವಾಸಿಗರನ್ನು ತನ್ನ ಮುಗ್ಧತೆಯಿಂದಲೇ ಸೆಳೆದುಕೊಳ್ಳುವುದು ಕೇರಳದ ವಿಶೇಷ. ಪ್ರತಿಯೊಂದು ನಗರದಲ್ಲೂ ವಿಶೇಷವಾಗಿರುವ ಕಡಲತೀರಗಳು ಪ್ರವಾಸಿಗನಿಗೆ ಖುಷಿಯ ಹುಚ್ಚೆಬ್ಬಿಸುತ್ತವೆ. ಬೆಂಗಳೂರಿನಿಂದ 460.6 ಕಿ.ಮೀ ದೂರದಲ್ಲಿರುವ ಈ ತಾಣಕ್ಕೆ ಭೇಟಿ ನೀಡಿದರೆ, ಸುತ್ತಲಿನ ಕಡಲ ತೀರಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ದೀರ್ಘಾವಧಿ ರಜೆಯ ಪ್ರವಾಸಕ್ಕೆ ಯೋಗ್ಯವಾದ ಕಡಲ ತೀರದ ಕಿರುನೋಟ... ಕೇರಳ ಪ್ರವಾಸೊದ್ಯಮ - ಆನಂದಮಯ ಕ್ಷಣಗಳು

ಕೊಚ್ಚಿ ಕಡಲ ತೀರ

ಕೊಚ್ಚಿ ಕಡಲ ತೀರ

ಕೇರಳದ ಎರಡನೇ ಅತಿದೊಡ್ಡ ನಗರವೆನಿಸಿಕೊಂಡ ಕೊಚ್ಚಿ, ಬೆಂಗಳೂರಿನಿಂದ 516 ಕಿ.ಮೀ., ಮಂಗಳೂರಿನಿಂದ 426 ಕಿ.ಮೀ. ದೂರದಲ್ಲಿದೆ. ಇದು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಬರುತ್ತದೆ. ಇದನ್ನು ಅರಬ್ಬಿ ಸಮುದ್ರದ ರಾಣಿ ಎಂತಲೂ ಕರೆಯುತ್ತಾರೆ. ಸುಂದರ ಪರಿಸರದ ವಾತಾವರಣವನ್ನು ಹೊಂದಿರುವ ಈ ತಾಣ ಪ್ರವಾಸಿಗನ ಆಕರ್ಷಿಸದೆ ಬಿಡದು. ತಿರುವನಂತಪುರಂ : ವಿಸ್ಮಯಗಳ ನಾಡು - ಕೇರಳ

PC :www.flickr.com

ಕೊವಲಂ ಕಡಲ ತೀರ

ಕೊವಲಂ ಕಡಲ ತೀರ

ಬೆಂಗಳೂರಿನಿಂದ 726 ಕಿ.ಮೀ. ದೂರದಲ್ಲಿರುವ ಕೊವಲಂ ಕೇರಳ ಪಟ್ಟಣದಿಂದ 16 ಕಿ.ಮೀ. ದೂರದಲ್ಲಿದೆ. ಸುತ್ತಲೂ ತೆಂಗಿನ ಮರಗಳ ರಾಶಿಯಿಂದಲೇ ಕೂಡಿರುವ ಈ ತೀರ ಸುಂದರ ಆಕರ್ಷಣೆಯನ್ನು ಹೊಂದಿದೆ. ಇದರ ಹತ್ತಿರದಲ್ಲೇ ಒಂದು ಪುರಾತನ ಕಾಲದ ಅರಮನೆ ಇರುವುದನ್ನು ನೋಡಬಹುದು. ಅನೇಕ ರೆಸಾರ್ಟ್‍ಗಳು ಈ ತೀರದ ಸಮೀಪದಲ್ಲಿರುವುದರಿಂದ ಪ್ರವಾಸಿಗರು ಕಡಲಲ್ಲಿ ಹೆಚ್ಚು ಸಮಯ ಕಳೆಯಬಹುದು.

