Search
  • Follow NativePlanet
Share
» »ಸಾಯುವ ಮುಂಚೆ ಈ ಸುಂದರವಾದ ಹಳ್ಳಿಗಳಿಗೆ ಭೇಟಿ ನೀಡಬೇಕಂತೆ

ಸಾಯುವ ಮುಂಚೆ ಈ ಸುಂದರವಾದ ಹಳ್ಳಿಗಳಿಗೆ ಭೇಟಿ ನೀಡಬೇಕಂತೆ

ಹಳ್ಳಿ ಭಾರತದ ಜೀವಾಳ. ಹಳ್ಳಿಗಳ ಜೀವನ ಆತ್ಯಂತ ಸುಂದರವಾದುದು ಕಪಟ, ಆಡಂಬರವಿಲ್ಲದ ಜೀವನ ಸಾಗಿಸುವ ಸುಂದರ ಮನಸ್ಸಿನವರು. 2011ರ ಜನಗಣತಿಯ ಪ್ರಕಾರ 68,84% ಭಾರತೀಯರು ವಿವಿಧ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಹಲವಾರು ಸೌಲಭ್ಯದ ಕೊರತೆ ಇದ್ದರೂ ಕ

ಹಳ್ಳಿ ಭಾರತದ ಜೀವಾಳ. ಹಳ್ಳಿಗಳ ಜೀವನ ಆತ್ಯಂತ ಸುಂದರವಾದುದು ಕಪಟ, ಆಡಂಬರವಿಲ್ಲದ ಜೀವನ ಸಾಗಿಸುವ ಸುಂದರ ಮನಸ್ಸಿನವರು. 2011ರ ಜನಗಣತಿಯ ಪ್ರಕಾರ 68,84% ಭಾರತೀಯರು ವಿವಿಧ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಹಲವಾರು ಸೌಲಭ್ಯದ ಕೊರತೆ ಇದ್ದರೂ ಕೂಡ ಭೂಮಿ ತಾಯಿಯನ್ನು ನಂಬಿ ಬದುಕುವ ಜನರು.

ಹಳ್ಳಿಗಳಲ್ಲಿ ತಮ್ಮದೇ ಆದ ಹಲವಾರು ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನೂ ರೂಢಿಸಿಕೊಂಡಿರುತ್ತಾರೆ. ವಾರಾಂತ್ಯದಲ್ಲಾದರೂ ಯಾವುದೇ ಜನ ದಟ್ಟನೆ ಇಲ್ಲದ, ಪ್ರಶಾಂತವಾದ ವಾತಾವರಣಕ್ಕೆ ಪ್ರವಾಸಕ್ಕೆ ಹೋಗಬೇಕು ಎಂದು ನಿಮ್ಮ ಮನಸ್ಸು ಹತೊರೆಯುತ್ತಿದ್ದರೆ ಲೇಖನದಲ್ಲಿರುವ ಹಳ್ಳಿಗೆ ಒಮ್ಮೆ ಭೇಟಿ ಕೊಡಿ. ಈ ಲೇಖನದಲ್ಲಿರುವ ಹಳ್ಳಿಯೂ ಕೂಡ ಅತ್ಯಂತ ಸುಂದರವಾದ ಪ್ರವಾಸ ತಾಣ. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಹಳ್ಳಿಗಳಂತೆ ಇವು.

ಪ್ರಸ್ತುತ ಲೇಖನದಲ್ಲಿ ಸುಂದರವಾದ ಭಾರತದ 7 ಹಳ್ಳಿಗಳ ಬಗ್ಗೆ ತಿಳಿಯೋಣ.

ಹಿಮಾಚಲ ಪ್ರದೇಶದ ಮಲಾನಾ

ಹಿಮಾಚಲ ಪ್ರದೇಶದ ಮಲಾನಾ

ಹಿಮಾಚಲ ಪ್ರದೇಶದ ಸುಂದರವಾದ ಈ ಹಳ್ಳಿಯಲ್ಲಿ ಹಲವಾರು ರಹಸ್ಯ ಉಳ್ಳ ಪರ್ವತಗಳಿವೆ. ಅವುಗಳನ್ನು ಭೇದಿಸಲು ಅತ್ಯುತ್ತಮವಾದ ಟ್ರೆಕ್ಕಿಂಗ್ ಕೈಗೋಳ್ಳಬಹುದು. ಭಾರತದ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಮಲಾನ ಒಂದು.

