Search
  • Follow NativePlanet
Share
» »5 ಪ್ರಕಾರಗಳ ಮುಕ್ತಿಗಳು ಲಭಿಸುವಂತೆ ಮಾಡುವ 5 ಸ್ಥಳಗಳು

5 ಪ್ರಕಾರಗಳ ಮುಕ್ತಿಗಳು ಲಭಿಸುವಂತೆ ಮಾಡುವ 5 ಸ್ಥಳಗಳು

By Vijay

ಬ್ರಹ್ಮಾಂಡ ಪುರಾಣದ ಪ್ರಕಾರ, ಜೀವಾತ್ಮವು ತನ್ನ ಹಿಂದಿನ ಜನ್ಮಗಳಿಂದ ಪ್ರಗತಿ ಸಾಧಿಸುತ್ತ ಮಾನವ ಜನ್ಮ ಪಡೆದಾಗ ಪ್ರಾಣಿ-ಪಕ್ಷಿ, ಜಲಚರಗಳಿಗಿಂತಲೂ ಹೆಚ್ಚಿನ ಪುಣ್ಯ ಸಾಧಿಸಿರುವುದರ ಬಗ್ಗೆ ತಿಳಿಯುತ್ತದೆ. ಹೀಗೆ ಪಡೆದ ಮನುಷ್ಯ ಜನ್ಮವು ಕೇವಲ ಭೋಗಕ್ಕೆ ಸೀಮಿತವಾಗಿರದೆ ಅದರ ಪರಮ ಉದ್ದೇಶವು ಮತ್ತೆ ಪರಬ್ರಹ್ಮನಲ್ಲಿ ಒಂದಾಗುವುದಾಗಿದೆ ಅಥವಾ ಮೋಕ್ಷ ಪಡೆಯುವುದಾಗಿದೆ.

ನಾರದರು ಒಂದೊಮ್ಮೆ ವಿವರಿಸಿರುವಂತೆ ಹಿಂದೆ ಸತ್ಯಯುಗ, ತ್ರೇತಾಯುಗ ಹಾಗೂ ದ್ವಾಪರಯುಗಗಳಲ್ಲಿ ದೇವರ ದರ್ಶನ ಅಥವಾ ಕೃಪೆ ಉಂಟಾಗುವುದು ಸಾಮಾನ್ಯವಾಗಿತ್ತಾದರೂ ಅದಕ್ಕೆ ಕಠಿಣವಾದ ತಪಸ್ಸು, ಧ್ಯಾನಗಳನ್ನಾಚರಿಸಬೇಕಿತ್ತು. ಕಲಿಯುಗವು ನೈತಿಕ ಮೌಲ್ಯಗಳು ಕಳೆದುಕೊಂಡು, ಕಷ್ಟ-ಕಾರ್ಪಣ್ಯಗಳು ಹೆಚ್ಚಾಗಿ, ಮನುಷ್ಯ ಪ್ರತಿ ಸಂದರ್ಭದಲ್ಲಿ ತೊಂದರೆಗಳನ್ನು ಹೆಚ್ಚು ಹೆಚ್ಚು ಅನುಭವಿಸುವಂತಹ ಸ್ಥಿತಿ ತಂದೊಡ್ಡುತ್ತದೆಯಾದರೂ ಹರಿನಾಮವೊಂದಿದ್ದರೆ, ತೀರ್ಥ ಕ್ಷೇತ್ರಗಳ ದರ್ಶನ ಮಾಡಿದರೆ ಅತಿ ಶೀಘ್ರದಲ್ಲಿಯೆ ದೇವರ ಕೃಪೆ ಉಂಟಾಗಿ ಮೋಕ್ಷ ದೊರೆಯುತ್ತದಂತೆ.

