Search
  • Follow NativePlanet
Share
» »ಪದೇ ಪದೇ ನೆನಪಾಗುವ ಆಗುಂಬೆಯ ತಾಣಗಳು

ಪದೇ ಪದೇ ನೆನಪಾಗುವ ಆಗುಂಬೆಯ ತಾಣಗಳು

ಸಹ್ಯಾದ್ರಿ ಶ್ರೇಣಿಯಲ್ಲಿ ಕಂಗೊಳಿಸುವ ಗರಿಧಾಮ ಆಗುಂಬೆ. ತೀರ್ಥಹಳ್ಳಿ ತಾಲೂಕಿನ ಆವೃತ್ತಿಯಲ್ಲಿರುವ ಈ ತಾಣದ ಸೌಂದರ್ಯ ಅದ್ವಿತೀಯವಾದದ್ದು.

By Divya

ಸಹ್ಯಾದ್ರಿ ಶ್ರೇಣಿಯಲ್ಲಿ ಕಂಗೊಳಿಸುವ ಗರಿಧಾಮ ಆಗುಂಬೆ. ತೀರ್ಥಹಳ್ಳಿ ತಾಲೂಕಿನ ಆವೃತ್ತಿಯಲ್ಲಿರುವ ಈ ತಾಣದ ಸೌಂದರ್ಯ ಅದ್ವಿತೀಯವಾದದ್ದು. ಸೂರ್ಯಾಸ್ತದ ಸುಂದರ ದೃಶ್ಯಕ್ಕೆ ಹೆಸರಾದ ಈ ತಾಣ ಸುತ್ತಲೂ ಹಸಿರು ಸಿರಿಯಿಂದ ಮೆರೆಯುತ್ತದೆ. ಹಸಿರು ತಪ್ಪಲು, ನಿರ್ಮಲ ಆಕಾಶದಲ್ಲಿ ಉಂಟಾಗುವ ಸೂರ್ಯೋದಯ ಹಾಗೂ ಸೂರ್ಯಾಸ್ತದ ಪರಿ ಬಣ್ಣಿಸಲು ಅಸಾಧ್ಯ. ಇದರ ಸೊಬಗನ್ನು ಕಣ್ತುಂಬಿಕೊಳ್ಳಬೇಕಷ್ಟೆ.

355.3 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ನೋಡಬಹುದಾದ ಅನೇಕ ಪ್ರವಾಸ ತಾಣಗಳಿವೆ. ಈ ಪ್ರದೇಶಕ್ಕೆ ಪುರಾಣದ ನಂಟಿದೆ. ಜಮದಗ್ನಿ-ರೇಣುಕಾ ದೇವಿಯರ ಪುತ್ರನಾದ ಪರಶುರಾಮನ ಊರು ಇದು ಎಂಬ ಕಥೆಯಿದೆ. ತನ್ನ ತಂದೆಯ ಮರಣಕ್ಕೆ ಕಾರಣನಾದ ಕಾರ್ತವೀರ್ಯಾರ್ಜುನನನ್ನು ಈಶ್ವರದತ್ತವಾದ ತನ್ನ ಪರಶುರಾಮನಿಗೆ ಬಲಿಕೊಟ್ಟನು. ನಂತರ 21 ಬಾರಿ ಭೂ ಪ್ರದಕ್ಷಿಣೆ ಮಾಡಿ ಕ್ಷತ್ರಿಯ ಕುಲವನ್ನೇ ನಿರ್ಮೂಲ ಮಾಡಿದ. ಕ್ಷತ್ರಿಯಹತ್ಯೆಯ ಪಾಪವನ್ನು ಕಳೆದುಕೊಳ್ಳಲು ಅಶ್ವಮೇಧಯಾಗವನ್ನು ಮಾಡಿದನು. ಇದರಿಂದ ಸಮಸ್ತ ಆಸ್ತಿಯನ್ನು ಕಶ್ಯಪ ಋಷಿಗೆ ದಾನಕೊಟ್ಟನು. ಕೊನೆಯಲ್ಲಿ ಪರಶುರಾಮನಿಗೆ ನೆಲೆಯಿಲ್ಲದಂತಾಯಿತು.