ಹಲವಾರು ರಹಸ್ಯವೇ ಅಲ್ಲದೆ ರಮಣೀಯ ದೃಶ್ಯ ವೈಭವವನ್ನು ಅಲ್ಲಿ ಕಣ್ಣಾರೆ ಕಂಡೇ ಅನುಭವಿಸಬೇಕಾಗಿದೆ. ತಂಪಾದ ಗಾಳಿ, ಸುಂದರವಾದ ಪರ್ವತಗಳು, ಪ್ರಶಾಂತ ವಾತಾವರಣ ಅದ್ಭುತ ತಾಣ. ವಿಶಿಷ್ಟವೆನೆಂದರೆ ಅಲೆಕ್ಸಾಂಡರ್‍ನ ಸೈನ್ಯದ ಬುಡಕಟ್ಟು ಜನಾಂಗದವರು ಈ ಸುಂದರ ಕಣಿವೆಗಳನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರಂತೆ ಎಂದು ಇತಿಹಾಸವಿದೆ.

ಈ ಸುಂದರವಾದ ಹಳ್ಳಿಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಮಾರ್ಚ್‍ನಿಂದ ಜೂನ್ ಹಾಗೂ ಸೆಪ್ಟೆಂಬರ್‍ನಿಂದ ಅಕ್ಟೋಬರ್. ಉಳಿಯಲು ಅತಿಥಿ ಗೃಹಗಳಿವೆ.


PC: Joginder Pathak

ಮೇವಾಲಿನಾಂಗ್, ಮೇಘಾಲಯದಲ್ಲಿ ಲಿವಿಂಗ್ ರೂಟ್ ಸೇತುವೆ

ಮೇವಾಲಿನಾಂಗ್, ಮೇಘಾಲಯದಲ್ಲಿ ಲಿವಿಂಗ್ ರೂಟ್ ಸೇತುವೆ

ಮೇಘಾಲಯದಲ್ಲಿರುವ ಬುಡಕಟ್ಟು, ಮಂಜುಗಡ್ಡೆ, ಪ್ರಾಚೀನ ಮತ್ತು ಸ್ವಚ್ಛವಾದ ಶುದ್ದವಾದ ಹಳ್ಳಿಯಾಗಿದೆ . 2003 ರಲ್ಲಿ ಏಷ್ಯಾದಲ್ಲಿ ಸ್ವಚ್ಚವಾದ ಗ್ರಾಮವೆಂಬ ಹೆಗ್ಗಳಿಕೆ ಪಡೆದಿದೆ. ಇಲ್ಲೂ ಕೂಡ ದಟ್ಟವಾದ ಕಾಡು, ಸುಂದರವಾದ ಪ್ರಕೃತಿ, ನದಿಗಳಿವೆ. ಮರಗಳ ಬೇರುಗಳಿಂದ ವಿನ್ಯಾಸಗೊಳಿಸಲಾದ ಲಿವಿಂಗ್ ರೂಟ್ಸ್ ಸೇತುವೆಯು ನೋಡುವುದಕ್ಕೆ ಒಂದು ಮನೋಹರವಾದ ದೃಶ್ಯ. ಆಶ್ಚರ್ಯವೆನೆಂದರೆ ರೂಟ್ಸ್ ಸೇತುವೆ ಸುಮಾರು 1000 ವರ್ಷ ಹಳೆಯದು.