ಹಾಗಾಗಿ ಆಸ್ತಿಕ ಹಿಂದುಗಳು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಪುಣ್ಯ ಕ್ಷೇತ್ರಗಳು, ತೀರ್ಥಕ್ಷೇತ್ರಗಳೆಂದು ಧಾರ್ಮಿಕ ಯಾತ್ರೆ ಮಾಡುತ್ತಾರೆ. ಈ ರೀತಿಯ ಯಾತ್ರೆಗಳು ಧಾರ್ಮಿಕ ಪ್ರವಾಸೋದ್ಯಮಕ್ಕೆ ಸಾಕಷ್ಟು ಮಹತ್ತರ ಕೋಡುಗೆಗಳನ್ನು ನೀಡುತ್ತವೆ. ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಐದು ಪ್ರಕಾರದ ಮುಕ್ತಿಗಳ ಕುರಿತು ಉಲ್ಲೇಖಿಸಿರುವುದನ್ನು ಕಾಣಬಹುದು. ಆ ಒಂದೊಂದು ಪ್ರಕಾರದ ಮುಕ್ತಿಯು ಒಂದೊಂದು ಪುಣ್ಯಕ್ಷೇತ್ರಗಳಲ್ಲಿ ದೊರೆಯುತ್ತದೆಂದು ಹೇಳಲಾಗಿದೆ. ಹಾಗಾದರೆ ಬನ್ನಿ ಮೋಕ್ಷ ಕರುಣಿಸುವ ಆ ಪಂಚ ಪುಣ್ಯ ಕ್ಷೇತ್ರಗಳು ಯಾವುವೆಂದು ಈ ಲೇಖನದ ಮೂಲಕ ತಿಳಿಯಿರಿ.

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಮೊದಲನೇಯದಾಗಿ ಐದು ಪ್ರಕಾರಗಳ ಮುಕ್ತಿಗಳ ಕುರಿತು ಕೆಲವು ಗ್ರಂಥಗಳಲ್ಲಿ ವಿವರಿಸಲಾಗಿದ್ದು ಅವುಗಳೆಂದರೆ ಜನ್ಮ ಮುಕ್ತಿ, ಭಾವಮುಕ್ತಿ, ವಾಸ ಮುಕ್ತಿ, ಅಂತ್ಯ ಮುಕ್ತಿ ಹಾಗೂ ದರ್ಶನ ಮುಕ್ತಿ. ಈ ಎಲ್ಲ ಪ್ರಕಾರಗಳ ಮುಕ್ತಿಗಳಿಗೆ ಒಂದೊಂದು ಸ್ಥಳವನ್ನು ಉಲ್ಲೇಖಿಸಲಾಗಿದೆ. ಆ ಸ್ಥಳಗಳು ಯಾವುವೆಂದು ತಿಳಿಯಲು ಮುಂದಿನ ಸ್ಲೈಡುಗಳನ್ನು ನೋಡಿ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Onef9day

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಜನ್ಮ ಮುಕ್ತಿ : ಇದಕ್ಕೆಂದೆ ಒಂದು ನಿರ್ದಿಷ್ಟ ಸ್ಥಳವಿದೆ. ಯಾರು ಈ ಕ್ಷೇತ್ರದಲ್ಲಿ ಜನ್ಮ ಪಡೆಯುತ್ತಾರೊ ಅವರಿಗೆ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯಿದೆ ಹಾಗೂ ಆ ಕ್ಷೇತ್ರವೆ ತಿರುವರೂರು. ತಮಿಳುನಾಡು ರಾಜ್ಯದ ತಿರುವರೂರು ಜಿಲ್ಲೆಯ ತಿರುವರೂರು ತಾಲೂಕು ಪಟ್ಟಣವೆ ಆ ಸ್ಥಳ.

ಚಿತ್ರಕೃಪೆ: SriniG

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ತಿರುವರೂರು ಪ್ರಮುಖವಾಗಿ ತನ್ನಲ್ಲಿರುವ ತ್ಯಾಗರಾಜರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ತ್ಯಾಗರಾಜ ದೇವಾಲಯವು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು ಸೋಮಸ್ಕಂದ ಅಂಶದ ಶಿವನನ್ನು ಆರಾಧಿಸಲಾಗುತ್ತದೆ. ಸೋಮಸ್ಕಂದದಲ್ಲಿ ಶಿವನನ್ನು ಕುಟುಂಬ ಸಮೇತವಾಗಿ ಅಂದರೆ ಶಿವ, ಉಮಾ ಹಾಗೂ ಮಗನಾದ ಸ್ಕಂದನನ್ನು ಪೂಜಿಸಲಾಗುತ್ತದೆ.

