Search
  • Follow NativePlanet
Share
» »ಕೊಡಗಿನಲ್ಲಿದೆ ಇಂಥಹ ತಾಣಗಳು: ಆಹಾ!!

ಕೊಡಗಿನಲ್ಲಿದೆ ಇಂಥಹ ತಾಣಗಳು: ಆಹಾ!!

ಕೊಡಗು ನಮ್ಮ ಕರ್ನಾಟಕದ ಕಾಶ್ಮೀರ. ಇಲ್ಲಿನ ಮನೋಹರವಾದ ದೃಶ್ಯಕ್ಕೆ ಬೆರಗಾಗದೇ ಇರಲಾರರು. ಮಡಕೇರಿ ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಹಾಗು ಜಿಲ್ಲಾ ಕೇಂದ್ರವಾಗಿದೆ. ಮಡಿಕೇರಿ ಒಂದು ಪ್ರಮುಖವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಕೊಡಗು ನಮ್ಮ ಕರ್ನಾಟಕದ ಕಾಶ್ಮೀರ. ಇಲ್ಲಿನ ಮನೋಹರವಾದ ದೃಶ್ಯಕ್ಕೆ ಬೆರಗಾಗದೇ ಇರಲಾರರು. ಮಡಕೇರಿ ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಹಾಗು ಜಿಲ್ಲಾ ಕೇಂದ್ರವಾಗಿದೆ. ಮಡಿಕೇರಿ ಒಂದು ಪ್ರಮುಖವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಇಲ್ಲಿ ನೀವು ಸುಂದರವಾದ ಜಲಪಾತಗಳು, ಸಸ್ಯ ಮತ್ತು ಪ್ರಾಣಿಗಳ ಅದ್ಭುತವಾದ ಸಾಮ್ರಾಜ್ಯವನ್ನು ಕಂಡು ಆನಂದಿಸಬಹುದು. ಮುಂಜಾನೆಯ ಮಂಜಿನಲ್ಲಿ ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿಯಾದ ಕಾಫಿ ಕುಡಿಯುವುದೇ ಒಂದು ವಿಭಿನ್ನವಾದ ಅನುಭವ. ಇಲ್ಲಿನ ಮುಖ್ಯವಾದ ಆರ್ಕಷಣೆ ಎಂದರೆ ಅದು ವನ್ಯಜೀವಿ ಅಭಯಾರಣ್ಯ.

ಪ್ರಸ್ತುತ ಲೇಖನದ ಮೂಲಕ ಕೊಡಗಿನಲ್ಲಿರುವ ಪ್ರಮುಖವಾದ ಪ್ರವಾಸಿತಾಣಗಳ ಬಗ್ಗೆ ತಿಳಿಯೋಣ.

ಅಬ್ಬೆ ಜಲಪಾತ

ಅಬ್ಬೆ ಜಲಪಾತ

ಕೂರ್ಗ್‍ನಲ್ಲಿ ಭೇಟಿ ನೀಡುವ ಅತ್ಯಂತ ಜನಪ್ರಿಯ ತಾಣಗಳಲ್ಲಿ ಅಬ್ಬೆ ಜಲಪಾತವು ಕೂಡ ಒಂದು. ಮಡಿಕೇರಿ ಪಟ್ಟಣದಿಂದ ಸುಮಾರು 1 ಕಿ.ಮೀ ದೂರದಲ್ಲಿ ಈ ಜಲಪಾತವನ್ನು ಕಾಣಬಹುದು. ಇಲ್ಲಿ ಕಾಫಿ ತೋಟಗಳು ಮತ್ತು ಮಸಾಲೆ ಎಸ್ಟೇಟ್‍ಗಳು ಕೂಡ ಇವೆ.


