Search
  • Follow NativePlanet
Share
» »ದಕ್ಷಿಣ ಭಾರತದ ಟಾಪ್ 7 ಜಲಪಾತಗಳು

ದಕ್ಷಿಣ ಭಾರತದ ಟಾಪ್ 7 ಜಲಪಾತಗಳು

ಜಲಪಾತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಜಲಪಾತಗಳನ್ನು ಕಾಣುವುದೆಂದರೆ ಬಲು ಇಷ್ಟ. ಹಚ್ಚ ಹಸಿರಿನ ಮಧ್ಯೆ ಹಾಲಿನಂತೆ ಧುಮುಕುತ್ತಿರುವ ಜಲಪಾತವನ್ನು ಒಮ್ಮೆ ಕಾಣುತ್ತಾ ಪ್ರಪಂಚವೇ ಮರೆಯಬೇಕು ಎಂಬ ಆಸೆ ಮೂಡುತ್ತ

ಭಾರತ ದೇಶವೆಂದರೆ ತನ್ನ ಸಂಸ್ಕøತಿಗೆ, ಸಂಪ್ರದಾಯಕ್ಕೆ ಹೆಸರುವಾಸಿಯಾಗಿರುವ ಪುಣ್ಯ ದೇಶ. ಇಲ್ಲಿ ಹಲವಾರು ಬಗೆ ಬೃಹತ್ ಕಟ್ಟಡಗಳು, ನಗರಗಳು, ದೇವಾಲಯಗಳು, ಪ್ರಕೃತಿ ರಮಣೀಯತೆ, ಆಭಯಾರಣ್ಯಗಳು ಇನ್ನೂ ಹಲವಾರು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ಭಾರತದ ಜಲಪಾತಗಳೆಂದರೆ ವಿದೇಶಿಯರಿಗೂ ಅಚ್ಚು ಮೆಚ್ಚು.

ಜಲಪಾತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಜಲಪಾತಗಳನ್ನು ಕಾಣುವುದೆಂದರೆ ಬಲು ಇಷ್ಟ. ಹಚ್ಚ ಹಸಿರಿನ ಮಧ್ಯೆ ಹಾಲಿನಂತೆ ಧುಮುಕುತ್ತಿರುವ ಜಲಪಾತವನ್ನು ಒಮ್ಮೆ ಕಾಣುತ್ತಾ ಪ್ರಪಂಚವೇ ಮರೆಯಬೇಕು ಎಂಬ ಆಸೆ ಮೂಡುತ್ತದೆ.

ನಗರ ಪ್ರದೇಶದಲ್ಲಿದವರಿಗೆ ಒಮ್ಮೆ ಸುಂದರವಾದ ಪ್ರಕೃತಿಯನ್ನು ಸವಿಯಬೇಕು ಎಂದು ಅನಿಸದರೆ ಜಲಪಾತವಿರುವ ತಾಣಕ್ಕೆ ಒಮ್ಮೆ ಭೇಟಿ ಕೊಡಿ. ನಿಮ್ಮ ದಿನಿತ್ಯದ ಒತ್ತಡವೆಲ್ಲವೂ ಮರೆತು ಕೆಲವು ಕ್ಷಣಗಳ ಕಾಲ ಆನಂದದಿಂದ ಕಾಲಕಳೆದು ಬನ್ನಿ..

ಅತ್ತಿರಪಿಲ್ಲಿ ಜಲಪಾತ (ಕೇರಳ)

ಅತ್ತಿರಪಿಲ್ಲಿ ಜಲಪಾತ (ಕೇರಳ)

ಕೇರಳ ಎಂದರೆಯೇ ಒಂದು ಸೊಬಗು. ಅಲ್ಲಿನ ಸೊಬಗಿಗೆ ದೇಶಿಯರೇ ಅಲ್ಲ ವಿದೇಶಿಯರು ಕೂಡ ಮರುಳು ಮಾಡುವ ಅದ್ಭುತ ಸೌಂದರ್ಯ ಆ ತಾಣಕ್ಕೆ ಇದೆ. ಅದರಲ್ಲಿ ಈ ಅತ್ತಿರಪಿಲ್ಲಿ ಜಲಪಾತವು ಒಂದು. ಈ ಜಲಪಾತವು ತನ್ನ ಅಪೂರ್ವವಾದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತದೆ.