ಈ ಪ್ರದೇಶದ ಶ್ರೀಮಂತ ಅರಣ್ಯದಲ್ಲಿ ಜಲಪಾತಗಳು ಹಾಗೂ ಗುಹೆಗಳಿವೆ. ಈ ಪ್ರದೇಶಕ್ಕೆ ಭೇಟಿ ನೀಡಲು ಅಕ್ಟೋಬರ್‍ನಿಂದ ಏಪ್ರಿಲ್‍ನವರೆಗೆ ಉತ್ತಮವಾದ ಕಾಲವಾಗಿದೆ. ಇಲ್ಲಿ ತಂಗಲು ರೆಸ್ಟ್ ಹೌಸ್ ಹಾಗೂ 2 ಕುಠೀರಗಳು ಹೊಂದಿವೆ. ಟ್ರೆಕ್ಕಿಂಗ್ ಪ್ರೇಮಿಗಳಿಗೆ ಇದೊಂದು ಅದ್ಭುತವಾದ ಸ್ಥಳ.

PC: wikimedia.org

ನಾಕೋ,ಲಾಹೌಲ್

ನಾಕೋ,ಲಾಹೌಲ್

ನಾಕೋ ಹಳ್ಳಿಯು ಬಂಜರು ವೈಭವದಿಂದ ಕೂಡಿದ ಒಂದು ಸುಂದರವಾದ ಹಳ್ಳಿ. ಪುರಾತನವಾದ ಮಠ ಮತ್ತು ನಾಕೊ ಸರೋವರವು ಅತ್ಯಂತ ಉತ್ತಮವಾದ ಪ್ರವಾಸಿ ತಾಣ ಇಲ್ಲಿ ಬೋಟಿಂಗ್ ಕೊಡ ಮಾಡಬಹುದಾಗಿದೆ. ಇಲ್ಲಿ ಹೆಚ್ಚಾಗಿ ಕಲ್ಲಿನ ಮನೆಗಳು, ಮಠಗಳು ಮತ್ತು ಅವುಗಳ ಜಾಗಗಳನ್ನು ಪ್ರವಾಸಿಗರು ಅನ್ವೇಷಿಸಬಹುದು.

ಇಲ್ಲಿಂದ ಸುಮಾರು 70 ಕಿ,ಮೀ ದೂರದಲ್ಲಿರುವ ತಾಬೊ ತಾಣಕ್ಕೆ ಕೂಡ ಭೇಟಿ ನೀಡಬಹುದಾಗಿದೆ. 9 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ಹಳ್ಳಿಗೆ ಯುನೆಸ್ಕು ಪಂಪರೆಯ ತಾಣವಾಗಿ ಪ್ರಸಿದ್ಧಿ ಹೊಂದಿದೆ. ಈ ಸುಂದರವಾದ ಹಳ್ಳಿಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಜುಲೈ ತಿಂಗಳಿನಿಂದ ಆಗಸ್ಟ್.

PC: Shivani4692

ಝಿರೊ ಅರುಣಾಚಲ ಪ್ರದೇಶ

ಝಿರೊ ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದ ಬೆಟ್ಟಗಳಲ್ಲಿ ಅಡಗಿರುವ ಝಿರೊ ಕಣಿವೆ ಎಲ್ಲಾ ಜೀವಿಗಳನ್ನು ಹೊಂದಿರುವ ತಾಣ. ಈ ಪ್ರದೇಶದಲ್ಲಿ ಪ್ರವಾಸಿಗರು ಅನ್ವೇಷಿಸಲು ಹಲವಾರು ತಾಣಗಳಿವೆ. ಇಲ್ಲಿ ಅಪತಾನಿ ಎಂಬ ಬುಡಕಟ್ಟು ಜನಾಂಗದವರಿದ್ದಾರೆ. ಟಾಲೆ ವ್ಯಾಲಿ ಅಭಯಾರಣ್ಯ ಅರುಣಾಚಲ ಪ್ರದೇಶದ ಶ್ರೀಮಂತ ಜೈವಿಕ ವೈವಿಧ್ಯತೆಯಾಗಿದೆ.