ಸಹ್ಯಾದ್ರಿಯ ಶಿಖರದಲ್ಲಿ ನಿಂತು, ಎದುರು ಇದ್ದ ಸಮುದ್ರಕ್ಕೆ ಈ ಪರಶು ಹೋದಷ್ಟು ಜಾಗ ಕೊಡು ಎಂದು ಪ್ರಾರ್ಥಿಸಿ, ತನ್ನ ಕೊಡಲಿಯನ್ನು ಎಸೆದನು. ಆಗ ಸಮುದ್ರವು ಸಹ್ಯಾದ್ರಿಯ ಹಿಂದಕ್ಕೆ ಉರುಳಿತು. ಅಂದಿನಿಂದ ಆ ಭಾಗ ಪರಶುರಾಮಕ್ಷೇತ್ರವೆಂದು ಹೆಸರಾಯಿತು. ಹೀಗೆಯೇ ಆಗುಂಬೆಯೂ ಶ್ರೇಷ್ಠತೆಯನ್ನು ಪಡೆದುಕೊಂಡಿತು ಎನ್ನಲಾಗುತ್ತದೆ. ಈ ಪ್ರದೇಶದಲ್ಲಿ ಪ್ರವಾಸ ಕೈಗೊಂಡರೆ ತಪ್ಪದೇ ನೋಡಬೇಕಾದ ತಾಣಗಳು ಹಲವಾರಿವೆ.

ಸೂರ್ಯಾಸ್ತ ವೀಕ್ಷಣಾ ತಾಣ

ಸೂರ್ಯಾಸ್ತ ವೀಕ್ಷಣಾ ತಾಣ

ಇದೊಂದು ಪಶ್ಚಿಮ ಘಟ್ಟದ ಸಾಲುಗಳಲ್ಲಿಯೇ ಅತ್ಯಂತ ಎತ್ತರದ ತಾಣ. ಉಡುಪಿ ಮತ್ತು ಆಗುಂಬೆ ಮಾರ್ಗದಲ್ಲಿದೆ. ಆಗುಂಬೆಯಿಂದ ಕಾಲ್ನಡಿಗೆ ದೂರದಲ್ಲಿದೆ. ಸುತ್ತಲು ಹಸಿರು ಕಾಶಿಯ ನಡುವೆ ಸೂರ್ಯ ಹುಟ್ಟುವುದು ಹಾಗೂ ಕೆಂಪು ಬಣ್ಣತಳೆದು ಮುಳುಗುವ ದೃಶ್ಯಗಳು ಇಲ್ಲಿ ರಮಣೀಯವಾಗಿರುತ್ತವೆ. ಇದನ್ನು ನೋಡಲು ಅನೇಕ ಪ್ರವಾಸಿಗರು ಆಗಮಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಬೆಟ್ಟದ ತುದಿಯಲ್ಲಿ ನಿಂತಿರಬೇಕು. ಇಲ್ಲವಾದರೆ ಈ ದೃಶ್ಯ ನೋಡಲು ಸಾಧ್ಯವಿಲ್ಲ.
PC: flickr.com

ಆಗುಂಬೆ ಘಾಟ್

ಆಗುಂಬೆ ಘಾಟ್

ಶೃಂಗೇರಿ, ಮುರುಡೇಶ್ವರಕ್ಕೆ ಹೋಗುವ ಮಾರ್ಗ ಅದ್ಭುತ ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಇಲ್ಲಿಯ ರಸ್ತೆ ಮಾರ್ಗವು ಕಿರಿದಾದ ರಸ್ತೆ ಮಾರ್ಗ. ಏರಿಳಿತದ ಘಟ್ಟದ ಸಾಲಾಗಿರುವುದರಿಂದ ಇಲ್ಲಿ ಸಂಚರಿಸುವುದು ಒಂದು ಸಾಹಸದ ಅನುಭವ ನೀಡುತ್ತದೆ. ಸಾಗುವ ದಾರಿಯುದ್ದಕ್ಕೂ ರಮ್ಯವಾದ ದೃಶ್ಯಗಳ ಸೆರೆ ಹಿಡಿಯುತ್ತಾ ಹೋಗಬಹುದು.
PC: flickr.com