PC:shine oa

ಅತ್ತಿರಪಿಲ್ಲಿ ಜಲಪಾತ (ಕೇರಳ)

ಅತ್ತಿರಪಿಲ್ಲಿ ಜಲಪಾತ (ಕೇರಳ)

ದಟ್ಟವಾದ ಕಾಡು, ಸಮೃದ್ಧವಾದ ಹಸಿರು ಸಸ್ಯಗಳು, ವಿವಿಧ ಪ್ರಾಣಿ ಸಂಕುಲಗಳು, ಅಪರೂಪ ಜಾತಿಯ ಸಸ್ಯ ಸಂಕುಲಗಳನ್ನು ಇಲ್ಲಿ ಕಾಣಬಹುದು. ಒಟ್ಟಾಗಿ ಪ್ರಕೃತಿ ಪ್ರೇಮಿಗಳಿಗೆ ಈ ಅತ್ತಿರಪಿಲ್ಲಿ ಜಲಪಾತದ ಸೌಂದರ್ಯಕ್ಕೆ ಮರುಳಾಗದೇ ಇರಲಾರರು.

PC:Archana Menon

ಹೊಗೆನಕಲ್ ಜಲಪಾತ (ಕರ್ನಾಟಕ)

ಹೊಗೆನಕಲ್ ಜಲಪಾತ (ಕರ್ನಾಟಕ)

ನಮ್ಮ ಕರ್ನಾಟಕದ ಹೊಗೆನಕಲ್ ಜಲಪಾತವು ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಜಲಪಾತಗಳಲ್ಲಿ ಇದೂ ಕೂಡ ಒಂದು. ಇಲ್ಲಿನ ಪ್ರಕೃತಿಯು ಪ್ರವಾಸಿಗರನ್ನು ಮರುಳು ಮಾಡದೇ ಇರದು. ಈ ಜಲಪಾತವು 'ಹಾಗ್' ಅಂದರೆ ಹೊಗೆ ಮತ್ತು 'ಕಲ್" ಎಂದರೆ ಬಂಡೆಗಳು.


PC:Sankara Subramanian

ಹೊಗೆನಕಲ್ ಜಲಪಾತ (ಕರ್ನಾಟಕ)

ಹೊಗೆನಕಲ್ ಜಲಪಾತ (ಕರ್ನಾಟಕ)

ಈ ಹೆಸರು ಹೇಗೆ ಬಂತು ಎಂದರೆ ಜಲಪಾತವು ಕೆಳಗೆ ಬಂಡೆಗಳ ಹಾಸಿಗೆಗೆ ಹೊಡೆದಾಗ ತೀವ್ರವಾದ ನೀರಿನಿಂದ ಹೊಗೆಯು ಹೊರಹೊಮ್ಮುತ್ತದೆ. ಈ ಹೊಗೆಯ ಬೆಚ್ಚಗಿನ ನೋಟವನ್ನು ಪ್ರವಾಸಿಗರಿಗೆ ನೀಡುತ್ತದೆ. ಈ ಸುಂದರವಾದ ಜಲಪಾತದಲ್ಲಿ ಬೋಟಿಂಗ್ ಕೂಡ ಆನಂದಿಸಬಹುದಾಗಿದೆ.


PC:Sankara Subramanian

ಸೂಚಿಪರಾ ಜಲಪಾತ (ಕೇರಳ)

ಸೂಚಿಪರಾ ಜಲಪಾತ (ಕೇರಳ)

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಡಿಯಿಂದ ಸುಮಾರು 13. ಕಿ,ಮೀ ದೂರದಲ್ಲಿರುವ ಈ ಸೂಚಿಪರಾ ಜಲಪಾತವು ಕೇರಳ ಮತ್ತೊಂದು ಸುಂದರವಾದ ಜಲಪಾತವಾಗಿದೆ. ಇದರ ವಿಶಿಷ್ಟತೆ ಏನೆಂದರೆ ಈ ಜಲಪಾತವು ಮೂರು ಹಂತದ ಜಲಪಾತವಾಗಿರುವುದು.

