Search
  • Follow NativePlanet
Share
» »ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

By Vijay

ಸನಾತನ ಧರ್ಮದ ಪ್ರಕಾರ, ಹಿಂದುಗಳು ಅನ್ನಕ್ಕೆ ಅಂದರೆ ಪ್ರಧಾನವಾಗಿ ಊಟಕ್ಕೆ ಅಪಾರವಾದ ಗೌರವ ಸಲ್ಲಿಸುತ್ತಾರೆ. ಮನುಷ್ಯನ ಬದುಕಲು ಬೇಕಾಗಿರುವ ಅತಿ ಮುಖ್ಯ ಅವಶ್ಯಕತೆಗಳಲ್ಲಿ ಆಹಾರ ಅಥವಾ ಊಟವು ಒಂದಾಗಿದ್ದು ಅದರ ಸಂಕೇತವಾಗಿ ಆಹಾರವನ್ನು ಪ್ರತಿನಿಧಿಸುವ ದೇವಿಯಾಗಿ ಅನ್ನಪೂರ್ಣೆಯನ್ನು ಆರಾಧಿಸುತ್ತಾರೆ.

ಥಟ್ ಅಂತ ಪರಿಹಾರ ನೀಡುತ್ತಾಳೆ, ಈ ಚೌಡೇಶ್ವರಿದೇವಿ!

ಭಾರತದಲ್ಲಿ ವಿವಿಧ ದೇವರುಗಳಿಗೆ ಮುಡಿಪಾದ ಸಾವಿರಾರು ದೇವಾಲಯಗಳಿದ್ದರೂ ಅನ್ನಪೂರ್ಣೆಗೆಂದೆ ಮುಡಿಪಾದ ದೇವಾಲಯಗಳಿರುವುದು ಅತಿ ಕಡಿಮೆ ಸಂಖ್ಯೆಯಲ್ಲಿ. ಪ್ರಸ್ತುತ ಲೇಖನದಲ್ಲಿ ಅನ್ನಪೂರ್ಣೆಗೆ ಮುಡಿಪಾದ ಎರಡು ಪ್ರಮುಖ ದೇವಾಲಯಗಳ ಕುರಿತು ತಿಳಿಸಲಾಗಿದೆ. ಒಂದು ಕರ್ನಾಟಕದಲ್ಲಿದ್ದರೆ ಇನ್ನೊಂದು ಉತ್ತರ ಪ್ರದೇಶದಲ್ಲಿದೆ. ಎರಡೂ ದೇವಾಲಯಗಳು ಸಾಕಷ್ಟು ಮಹತ್ವ ಪಡೆದಿವೆ.

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಶಿವನು ಅನ್ನವನ್ನು ಭೀಕ್ಷೆಯಾಗಿ ಬೇಡುತ್ತಿರುವುದು

ಮೊದಲಿಗೆ ಸಂಕ್ಷಿಪ್ತವಾಗಿ ಅನ್ನಪೂರ್ಣೆಯ ಅವತಾರದ ಕುರಿತು ಕಥೆ ತಿಳಿಯೋಣ. ಒಟ್ಟು ಎರಡು ಕಥೆಗಳು ಪ್ರಚಲಿತದಲ್ಲಿವೆ. ಒಂದು ಕಥೆಯ ಪ್ರಕಾರ, ಶಿವನ ಮಡದಿಯಾದ ಮಹಾಗೌರಿಯು ಅತ್ಯಂತ ಸುಂದರಳೂ ಹಾಗೂ ಬೆಳ್ಳಗೆ ಇದ್ದಳು. ಒಂದೊಮ್ಮೆ ರಸಿಕಾಟದಲ್ಲಿ ಶಿವನ ಮೂರು ಕಣ್ಣುಗಳನ್ನು ಮುಚ್ಚಿದಳು, ಇದರಿಂದ ಜಗತ್ತಿನೆಲ್ಲೆಡೆ ಅಂಧಕಾರ ವ್ಯಾಪಿಸಿ, ಗೌರಿಯೂ ಸಹ ತನ್ನ ಪ್ರಭೆಯನ್ನು ಕಳೆದುಕೊಂಡಳು. ಇದರಿಂದ ಆತಂಕಕ್ಕೊಳಗಾದ ಗೌರಿ ಶಿವನನ್ನು ಬೇಡಲು ಶಿವನು ಅವಳಿಗೆ ಕಾಶಿಯಲ್ಲಿ ಅನ್ನದಾನ ಮಾಡಲು ಸೂಚಿಸಿದ. ಅದರಂತೆ ಗೌರಿ ಅನ್ನಪೂರ್ಣೆಯಾಗಿ ಅನ್ನದಾನ ಮಾಡಿ ತನ್ನ ತೆಜಸ್ಸನ್ನು ಮತ್ತೆ ಪಡೆದಳು.