ಜೋಗಿಗುಂಡಿ ಜಲಪಾತ

ಜೋಗಿಗುಂಡಿ ಜಲಪಾತ

ಆಗುಂಬೆಯ ಸಣ್ಣ ಹಳ್ಳಿಯಲ್ಲಿ ಈ ಜಲಪಾತವಿದೆ. ಈ ಜಲಪಾತದಲ್ಲಿ ವರ್ಷವಿಡಿ ನೀರು ಇರುತ್ತದೆ. ಇಲ್ಲಿಗೆ ಹತ್ತಿರದಲ್ಲೇ ಒಂದು ಬೆಟ್ಟವಿದೆ. ಇದು ಚಾರಣ ಮಾಡಲು ಸೂಕ್ತ ಸ್ಥಳ.
PC: flickr.com

ಕೊಡ್ಲು ತೀರ್ಥ ಜಲಪಾತ

ಕೊಡ್ಲು ತೀರ್ಥ ಜಲಪಾತ

ನಗರ ಭಾಗದಿಂದ 20 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಸನ್ ಸೆಟ್ ಪಾಯಿಂಟ್‍ನಿಂದಲೂ ಬರಬಹುದು. ಬಹಳ ಎತ್ತರಿಂದ ಬೀಳುವ ಈ ಜಲಧಾರೆಗೆ ಮೈ ಒಡ್ಡಿ ಸ್ನಾನ ಮಾಡಬಹುದು.
PC: wikipedia.org

ಒನಕೆ ಅಬ್ಬಿ ಜಲಪಾತ

ಒನಕೆ ಅಬ್ಬಿ ಜಲಪಾತ

400 ಅಡಿ ಎತ್ತರದಿಂದ ಧುಮುಕುವ ಈ ಜಲಪಾತವನ್ನು ನೋಡುವುದೇ ಚೆಂದ. 5 ಕಿ.ಮೀ. ದೂರ ಚಾರಣ ಮಾಡಿ ಬೆಟ್ಟವನ್ನು ಹತ್ತಬೇಕು. ಒಮ್ಮೆ ಬೆಟ್ಟದ ತುದಿಗೆ ಬಂದು ನಿಂತರೆ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
PC: wikipedia.org

ಬರ್ಕಣ ಜಲಪಾತ

ಬರ್ಕಣ ಜಲಪಾತ

ಭಾರತದ 10ನೇ ಅತಿ ಎತ್ತರದ ಜಲಪಾತ ಎನ್ನುವ ಹಿರಿಮೆಯನ್ನು ಹೊಂದಿದೆ. ಆಗುಂಬೆಯಿಂದ 7ಕಿ.ಮೀ. ದೂರದಲ್ಲಿರುವ ಈ ಜಲಪಾತ 850 ಅಡಿ ಎತ್ತರದಿಂದ ಧುಮುಕುತ್ತದೆ. ಸಮುದ್ರ ಮಟ್ಟದಿಂದ 259 ಮೀ. ಎತ್ತರದಲ್ಲಿದೆ. ಈ ತಾಣ ವಿವಿಧ ವನಸ್ಪತಿ ಗಿಡಮೂಲಿಕೆಗೆ ಹೆಸರಾಗಿದೆ.
PC: flickr.com

ಮಳೆಕಾಡು ಸಂಶೋಧನಾ ಕೇಂದ್ರ

ಮಳೆಕಾಡು ಸಂಶೋಧನಾ ಕೇಂದ್ರ

ಇಲ್ಲಿಯ ಕಾಡಿನಲ್ಲಿರುವ ವಿಶೇಷ ಸಸ್ಯಗಳು ಹಾಗೂ ಪ್ರಾಣಿಗಳ ಬಗ್ಗೆ ಸಂಶೋಧನೆ ಹಾಗೂ ಸಂರಕ್ಷಣಾ ಕಾರ್ಯ ಮಾಡುತ್ತದೆ. ಪರಿಸರ ಪ್ರಿಯರಿಗೆ ಹಾಗೂ ಪರಿಸರದ ಕುತೂಹಲ ವಿಚಾರಗಳಲ್ಲಿ ಆಸಕ್ತಿ ಇರುವವರಿಗೆ ಆಕರ್ಷಣಾ ತಾಣ.
PC: wikipedia.org

Read more about: agumbe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X