PC:Eeshmishra

ಅಬ್ಬೆ ಜಲಪಾತ

ಅಬ್ಬೆ ಜಲಪಾತ

ಈ ಜಲಪಾತವನ್ನು ಕಾಣಲು ಹಲವಾರು ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಈ ಜಲಪಾತ ಒಂದು ಸ್ವರ್ಗದ ಸಂಕೇತವಾಗಿದೆ. ಈ ಸುಂದರವಾದ ಸ್ಥಳಕ್ಕೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.


PC:Santhoshkumar Sugumar

ಬ್ರಹ್ಮಗಿರಿ ಪೀಕ್

ಬ್ರಹ್ಮಗಿರಿ ಪೀಕ್

ಬ್ರಹ್ಮಗಿರಿ ಪೀಕ್ ಅಥವಾ ಶಿಖರ ಒಂದು ಅದ್ಭುತವಾದ ಪ್ರದೇಶ. ಇಲ್ಲಿ ಈ ಶಿಖರವು ಕಾಡಿನ ನಡುವೆ ಮಂಜುಗಡ್ಡೆಯ ಮೇಲಿರುವ ಬೆಟ್ಟಗಳ ಪೂರ್ಣವಾದ ದೃಶ್ಯಗಳನ್ನು ಸೊರೆಗೊಳಿಸಿಕೊಳ್ಳಬಹುದಾಗಿದೆ. ಶಿಖರಕ್ಕೆ ತೆರಳುವ ಸಮಯದಲ್ಲಿ ಹುಲ್ಲುಗಾವಲು, ವಿಭಿನ್ನವಾದ ಹೂವುಗಳು, ತೋರೆಗಳನ್ನು ನೀವು ಕಾಣುತ್ತೀರ.


PC:The MH15

ಬ್ರಹ್ಮಗಿರಿ ಪೀಕ್

ಬ್ರಹ್ಮಗಿರಿ ಪೀಕ್

ಇಲ್ಲಿ ಸಿಂಹ, ಜಂಗಲ್ ಕ್ಯಾಟ್, ಚುಕ್ಕೆಗಳ ಜಿಂಕೆ, ನೀಲಗಿರಿ ಲಂಗೂರ್, ಜೈಂಟ್ ಪ್ಲೈಯಿಂಗ್ ಅಳಿಲು ಸೇರಿದಂತೆ ಇತರ ವನ್ಯಜೀವಿ ಅಭಯಾರಣ್ಯವನ್ನು ಈ ಬ್ರಹ್ಮಗಿರಿ ಪೀಕ್ ಹೊಂದಿದೆ.


PC:Jagadeeshkinni

ಬೈಲಕುಪ್ಪೆ

ಬೈಲಕುಪ್ಪೆ

ಬೈಲಕುಪ್ಪೆ ಒಂದು ಸಾಂಸ್ಕøತಿಕವಾದ ಸೊಬಗನ್ನು ಹೊಂದಿದೆ. ಕೂರ್ಗ್‍ನ ಎಲ್ಲಾ ಪ್ರವಾಸಿತಾಣಗಳಲ್ಲಿ ಸಾಂಸ್ಕøತಿಕವಾದ ರಂಗವನ್ನು ಹೊಂದಿರುವ ಅದ್ಭುತ ಇದು. ಇದು ಭಾರತದಲ್ಲಿನ ಎರಡನೇ ದೊಡ್ಡ ಟಿಬೇಟಿಯನ್ ವಸಾಹತು.

PC:Ayan Mukherjee

ಬೈಲಕುಪ್ಪೆ

ಬೈಲಕುಪ್ಪೆ

ಬೈಲ ಕುಪ್ಪೆಯಲ್ಲಿನ ಮುಖ್ಯ ಆಕರ್ಷಣೆ ಎಂದರೆ ಅದು ಗೋಲ್ಡನ್ ಟೆಂಪಲ್ ಅಥವಾ ನಾಮ್ಡ್ರೊಲಿಂಗ್ ಮಠವಾಗಿದೆ. ಈ ಮಠವು ಟಿಬೇಟಿಯನ್ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ.