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯದ ಸ್ವಾಗತ ದ್ವಾರ, ಚಿತ್ರಕೃಪೆ: Gnanapiti

ಇನ್ನೊಂದು ಕಥೆಯ ಅನುಸಾರವಾಗಿ, ಒಮ್ಮೆ ಶಿವನು ಹಾಗೆ ಮಾತನಾಡುತ್ತಿರುವಾಗ ಪಾರ್ವತಿಗೆ ಈ ಲೋಕವು ಮಾಯೆ ಎಂದು ಇಲ್ಲಿರುವ ಸಕಲ ಘನವಸ್ತುಗಳು ಆಹಾರವೂ ಸೇರಿಸಿ ಎಲ್ಲವೂ ಮಾಯೆಯೆಂದು ಹೇಳಿದನು. ಇದರಿಂದ ಬೇಸರಗೊಂಡ ಪಾರ್ವತಿ ಅದೃಶ್ಯಳಾಗಿ ಆಹಾರವನ್ನೆ ಲೋಕದಿಂದ ಮಾಯ ಮಾಡಿದಳು. ಇದರಿಂದ ಎಲ್ಲೆಡೆ ಹಾಹಾಕಾರವಾಯಿತು. ಜನರು ಹಸಿವಿನಿಂದ ನರಳತೊಡಗಿದರು. ಶಿವನಿಗೂ ಸಹ ಹಸಿವಿನ ತಿವ್ರತೆ ಎದುರಾಯಿತು. ನಂತರ ಪಶ್ಚಾತಾಪ ಪಟ್ಟಾಗ ಕರುಣೆಯುಳ್ಳ ಪಾರ್ವತಿ ದೇವಿ ಅನ್ನಪೂರ್ಣೆಯಾಗಿ ಕಾಶಿಯಲ್ಲಿ ಅಡುಗೆ ಮನೆಯನ್ನು ತೆರೆದು ಎಲ್ಲರಿಗೂ ಆಹಾರ ನೀಡತೊಡಗಿದಳು.

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಚಿತ್ರಕೃಪೆ: Wind4wings

ಹೀಗೆ ಆಹಾರ ನೀಡುವ, ಊಟ ನೀಡಿ ಸಲಹುವ ದೇವಿಯನ್ನಾಗಿ ಅನ್ನಪೂರ್ಣೆಯನ್ನು ಆರಾಧಿಸಲಾಗುತ್ತದೆ. ಅನ್ನಪೂರ್ಣೆಗೆ ಮುಡಿಪಾದ ಒಂದು ಮುಖ್ಯ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರಿಬ್ನಿಂದ ಸುಮಾರು ನೂರು ಕಿ.ಮೀ ದೂರದಲ್ಲಿರುವ ಹೊರನಾಡು ಎಂಬ ಕ್ಷೇತ್ರದಲ್ಲಿದೆ. ಇದನ್ನು ಶ್ರೀಕ್ಷೇತ್ರ ಹೊರನಾಡು ಎಂದೂ ಸಹ ಕರೆಯಲಾಗುತ್ತದೆ. ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಸ್ಥಳಗಳಿಂದ ಇಲ್ಲಿಗೆ ಬಸ್ಸುಗಳು ದೊರೆಯುತ್ತವೆ ಅಲ್ಲದೆ ಬಾಡಿಗೆ ವಾಹನಗಳು ಸಹ ದೊರೆಯುತ್ತವೆ.