ಇಟಾನಗರದಿಂದ ಸುಮಾರು 147 ಕಿ,ಮೀ ದೂರದಲ್ಲಿದ್ದು ಸುಮಾರು 3 ಗಂಟೆಗಳ ಕಾಲ ರಸ್ತೆಯ ಮೂಲಕ ತಲುಪಬಹುದಾಗಿದೆ. ಇಟಾನಗರದಿಂದ ಝಿರೊಕ್ಕೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಭೇಟಿ ನೀಡಲು ಉತ್ತಮವಾದ ಕಾಲವೆಂದರೆ ಮಾರ್ಚ್ ತಿಂಗಳಿನಿಂದ ಅಕ್ಟೊಬರ್ ತಿಂಗಳವರೆಗೆ ಉತ್ತಮವಾದ ಕಾಲಾವಧಿಯಾಗಿದೆ.

PC: Sukanya Ray

ಕರ್ನಾಟಕದ ಯಾಣ

ಕರ್ನಾಟಕದ ಯಾಣ

ಸಹ್ಯಾದ್ರಿ ಪರ್ವತಗಳನ್ನು ಹೊಂದಿರುವ ಯಾಣವು ತನ್ನ ಅತ್ಯುನ್ನತವಾದ ಏಕಶಿಲಾ ರಚನೆಯೊಂದಿಗೆ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಗೋಕರ್ಣದ ಸನ್ನಿ ಕರಾವಳಿ ಗ್ರಾಮದಿಂದ ಸುಮಾರು 40 ಕಿ.ಮೀ ದೂರದಲ್ಲಿ ಒಂದು ಸುಂದರವಾದ ಹಳ್ಳಿ ಇದೆ. ಆ ಹಳ್ಳಿಯಲ್ಲಿ ಹಲವಾರು ರಹಸ್ಯಗಳಿವೆ.

ಒಂದು ಬೃಹತ್ ಪರ್ವತದಲ್ಲಿ ಮಹಾ ಶಿವನು ಲಿಂಗ ಸ್ವರೂಪಿಯಾಗಿ ತನ್ನ ಪತ್ನಿ ಪಾರ್ವತಿಯೊಂದಿಗೆ ನೆಲೆಸಿದ್ದಾನೆ. ಟ್ರೆಕ್ಕಿಂಗ್ ಪ್ರೇಮಿಗಳು ಇಲ್ಲಿನ ಅದ್ಭುತವಾದ ಬೆಟ್ಟಗಳ ಪ್ರವಾಸವನ್ನು ಸವಿಯಬಹುದು. ಸುತ್ತಲು ಹಚ್ಚ ಹಸಿರಿನ ಪ್ರದೇಶ ಮತ್ತು ವಿಬೂತಿ ಜಲಪಾತಗಳು ಪ್ರವಾಸಿಗರ ಮನಸೊರೆಗೊಳಿಸುತ್ತದೆ. ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಕಾಲವೆಂದರೆ ಜನವರಿ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು.

PC: Supriya joon

ತಮಿಳುನಾಡಿನ ವಲ್ಪಾರೈ

ತಮಿಳುನಾಡಿನ ವಲ್ಪಾರೈ

ವಲ್ಪಾರೈ ತಮಿಳುನಾಡಿನ ಸುಂದರವಾದ ಹಳ್ಳಿ. ಈ ಹಳ್ಳಿಯ ರಸ್ತೆಗಳಲ್ಲಿ ಹಸಿರಿನಿಂದ ಕೂಡಿದ ಪರ್ವತಗಳನ್ನು ಕಾಣಬಹುದಾಗಿದೆ. ಸಮೃದ್ಧವಾದ ವನ್ಯಜೀವಿ, ಬುಡಕಟ್ಟು ಕೋಣೆ, ನೆವೆರ್‍ಂಡಿಂಗ್ ಚಹಾ ಎಸ್ಟೇಟ್‍ಗಳು, ಬೆಳ್ಳಿಯ ಜಲಪಾತಗಳು ಇನ್ನೂ ಹಲವಾರು ಪ್ರಸಿದ್ಧವಾದ ತಾಣಗಳಿವೆ. ಇವು ಪ್ರವಾಸಿಗರನ್ನು ಮತ್ತೋಮ್ಮೆ ಕೈ ಬೀಸಿ ಕರೆಯುತ್ತದೆ.