PC:Sankara Subramanian

ಸೂಚಿಪರಾ ಜಲಪಾತ (ಕೇರಳ)

ಸೂಚಿಪರಾ ಜಲಪಾತ (ಕೇರಳ)

ಈ ಸುಂದರವಾದ ಸೂಚಿಪರಾ ಜಲಪಾತಕ್ಕೆ ಭೇಟಿ ನೀಡಲು ಸುಮಾರು 1 ಕಿ,ಮೀ ಯಷ್ಟು ಸಣ್ಣ ಮತ್ತು ಆಕಾಶದ ಚಾರಣವನ್ನು ಕೈಗೊಳ್ಳಬೇಕಾಗುತ್ತದೆ. ಬಂಡೆಗಳಿಗೆ ರಭಸವಾಗಿ ಹೊಡೆಯುವ ಜಲಪಾತವು ಪ್ರವಾಸಿಗರಿಗೆ ಒಂದು ಒಳ್ಳೆ ಹಬ್ಬದಂತೆ ಇರುತ್ತದೆ.

PC:Sankara Subramanian

ಹೆಬ್ಬೆ ಜಲಪಾತ (ಕರ್ನಾಟಕ)

ಹೆಬ್ಬೆ ಜಲಪಾತ (ಕರ್ನಾಟಕ)

ಕರ್ನಾಟಕದಲ್ಲಿನ ಅತ್ಯಂತ ಸುಂದರವಾದ ಜಲಪಾತವೆಂದರೆ ಅದು ಹೆಬ್ಬೆ ಜಲಪಾತ. ಇಲ್ಲಿ ಕೂಡ ದಟ್ಟವಾದ ಹಸಿರು ಕಾಡುಗಳ ಮಧ್ಯೆ ಈ ಜಲಪಾತವು ಹರಿಯುತ್ತದೆ. ಚಿಕ್ಕಮಂಗಳೂರಿನ ಕಾಫಿ ತೋಟಗಳ ಸುವಾಸನೆಯು ಈ ಸ್ಥಳಕ್ಕೆ ಸ್ವಲ್ಪ ಮಟ್ಟಿಗೆ ಸೌಂದರ್ಯವನ್ನು ಪ್ರವಾಸಿಗರಿಗೆ ರಸ ದೌತಣವನ್ನು ನೀಡುತ್ತದೆ.

PC:Kavya Bhat

ಹೆಬ್ಬೆ ಜಲಪಾತ (ಕರ್ನಾಟಕ)

ಹೆಬ್ಬೆ ಜಲಪಾತ (ಕರ್ನಾಟಕ)

ವಿಷೇಶವೆನೆಂದರೆ ಈ ಪವಿತ್ರವಾದ ಜಲಪಾತಕ್ಕೆ ಅದೆಷ್ಟೂ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇಲ್ಲಿನ ಜಲಪಾತಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.


PC:Ashwin Kumar

ಶಿವನ ಸಮುದ್ರ (ಕರ್ನಾಟಕ)

ಶಿವನ ಸಮುದ್ರ (ಕರ್ನಾಟಕ)

ಈ ಸುಂದರವಾದ ಜಲಪಾತವಿರುವುದು ಕೂಡ ನಮ್ಮ ಕರ್ನಾಟಕದಲ್ಲಿಯೇ. ಈ ಜಲಪಾತವು ಕರ್ನಾಟಕವೇ ಅಲ್ಲದೇ ದೇಶದ ಹಲವಾರು ಭಾಗಗಳಿಂದ ಈ ಸುಂದರವಾದ ಜಲಪಾತಕ್ಕೆ ಭೇಟಿ ನೀಡುತ್ತಾರೆ. ಶಿವನ ಸಮುದ್ರ ಜಲಪಾತವು ಭಾರತದ ಅತ್ಯಂತ ಶಕ್ತಿಶಾಲಿ ಜಲಪಾತಗಳಲ್ಲಿ ಒಂದಾಗಿದೆ.


PC:sanchantr

ಶಿವನ ಸಮುದ್ರ (ಕರ್ನಾಟಕ)

ಶಿವನ ಸಮುದ್ರ (ಕರ್ನಾಟಕ)

ಕಾವೇರಿ ನದಿಯನ್ನು ಎರಡು ಭಾಗಗಳಾಗಿ ವಿಭಜಿಸಿ ಎರಡು ಜಲಪಾತಗಳನ್ನು ಸೃಷ್ಠಿಸುತ್ತದೆ. ಜಲಪಾತದ ಸುತ್ತಲೂ ಆಳವಾದ ದಟ್ಟವಾದ ಮರಗಳು ಸುತ್ತಮುತ್ತಲಿನ ಪ್ರದೇಶದ ಸೌಂದರ್ಯವು ಕಣ್ಣಿಗೆ ರಾಚುವಂತೆ ಕಾಣುತ್ತದೆ.