PC : en.m.wikipedia.org

ಕ್ಯಾಲಿಕಟ್ ಕಡಲ ತೀರ

ಕ್ಯಾಲಿಕಟ್ ಕಡಲ ತೀರ

ಬೆಂಗಳೂರಿನಿಂದ 352 ಕಿ.ಮೀ. ದೂರದಲ್ಲಿರುವ ಈ ಸಮುದ್ರಕ್ಕೆ ಕೋಜಿಕೋಡ್ ಎಂತಲೂ ಕರೆಯುತ್ತಾರೆ. ಆತಿಥ್ಯಕ್ಕೆ ಹೆಸರಾದ ಕ್ಯಾಲಿಕಟ್ ಅರಬ್ಬಿ ಸಮುದ್ರದಿಂದ ಸುತ್ತುವರಿದಿದೆ. ರೈಲ್ವೆ, ಬಸ್ ಹಾಗೂ ವಿಮಾನ ನಿಲ್ದಾಣಗಳು ಇಲ್ಲಿಯೇ ಇರುವುದರಿಂದ, ಪ್ರವಾಸಿಗರಿಗೆ ಇಲ್ಲಿ ಬರಲು ಸುಲಭ. ಗುಣಮಟ್ಟದ ಆಹಾರ ಮತ್ತು ವಸತಿ ಸೌಲಭ್ಯಗಳು ದೊರೆಯುತ್ತವೆ. ಸುಂದರವಾದ ಸೂರ್ಯಾಸ್ತ ದೃಶ್ಯವನ್ನು ಉಣಬಡಿಸುವ ಈ ತೀರ ಮನಸ್ಸಿನ ದುಗುಡವನ್ನು ನಿವಾರಿಸುತ್ತದೆ.

PC:en.wikipedia.org

ಮರಾರಿಕುಲಂ ಕಡಲ ತೀರ

ಮರಾರಿಕುಲಂ ಕಡಲ ತೀರ

ಕೇರಳದಲ್ಲಿ ನೋಡಲೇ ಬೇಕಾದ ಸಮುದ್ರ ತೀರದಲ್ಲಿ ಮರಾರಿಕುಲಂ ಸಹ ಒಂದು. ಅಲಪ್ಪುಳ ನಗರ ವ್ಯಾಪ್ತಿಯಲ್ಲಿ ಬರುವ ಮರಾರಿಕುಲಂ ಹಳ್ಳಿಯಲ್ಲಿ ಬರುತ್ತದೆ. ಹಳದಿ ಮರಳಿನ ದಡವನ್ನು ಹೊಂದಿರುವ ಈ ಕಡಲು, ಪ್ರವಾಸಿಗನಿಗೊಂದು ಧನ್ಯತೆಯ ಭಾವ ಮೂಡಿಸುತ್ತದೆ. ಬೆಂಗಳೂರಿನಿಂದ 584 ಕಿ.ಮೀ ದೂರದಲ್ಲಿರುವ ಈ ತಾಣದ ಸುತ್ತ ಹಲವಾರು ಪುರಾತನ ದೇವಾಲಯಗಳು ಇವೆ.

PC : en.wikipedia.org

ಚೇರೈ ಕಡಲ ತೀರ

ಚೇರೈ ಕಡಲ ತೀರ

ಬೆಂಗಳೂರಿನಿಂದ 523 ಕಿ.ಮೀ. ಹಾಗೂ ಕೊಚ್ಚಿ ಕೇಂದ್ರ ಸ್ಥಾನದಿಂದ 25 ಕಿ.ಮೀ. ವ್ಯಾಪ್ತಿಯಲ್ಲಿದೆ. ಸುಂದರವಾದ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೊಬಗನ್ನು ನೋಡಲು ಜನಜಂಗುಳಿ ಕಿಕ್ಕಿರಿದು ನಿಲ್ಲುತ್ತವೆ. ಸದಾ ಕಾಲ ಅಲೆಯ ಅಬ್ಬರ ಹೆಚ್ಚಾಗಿರುವುದರಿಂದ ಇಲ್ಲಿ ಕೊಂಚ ಜಾಗರೂಕತೆಯಲ್ಲಿ ಇರಬೇಕು. ಜಲಚರಗಳ ಆಹಾರ ಪದಾರ್ಥಗಳು ಬಹಳ ವಿಶೇಷವಾಗಿ ಸಿಗುವುದರಿಂದ ಅದನ್ನು ಸವಿಯಲು ಮರೆಯದಿರಿ. ಹಾಗೆಯೇ ಇಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.