PC:Hagarth

ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮವು ಮಡಿಕೇರಿಯಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ಇದೊಂದು ಸುಂದರವಾದ ದ್ವೀಪವಾಗಿದೆ. ಇಲ್ಲಿ ನೀವು ಬಿದಿರಿನ ತೋಪುಗಳು, ಶ್ರೀಗಂಧದ ಮರ ಮತ್ತು ತೇಗದ ಮರಗಳಿಂದ ಅವೃತ್ತವಾಗಿರುವ ಸುಂದರವಾದ ಸ್ಥಳವನ್ನು ಇಲ್ಲಿ ಕಾಣಬಹುದು.

PC:ARIJIT ACHARYYA

ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮ

ಇಲ್ಲಿ ಬಿದಿರಿನ ಕುಠೀರವಿದೆ ನಿಮಗೆ ಇಷ್ಟವಿದ್ದರೆ ಇಲ್ಲಿ ತಂಗಬಹುದಾಗಿದೆ. ಇದು ಒಂದು ಒಳ್ಳೆಯ ಅನುಭೂತಿಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. ಬೋಟಿಂಗ್ ಹಾಗು ಆನೆ ಸವಾರಿ ಕೂಡ ನೀವು ಇಲ್ಲಿ ಆನಂದಿಸಬಹುದಾಗಿದೆ.

PC:Tinucherian

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ನೀವು ವನ್ಯಜೀವಿಗಳ ಪ್ರೇಮಿಗಳಾಗಿದ್ದರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಒಮ್ಮೆ ಭೇಟಿ ನೀಡಿ. ಒಂದು ದಿನದಲ್ಲಿ ಕೂರ್ಗ್‍ನ ಪ್ರಸಿದ್ಧವಾದ ಪ್ರವಾಸ್ಕಕಾಗಿ ಈ ಉದ್ಯಾನವನವನ್ನು ಆಯ್ಕೆ ಮಾಡಿಕೊಳ್ಳಿ. ಕೂರ್ಗ್‍ನಲ್ಲಿ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಇದು ಒಂದಾಗಿದೆ.

PC:Yathin S Krishnappa

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಇಲ್ಲಿ ಹಲವರು ವನ್ಯಮೃಗಗಳು ಹಾಗು 270 ಕ್ಕಿಂತಲೂ ಹೆಚ್ಚು ಪಕ್ಷಿಗಳನ್ನು ಕಾಣಬಹುದಾಗಿದೆ. ಬೇಸಿಗೆ ಕಾಲ ಮತ್ತು ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯ.

PC:Dineshkannambadi

ಸೂಕ್ತವಾದ ಕಾಲಾವಧಿ

ಸೂಕ್ತವಾದ ಕಾಲಾವಧಿ

ಈ ಸುಂದರವಾದ ತಾಣಕ್ಕೆ ಭೇಟಿ ನೀಡಲು ಸೂಕ್ತವಾದ ಕಾಲವೆಂದರೆ ಅದು ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಈ ಕಾಲದಲ್ಲಿ ಸುಗ್ಗಿಯ ಉತ್ಸವವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಕಾಲ ಅತ್ಯಂತ ಪ್ರಶ್ಯಸ್ತವಾದುದು.

PC:Sanjay Krishna

ತಲುಪುವ ಬಗೆ?

ತಲುಪುವ ಬಗೆ?

ಮೈಸೂರು ಸಮೀಪದ ರೈಲ್ವೆ ನಿಲ್ದಾಣ ಸುಮಾರು 120 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಸುಮಾರು 160 ಕಿ.ಮೀ ದೂರದಲ್ಲಿದೆ. ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸೇವೆ ಸಮೀಪದ ಕರ್ನಾಟಕ ನಗರಗಳಿಗೆ ಮೈಸೂರು, ಮಂಗಳೂರು ಮತ್ತು ಬೆಂಗಳೂರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X