ಚಿತ್ರಕೃಪೆ: Kasiarunachalam

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಸೋಮಸ್ಕಂದದಲ್ಲಿ ವಿವರಿಸಲಾಗಿರುವ ಶಿವನ ಕುಟುಂಬ. ತ್ಯಾಗರಾಜ ದೇವಾಲಯದಲ್ಲಿ ಮೂಲ ಶಿವನಾಗಿ ಶಿವಲಿಂಗವಿದ್ದರೂ ಸೋಮಸ್ಕಂದ ಶಿವನನ್ನು ಇಲ್ಲಿ ಆರಾಧಿಸಲಾಗುತ್ತದೆ.

ಚಿತ್ರಕೃಪೆ: Redtigerxyz

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

33 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ದೇವಾಲಯ ಸಂಕೀರ್ಣದಲ್ಲಿ ಸಾಕಷ್ಟು ಇತರೆ ದೇವ ದೇವತೆಯರ ಸನ್ನಿಧಿಗಳಿವೆ. ಭಾರತದಲ್ಲೆ ಅತಿ ಹೆಚ್ಚು ಇತರೆ ದೇವರುಗಳ ಸನ್ನಿಧಿಗಳನ್ನು ಹೊಂದಿರುವ ಏಕೈಕ ದೇವಾಲಯ ಇದಾಗಿದೆ ಎಂಬ ಖ್ಯಾತಿ ಇದಕ್ಕಿದೆ.

ಚಿತ್ರಕೃಪೆ: Kasiarunachalam

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಕರ್ನಾಟಿಕ್ ಸಂಗೀತ ಶೈಲಿಯ ತ್ರಿಮೂರ್ತಿಗಳು ಎಂದೆ ಖ್ಯಾತಿ ಪಡೆದಿರುವ ತ್ಯಾಗರಾಜರು, ಮುತ್ತುಸ್ವಾಮಿ ದಿಕ್ಷೀತರ್ ಹಾಗೂ ಶ್ಯಾಮ ಶಾಸ್ತ್ರಿಗಳು ಜನ್ಮ ಪಡೆದ ಸ್ಥಳವಾದ ತಿರುವರೂರಿನ ತ್ಯಾಗರಾಜ ದೇವಾಲಯದ ರಥವು ಸಾಕಷ್ಟು ದೊಡ್ಡದಾಗಿದ್ದು ಸಂಪೂರ್ಣ ತಮಿಳುನಾಡಿನಲ್ಲೆ ಇರುವ ದೊಡ್ಡದಾದ ಏಕೈಕ ರಥ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: NatRaja

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಭಾವ ಮುಕ್ತಿ : ಭಗವಂತನನ್ನು ಖುದ್ದಾಗಿ ದರ್ಶಿಸಬೇಕಂತೇನೂ ಇಲ್ಲ. ಅವನ ನಾಮವನ್ನು ಸದಾ ಸ್ಮರಣೆ ಮಾಡುವುದು, ಅವನ ಭಾವನೆಯಲ್ಲೆ ಲೀನವಾಗುವುದರ ಮೂಲಕ ಒಲಿಯುವ ಮುಕ್ತಿ ಇದಾಗಿದೆ. ಇದಕ್ಕೆಂದೆ ತಿರುವಣ್ಣಾಮಲೈ ಸ್ವಾಮಿಯನ್ನು ಉಲ್ಲೇಖಿಸಲಾಗಿದೆ. ಅಂದರೆ ತಿರುವಣ್ಣಾಮಲೈ ಸ್ವಾಮಿಯನ್ನು ಸದಾ ಧ್ಯಾನಿಸುವುದರಿಂದ, ಅವನ ಕುರಿತು ಚಿಂತಿಸುವುದರಿಂದ ಮುಕ್ತಿ ಸಿಗುತ್ತದೆಂದು ನಂಬಲಾಗಿದೆ.