PC : en.wikipedia.org

ಕಪೀಲ್ ಕಡಲ ತೀರ

ಕಪೀಲ್ ಕಡಲ ತೀರ

ಬೆಂಗಳೂರಿನಿಂದ 683 ಕಿ.ಮೀ. ದೂರದಲ್ಲಿರುವ ಈ ಸಮುದ್ರ ತೀರ ಇತರ ಸಮುದ್ರ ತೀರಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಸಮುದ್ರ ತೀರದಲ್ಲಿ ಸೂರ್ಯಾಸ್ತದ ಸೌಂದರ್ಯವನ್ನು ನೋಡಲೇ ಬೇಕು. ಕಡಲ ತೀರದ ಸಮೀಪವೇ ಒಂದು ಹಿನ್ನೀರಿನ ತಾಣವಿದೆ. ಇಲ್ಲಿ ನೀರಿನ ಆಟ, ಬೋಟ್ ರೈಡಿಂಗ್ ಹಾಗೂ ಸೂರ್ಯನ ಕಿರಣಗಳ ಸ್ನಾನ ಮಾಡಲು ಪ್ರಸಿದ್ಧ ಸ್ಥಳ.ಕಪಿಲ ಲೇಕ್, ವರ್ಕಲಾ

PC : en.wikipedia.org

ವರ್ಕಲಾ ಕಡಲ ತೀರ

ವರ್ಕಲಾ ಕಡಲ ತೀರ

ಬೆಂಗಳೂರಿನಿಂದ 680 ಕಿ.ಮೀ. ದೂರದಲ್ಲಿರುವ ವರ್ಕಲಾ ಸಮುದ್ರ ತೀರಕ್ಕೆ ಪಾಪನಾಸಮ್ ಕಡಲು ಎಂತಲೂ ಕರೆಯುತ್ತಾರೆ. ಇದು ಬಹಳ ಶುದ್ಧ ಹಾಗೂ ಸ್ವಚ್ಛವಾದ ಕಡಲ ತೀರ ಎಂದು ಕರೆಯುತ್ತಾರೆ. ಇಲ್ಲಿ ಒಮ್ಮೆ ಮುಳುಗೆದ್ದರೆ ನಮ್ಮ ಪಾಪವೆಲ್ಲಾ ಶಮನವಾಗುತ್ತದೆ ಎನ್ನುವ ಪ್ರತೀತಿ ಇದೆ. ಜನ ಜಂಗುಳಿ ಇಲ್ಲದ ಈ ತೀರ ಈಜಲು ಹಾಗೂ ನೀರಿನ ಆಟ ಆಡಲು ಸೂಕ್ತ ಜಾಗ.

PC : en.wikipedia.org

ಬೈಪೊರೆ ಕಡಲ ತೀರ

ಬೈಪೊರೆ ಕಡಲ ತೀರ

ಬೆಂಗಳೂರಿನಿಂದ 372.8 ಕಿ.ಮೀ. ಮತ್ತು ಕ್ಯಾಲಿಕಟ್‍ನಿಂದ 10 ಕಿ.ಮೀ. ದೂರದಲ್ಲಿದೆ. ಕೇರಳದ ಕೊಚ್ಚಿಯ ನಂತರ ಎರಡನೇ ಅತಿದೊಡ್ಡ ಬಂದರು ಎಂಬ ಹಿರಿಮೆಗೆ ಬೈಪೊರೆ ಪಾತ್ರವಾಗಿದೆ. ಪುರಾತನ ಕಾಲದಿಂದಲೂ ಇದು ವ್ಯಾಪಾರ ಕೇಂದ್ರವಾಗಿತ್ತು. ಹಾಗಾಗಿ ಇದನ್ನು ವಾಣಿಜ್ಯ ಕೇಂದ್ರ ಎಂದು ಕರೆಯುತ್ತಾರೆ. ಹಡಗು ನಿರ್ಮಾಣ ಕೇಂದ್ರವಾದ ಈ ತೀರದ ಉದ್ದಕ್ಕೂ ಕಲ್ಲಿನ ಸೇತುವೆ, ಲೈಟ್ ಹೌಸ್ ಹಾಗೂ ಮೀನುಗಾರಿಕೆ ಪ್ರಸಿದ್ಧಿ ಪಡೆದಿರುವುದನ್ನು ಕಾಣಬಹುದು.

PC : en.wikipedia.org

Read more about: bangalore kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X