PC:Arun Prabhu

ಮೀನ್ಮಟ್ಟಿ ಜಲಪಾತ (ಕೇರಳ)

ಮೀನ್ಮಟ್ಟಿ ಜಲಪಾತ (ಕೇರಳ)

ಕೇರಳದ ಮತ್ತೊಂದು ಸುಂದರವಾದ ಜಲಪಾತವೆಂದರೆ ಅದು ಮೀನ್ಮಟ್ಟಿ ಜಲಪಾತ. 2 ಕಿ,ಮೀ ಚಾರಣವು ನಿಮ್ಮನ್ನು ಭಾರತದ ಅತ್ಯಂತ ಎತ್ತರದ ಮತ್ತು ದೊಡ್ಡ ಜಲಪಾತಗಳಲ್ಲಿ ಒಂದಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಈ ಜಲಪಾತವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

PC:Suraj Baadkar

ಮೀನ್ಮಟ್ಟಿ ಜಲಪಾತ (ಕೇರಳ)

ಮೀನ್ಮಟ್ಟಿ ಜಲಪಾತ (ಕೇರಳ)

ಈ ಮೂರು ಹಂತದ ಜಲಪಾತವು ನಿಮಗೆ ಮೂರು ಹಂತಗಳಲ್ಲಿ ಆರೋಹಣವಾಗಿ ಗೋಚರಿಸುತ್ತದೆ. ಇಲ್ಲಿ ಆಹ್ಲಾದಕರ ವಾತಾವರಣ ಹಾಗೂ ಜಲಪಾತಕ್ಕೆ ಸುತ್ತವರೆದಿರುವ ಪ್ರಕೃತಿ ವಿನ್ಯಾಸವನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ.

PC:Dinesh Valke

ಜೋಗ ಜಲಪಾತ

ಜೋಗ ಜಲಪಾತ

ಎಲ್ಲಾ ಜಲಪಾತಗಳಿಗಿಂತಲೂ ಹೆಸರುವಾಸಿಯಾಗಿರುವ ಜಲಪಾತವೆಂದರೆ ಅದು ಜೋಗ ಜಲಪಾತ. ಕರ್ನಾಟಕದ ಹೆಮ್ಮೆಯ ಜಲಪಾತ ಎಂದರೆ ತಪ್ಪಾಗಲಾರದು. ನಾಲ್ಕು ಕಡೆಯ ನೀರನ್ನು ಒಟ್ಟಿಗೆ ವಿಲೀನಗೊಳಿಸುವುದುರ ಮೂಲಕ ಒಂದು ನೈಸರ್ಗಿಕವಾದ ಅದ್ಭುತವನ್ನು ಸೃಷ್ಟಿಸುತ್ತದೆ. ಈ ಅಪೂರ್ವವಾದ ದೃಶ್ಯವನ್ನು ಕಣ್ಣಾರೆ ಕಂಡೆ ಆನಂದಿಸಬೇಕು.

PC:Nagesh Jayaraman

ಜೋಗ ಜಲಪಾತ

ಜೋಗ ಜಲಪಾತ

ರಾಜಾ, ರಾಣಿ, ರಾಕೆಟ್ ಮತ್ತು ರೋವರ್ ಎಂಬ ನಾಲ್ಕು ಕಮಾನುಗಳು. ಅವುಗಳನ್ನು ಒಗ್ಗೂಡಿ ಒಂದು ಭವ್ಯವಾದ ಜಲಪಾತವನ್ನು ರುಪಿಸುತ್ತದೆ. ಜೋಗ ಜಲಪಾತವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಸುಮಾರು 253 ಮೀಟರ್ ಎತ್ತರದಿಂದ ಕೆಳಗಿಳಿಯುವ ಜಲಪಾತವು ಸಮಗ್ರವಾದ ನೋಟವನ್ನು ಬೀರುತ್ತದೆ.

PC:Satish Somasundaram

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X