ಇಲ್ಲಿಗೆ ಬರುವ ಟ್ರೆಕ್ಕಿಂಗ್ ಪ್ರೇಮಿಗಳಿಂಗಂತೂ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಸೆಪ್ಟೆಂಬರ್ ತಿಂಗಳಿನಿಂದ ಮೇ. ಈ ಸುಂದರವಾದ ಪ್ರದೇಶವು ಕೊಯಮುತ್ತೂರಿನಿಂದ ಸುಮಾರು 104 ಕಿ,ಮೀ ದೂರದಲ್ಲಿದೆ. ಪೊಲ್ಲಾಚಿಯಿಂದ ಸುಮಾರು 64 ಕಿ,ಮೀ ಹಾಗೂ ಎರ್ನಾಕುಲಂನಿಂದ 110 ಕಿ,ಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಕೊಯಮತ್ತೂರಿನಲ್ಲಿದೆ.

PC: Ashish Gupta

ಕುಮಾನ್ ಮುನ್ಸಿರಿಯಾದ 5 ಚಿಮಣಿಗಳು

ಕುಮಾನ್ ಮುನ್ಸಿರಿಯಾದ 5 ಚಿಮಣಿಗಳು

ಳ್ಳಿಯು ಉತ್ತರಖಂಡನಲ್ಲಿ ಇದೆ. ಇಲ್ಲಿ ಸುಂದರವಾದ ಕುಮಾವೂನ್ ಬೆಟ್ಟಗಳಲ್ಲಿ ಹಚ್ಚ ಹಸಿರಿನ ಸಮೃದ್ಧವಾದ ವನ ಹಾಗೂ ಮಂಜುಗಡ್ಡೆಯಿಂದ ಅವೃತ್ತವಾಗಿದೆ. ಸ್ನೋಕ್ಯಾಪ್ಡ್ ಪರ್ವತಗಳು ಮತ್ತು ದಟ್ಟವಾದ ಕಾಡುಗಳಲ್ಲಿ ಗೋರಿಗಂಗಾ ನದಿಯು ಹರಿಯುತ್ತದೆ. ಈ ಮನೋಹರವಾದ ಸ್ಥಳವು ಪ್ರಕೃತಿ ಪ್ರೇಮಿಗಳಿಗೆ ಹಾಗೂ ಸಾಹಸಿಗಳಿಗೆ ಸಂತೋಷವನ್ನು ಉಂಟು ಮಾಡುವ ಸ್ಥಳ.

ಟ್ರೆಕ್ಕಿಂಗ್ ಮಾಡಲು ಬಯಸುವವರಿಗೆ ಮಿಲಾನ್ ಹಾಗೂ ರಲಾಮ್ಗೆ ಗ್ಲೇಸಿಯರ್ ಪರ್ವತದ ಸೂಕ್ತವಾದ ಪರ್ವತಗಳಾಗಿವೆ. ಸೂರ್ಯಾಸ್ತದ ಸಮಯದಲ್ಲಿ ಸ್ವರ್ಗದಂತೆ ಗೋಚರಿಸುವ ಈ ತಾಣವು ಒಮ್ಮೆ ನೋಡಲೇಬೇಕಾದ ತಾಣವಾಗಿದೆ.

ಈ ಸುಂದರವಾದ ಹಳ್ಳಿಗೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಮಾರ್ಚ್ ತಿಂಗಳಿನಿಂದ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ. ದೆಹಲಿಯಿಂದ ಸುಮಾರು 650 ಕಿ,ಮೀ ದೂರದಲ್ಲಿ ಈ ಸುಂದರವಾದ ಹಳ್ಳಿಯಿದೆ. ಈ ಹಳ್ಳಿಯಲ್ಲಿ ಉಳಿಯಲು ಹಲವಾರು ಆರಾಮದಾಯಕ ಅತಿಥಿಗೃಹವಿದೆ.


PC: Ankur P

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X