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಚಿತ್ರಕೃಪೆ: Prabhu B Doss

ಹೊರನಡು ಚಿಕ್ಕಮಗಳೂರಿನ ಮಲೆನಾಡು ಪ್ರದೇಶದ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ನೆಲೆಸಿದ್ದು ಅನ್ನಪೂರ್ಣಿಗೆ ಮುಡಿಪಾದ ಸುಂದರವಾದ ದೇವಾಲಯವನ್ನು ಹೊಂದಿದೆ. ಪ್ರಚಲಿತದಲ್ಲಿರುವಂತೆ ಇಲ್ಲಿಗೆ ಬರುವವರು ಎಂದಿಗೂ ಹಸಿವಿನಿಂದ ಮರಳಲಾರರು. ಎಲ್ಲರಿಗೂ ಉಚಿತವಾಗಿ ಮಧ್ಯಾಹ್ನದಲ್ಲಿ ಹಾಗೂ ರಾತ್ರಿಯಲ್ಲಿ ಊಟವನ್ನು ಮಹಾಪ್ರಸಾದವಾಗಿ ನೀಡಲಾಗುತ್ತದೆ. ಹೊರನಾಡು ಕ್ಷೇತ್ರವು ಬೆಂಗಳೂರಿನಿಂದ 315 ಕಿ.ಮೀ, ಶೃಂಗೇರಿಯಿಂದ 44 ಕಿ.ಮೀ, ಧರ್ಮಸ್ಥಳದಿಂದ 95 ಕಿ.ಮೀ ಹಾಗೂ ಕುದುರೆಮುಖದಿಂದ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಭಾರತದ ಆಧ್ಯಾತ್ಮಿಕ ರಾಜಧಾನಿಯ ಸತ್ಯಾಸತ್ಯತೆಗಳು ಗೊತ್ತೆ?

ಎರಡನೇಯದಾಗಿ ಅನ್ನಪೂರ್ಣಾ ಮಂದಿರ. ಕಾಶಿ ಎಂತಲೂ ಕರೆಯಲಾಗುವ ಉತ್ತರ ಪ್ರದೇಶ ರಾಜ್ಯದಲ್ಲಿರುವ ಪ್ರಖ್ಯಾತ ಧಾರ್ಮಿಕ ತಾಣ ವರಾಣಸಿಯಲ್ಲಿ ಅನ್ನಪೂರ್ಣೆಯ ಈ ದೇವಾಲಯವಿದೆ. ಪ್ರಖ್ಯಾತ ಕಾಶಿ ವಿಶ್ವನಾಥನ ದೇವಾಲಯದಿಂದ ಕೇವಲ ಐವತ್ತು ಅಡಿಗಳಷ್ಟು ದೂರದಲ್ಲಿ ಈ ಮಂದಿರವಿದೆ ಹಾಗೂ ಸಾವಿರಾರು ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ. ದಂತಕಥೆಯಾನುಸಾರ, ಪಾರ್ವತಿಯು ಅನ್ನಪೂರ್ಣೆಯ ಅವತಾರ ಧರಿಸಿದಾಗ ಕಾಶಿಯಲ್ಲೆ ಅಡುಗೆಮನೆಯ ನಿರ್ಮಾಣ ಮಾಡಿ ಪ್ರತಿಯೊಬ್ಬರಿಗೂ ಆಹಾರ ನೀಡದಳಂತೆ. ಹಾಗಾಗಿ ಈ ದೇವಾಲಯಕ್ಕೆ ವಿಶೇಷವಾದ ಮಹತ್ವವಿದೆ.

ವರಾಣಸಿ ತಲುಪುವ ಬಗೆ

ಶ್ರೀಕ್ಷೇತ್ರ ಹೊರನಾಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X