ಚಿತ್ರಕೃಪೆ: Vinoth Chandar

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ ತಿರುವಣ್ಣಾಮಲೈ ಕ್ಷೇತ್ರ. ಬೆಂಗಳೂರಿನಿಂದ 220 ಕಿ.ಮೀ ಹಾಗೂ ಚೆನ್ನೈ ನಗರದಿಂದ 185 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ತಿರುವಣ್ಣಾಮಲೈ ಅಣ್ಣಾಮಲೈ ಬೆಟ್ಟಗಳ ಬುಡದಲ್ಲಿ ರೂಪಗೊಂಡ ಪಟ್ಟಣವಾಗಿದೆ. ಇದು ಅರುಣಾಚಲೇಶ್ವರನ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Govind Swamy

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ತಿರುವಣ್ಣಾಮಲೈ ಬೆಟ್ಟ ಕ್ಷೇತ್ರವು ತನ್ನಲ್ಲಿರುವ ಅಣ್ಣಾಮಲಯಾರ್ (ಶಿವನ ಅವತಾರವಾದ ಅರುಣಾಚಲೇಶ್ವರ) ದೇವಾಲಯಕ್ಕೆ ಪ್ರಖ್ಯಾತಿ ಪಡೆದಿದೆ. ಇದು ಶಿವನಿಗೆ ಮುಡಿಪಾದ ದೇವಸ್ಥಾನವಾಗಿದೆ. ಅಷ್ಟೆ ಅಲ್ಲ, ಪಂಚಭೂತ ಸ್ಥಳಗಳ ಪೈಕಿ ಈ ಸ್ಥಳವೂ ಸಹ ಒಂದು. ಇದು ಪಂಚಭೂತಗಳ ಪೈಕಿ ಒಂದಾದ ಅಗ್ನಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಜರುಗುವ ಕಾರ್ತಿಕೈ ದೀಪಂ ಉತ್ಸವವು ಅತಿ ಪ್ರಮುಖವಾದ ಉತ್ಸವವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: Adam63

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಅರುಣಾಚಲ ಬೆಟ್ಟದಲ್ಲಿ ಒಟ್ಟು ಎಂಟು ಶಿವಲಿಂಗಗಳು, ಎಂಟು ನಂದಿ ವಿಗ್ರಹಗಳು ಹಾಗೂ 350 ಕ್ಕೂ ಅಧಿಕ ಕಲ್ಯಾಣಿಗಳನ್ನು ಕಾಣಬಹುದಾಗಿದೆ. ಪ್ರತಿಯೊಂದು ಲಿಂಗಗಳಿಗೆ ಅದರದೆ ಆದ ವಿಶೇಷತೆಗಳಿವೆ ಹಾಗೂ ಬೆಟ್ಟ ಪ್ರದಕ್ಷಿಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತನು ಕೆಲ ವಿಶೇಷ ಆಚರಣೆಗಳನ್ನು ಪ್ರತಿಯೊಂದು ಶಿವಲಿಂಗಗಳ ಮುಂದೆ ಪಾಲಿಸುತ್ತ ಮುನ್ನಡಯುತ್ತಾನೆ.

ಚಿತ್ರಕೃಪೆ: Vinoth Chandar

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ವಾಸ ಮುಕ್ತಿ : ಯಾರು ಈ ಒಂದು ಸ್ಥಳದಲ್ಲಿ ವಾಸ ಮಾಡುತ್ತಾರೊ ಅವರಿಗೆ ಮುಕ್ತಿ ಲಭಿಸುವುದೆಂದು ನಂಬಲಾಗುತ್ತದೆ ಹಾಗೂ ಆ ಕ್ಷೇತ್ರವೆ ಕಾಂಚೀಪುರಂ ಅಥವಾ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಕಂಚಿ.

ಚಿತ್ರಕೃಪೆ: Balaji Photography

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಚೆನ್ನೈ ನಗರ ಕೇಂದ್ರದಿಂದ ಸುಮಾರು 72 ಕಿ.ಮೀ ಗಳಷ್ಟು ದೂರದಲ್ಲಿರುವ ಕಾಂಚೀಪುರಂ ಪ್ರಮುಖವಾಗಿ ತನ್ನಲ್ಲಿರುವ ಕಾಮಾಕ್ಷಿ ದೇವಿಯ ದೇವಾಲಯದಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: SINHA

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಕಂಚಿ ಕಾಮಕೋಟಿ ಪೀಠ ಎಂದೆ ಕರೆಯಲ್ಪಡುವ ಕಾಮಾಕ್ಷಿ ದೇವಾಲಯವು ಪ್ರಖ್ಯಾತ 51 ಶಕ್ತಿಪೀಠಗಳ ಪೈಕಿ ಒಂದಾಗಿದೆ. ಪ್ರತೀತಿಯಂತೆ ಇಲ್ಲಿ ಸತಿ ದೇವಿಯ ನಾಭಿ ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: SINHA

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಇತರೆ ಶಕ್ತಿಪೀಠಗಳಂತೆ ಕಾಮಾಕ್ಷಿ ದೇವಾಲಯವು ಕೇವಲ ಶಕ್ತಿ ದೇವಿಗೆ ಮಾತ್ರ ಸೀಮಿತವಾಗಿರದೆ, ಇದೊಂದು ಶಿವ-ಶಕ್ತಿ ನೆಲೆಸಿರುವ ಸ್ಥಳವಾಗಿದೆ ಹಾಗೂ ಆದಿ ಗುರು ಶಂಕರರು ಇಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿದ್ದಾರೆ.

ಚಿತ್ರಕೃಪೆ: G41rn8

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಅಂತ್ಯ ಮುಕ್ತಿ : ಇದರ ಪ್ರಕಾರವಗಿ ಈ ಒಂದು ಸ್ಥಳದಲ್ಲಿ ಯಾರು ತಮ್ಮ ಜೀವನ ಪಯಣ ಮುಗಿಸಿ ಸಾವಿಗಿಡಾಗುತ್ತಾರೊ ಅವರಿಗೆ ಮುಕ್ತಿ ದೊರಕುತ್ತದೆಂಬ ನಂಬಿಕೆಯಿದೆ. ಅಲ್ಲದೆ ಈ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆದರೆ ಆ ಆತ್ಮವು ಮೋಕ್ಷ ಹೊಂದುತ್ತದೆ ಎಂದೂ ಸಹ ನಂಬಲಾಗಿದೆ. ಆ ಸ್ಥಳವೆ ಇಂದಿನ ವಾರಣಾಸಿ ಅಥವಾ ಜನಪ್ರೀಯವಾಗಿ ಕರೆಯಲಾಗುವ ಕಾಶಿ.

ಚಿತ್ರಕೃಪೆ: Arian Zwegers

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಹಿಂದು ಸಂಪ್ರದಾಯ ಹಾಗೂ ಇತರೆ ಆಚರಣೆಗಳನ್ನು ಅತಿ ಹತ್ತಿರದಿಂದ ನೋಡಬಯಸುವ ಪ್ರತಿಯೊಬ್ಬನೂ ವಾರಣಾಸಿ ನಗರಕ್ಕೊಮ್ಮೆ ಭೇಟಿ ನೀಡುವುದು ಅತಿ ಉತ್ತಮವಾದ ಆಯ್ಕೆ ಎಂದೆ ಹೇಳಬಹುದು. ಸನಾತನ ಹಿಂದು ಧರ್ಮದಲ್ಲಿ ಹೇಳಲಾಗಿರುವಂತೆ ಈ ಕ್ಷೇತ್ರವು ಎಷ್ಟೊಂದು ಪುಣ್ಯದಾಯಕವಾಗಿದೆ ಎಂದರೆ ಯಾವೋಬ್ಬ ವ್ಯಕ್ತಿಯು ಇಲ್ಲಿ ಸಾವನ್ನು ಪಡೆದರೆ ಅಥವಾ ಸತ್ತ ವ್ಯಕ್ತಿಯ ಅಂತಿಮ ಕ್ರಿಯೆಯನ್ನು ಇಲ್ಲಿ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ ಮೋಕ್ಷ ಪಡೆಯುತ್ತಾರೆ. ದಹನ ಕ್ರಿಯೆಗೆಂದೂ ಸಾಲಿನಲ್ಲಿ ನಿಂತಿರುವ ಶವಗಳು!

ಚಿತ್ರಕೃಪೆ: Mandy

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವಾದ ವಾರಣಾಸಿಯು ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿದೆ ಹಾಗೂ ಇಲ್ಲಿರುವ ಕಾಶಿ ವಿಶ್ವನಾಥನ ದೇವಾಲಯವು ಸಾಕಷ್ಟು ಪ್ರಖ್ಯಾತಿಗಳಿಸಿದೆ. ಇದು ಶಿವನ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Ken Wieland

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಆದುದರಿಂದಲೊ ಏನೊ ಇಲ್ಲಿ ಆಧ್ಯಾತ್ಮಿಕತೆಯ ಕಂಪು ನಗರದ ತುಂಬೆಲ್ಲ ಪಸರಿಸಿರುವುದನ್ನು ಭೇಟಿ ನೀಡಿದ ಸಂದರ್ಭದಲ್ಲಿ ಅನುಭವಿಸಬಹುದಾಗಿದೆ. ಇಂದಿಗೂ ಸಹ ಸಾಕಷ್ಟು ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳು ಇಲ್ಲಿ ನಿತ್ಯ ಜರುಗುತ್ತಿರುತ್ತವೆ. ಪ್ರತಿಯೊಂದು ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಕಾಶಿಯ ಮಹಾರಾಜ ಕಾಶಿ ನರೇಶನ ಪೂಜೆಯು ಒಂದು ಭಾಗವಾಗಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Arian Zwegers

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ದರ್ಶನ ಮುಕ್ತಿ : ಕೇವಲ ದರ್ಶನ ಮಾತ್ರದಿಂದಲೆ ಮುಕ್ತಿ ಲಭಿಸುವ ಪ್ರಕಾರ ಇದಾಗಿದೆ. ಇದಕ್ಕೆ ಹೊಂದಿಕೊಂಡಂತೆ ಉಲ್ಲೇಖಿಸಲಾಗಿರುವ ಸ್ಥಳ ಚಿದಂಬರಂನ ಶಿವ ದೇವಾಲಯ ಹಾಗೂ ಶಿವನ ದರ್ಶನ.

ಚಿತ್ರಕೃಪೆ: Ryan

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯ ನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಹಾಗೂ ಗಮನಾರ್ಹವಾಗಿ ಎದ್ದು ಕಾಣುವಂತಹ ಗೋಪುರಗಳನ್ನು ಹೊಂದಿರುವ ದೇವಾಲಯಗಳಿಗಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Varun Shiv Kapur

ಪಂಚ ಮುಕ್ತಿ ಸ್ಥಳಗಳು:

ಪಂಚ ಮುಕ್ತಿ ಸ್ಥಳಗಳು:

ಪ್ರಮುಖವಾಗಿ ಇಲ್ಲಿರುವ ತಿಲ್ಲೈ ನಟರಾಜನ ದೇವಸ್ಥಾನವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಈ ಶಿವನ ದೇವಾಲಯವು ಶೈವರ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದ್ದು ಪಂಚಭೂತಗಳ ಪೈಕಿ ಆಕಾಶವನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದಲ್ಲಿ ಶಿವನನ್ನು "ನಟರಾಜ"ನ ರೂಪದಲ್ಲಿ ನರ್ತಿಸುತ್ತಿರುವ ಭಂಗಿಯಲ್ಲಿ ಪೂಜಿಸಲಾಗುತ್ತದೆ ಹಾಗೂ ಈ ರೀತಿಯ ಏಕೈಕ ದೇವಾಲಯವಾಗಿ ಇದು ಪ್ರಸಿದ್ಧಿಯನ್ನು ಪಡೆದಿದೆ.

ಚಿತ್ರಕೃಪೆ: yashima

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X