Search
  • Follow NativePlanet
Share
» »ಐಷಾರಾಮಿ ವಿವಾಹಕ್ಕೆ ಸೂಕ್ತವಾದ ಪ್ಯಾಲೆಸ್‍ಗಳು

ಐಷಾರಾಮಿ ವಿವಾಹಕ್ಕೆ ಸೂಕ್ತವಾದ ಪ್ಯಾಲೆಸ್‍ಗಳು

ವಿವಾಹ ಒಂದು ಪವಿತ್ರವಾದ ಬಂಧನ. ಬ್ರಹ್ಮನ ಗಂಟು ಇದು 2 ಹೃದಯಗಳ ನಡುವಿನ ಬಿಡಿಸಲಾಗದ ಸಂಬಂಧ. ಮದುವೆ ಎಂದರೆ ಕೇವಲ ಸಮಾರಂಭವಲ್ಲ ಅದು ಹೆಣ್ಣು ಗಂಡಿನ ನಡುವೆ ಬೆಸೆಯುವ ದೀರ್ಘವಾದ ಬಂಧನ. ವಿವಾಹ ಎಂಬುದು ಭಾರತೀಯ ಸಂಸ್ಕøತಿಯಲ್ಲಿ ಅತ್ಯಂತ ಪ್ರಮುಖವಾ

ವಿವಾಹ ಒಂದು ಪವಿತ್ರವಾದ ಬಂಧನ. ಬ್ರಹ್ಮನ ಗಂಟು ಇದು 2 ಹೃದಯಗಳ ನಡುವಿನ ಬಿಡಿಸಲಾಗದ ಸಂಬಂಧ. ಮದುವೆ ಎಂದರೆ ಕೇವಲ ಸಮಾರಂಭವಲ್ಲ ಅದು ಹೆಣ್ಣು ಗಂಡಿನ ನಡುವೆ ಬೆಸೆಯುವ ದೀರ್ಘವಾದ ಬಂಧನ. ವಿವಾಹ ಎಂಬುದು ಭಾರತೀಯ ಸಂಸ್ಕøತಿಯಲ್ಲಿ ಅತ್ಯಂತ ಪ್ರಮುಖವಾದುದು. ವಿವಾಹಗಳು ಭಾರತದಲ್ಲಿ ಹಲವಾರು ಬಗೆಬಗೆಯಲ್ಲಿ ನಡೆಯುತ್ತವೆ. ಕೆಲವು ವಿವಾಹಗಳು ದೇವಾಲಯದಲ್ಲಿ ನಡೆದರೆ, ಕೆಲವು ವಿವಾಹಗಳು ಚರ್ಚ್, ಕಲ್ಯಾಣ ಮಂಟಪದಲ್ಲಿ ನಡೆಯುತ್ತವೆ. ಪ್ರತಿಯೊಬ್ಬರಲ್ಲೋ ತಮ್ಮ ವಿವಾಹ ರಾಜ ವೈಭವದಿಂದ ನಡೆಯಬೇಕು ಎಂಬ ಕನಸು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ನಮ್ಮ ದೇಶದಲ್ಲಿ ಹಲವಾರು ಬಗೆಯ ರಾಜ ವೈಭೋಗದಲ್ಲಿ ವಿವಾಹಗಳು ನಡೆಯುತ್ತವೆ. ಎಲ್ಲೆಲ್ಲಿ ನಡೆಯುತ್ತವೆ ಎಂದು ಯೋಚಿಸುತ್ತಿದ್ದಿರಾ? ಪ್ರಸ್ತುತ ಲೇಖನದಲ್ಲಿ ಭಾರತದಲ್ಲಿ ರಾಜ ವೈಭೋಗದಿಂದ ವಿವಾಹ ನಡೆಯುವ ಪ್ಯಾಲೆಸ್‍ಗಳ ಬಗ್ಗೆ ತಿಳಿಯಿರಿ.

1. ಲಲಿತ ಮಹಲ್ ಪ್ಯಾಲೆಸ್

1. ಲಲಿತ ಮಹಲ್ ಪ್ಯಾಲೆಸ್

ಲಲಿತ ಪ್ಯಾಲೆಸ್ ಕರ್ನಾಟಕದಲ್ಲಿನ ಮೈಸೂರಿನಲ್ಲಿದೆ. ಇದನ್ನು ವೈಟ್ ಹೌಸ್ ಎಂದು ಸಹಾ ಕರೆಯುತ್ತಾರೆ. ಈ ಪ್ಯಾಲೆಸ್‍ನ ವಿವಾಹವನ್ನು ಕಣ್ಣಾರೆ ಕಂಡೇ ಆನಂದಿಸಬೇಕು. ಲಲಿತ ಮಹಲ್ ಪ್ಯಾಲೆಸ್ ಕರ್ನಾಟಕದಲ್ಲಿನ ಅತ್ಯಂತ ಐಷಾರಾಮಿ ವಿವಾಹ ತಾಣ ಇದಾಗಿದೆ. ಪೂರ್ವದಲ್ಲಿ ಮೈಸೂರು ಮಹಾರಾಜರು ಬಂದ ಅತಿಥಿಗಳಿಗೆ ನಿರ್ಮಿಸಲಾಗಿದ್ದ ಈ ಮಹಲ್ ಈಗ ವಿವಾಹಗಳು ನಡೆಯುವ ಪ್ಯಾಲೆಸ್ ಆಗಿದೆ.
pc:Prakash Subbarao

2.ನೀಮ್‍ರಾಣ ಕೋಟೆ

2.ನೀಮ್‍ರಾಣ ಕೋಟೆ

ಈ ಪ್ಯಾಲೆಸ್ ಜೈಪುರ ಹಾಗೂ ದೆಹಲಿಯ ಮಾರ್ಗ ಮಧ್ಯೆಯಲ್ಲಿದೆ. ನೀಮ್‍ರಾಣ ಕೋಟೆ ಅತ್ಯಂತ ಸುಂದರವಾದ ಪ್ಯಾಲೆಸ್ ಆಗಿದೆ. ಇಲ್ಲಿ ಹಲವಾರು ಶ್ರೀಮಂತರ ವಿವಾಹಗಳು ನಡೆಯುತ್ತಿರುತ್ತದೆ. ಭಾರತದ ಐಷಾರಾಮಿ ವಿವಾಹಗಳ ಪ್ಯಾಲೆಸ್‍ಗಳ ಪೈಕಿ ಈ ಕೋಟೆಯು ಒಂದು. ಇಲ್ಲಿನ ವಿವಾಹ ಸಮಾರಂಭವು ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭವವನ್ನು ಉಂಟು ಮಾಡುತ್ತದೆ.

PC:Archit Ratan

3.ದೇವಿ ಗ್ರಾ ಪ್ಯಾಲೆಸ್

3.ದೇವಿ ಗ್ರಾ ಪ್ಯಾಲೆಸ್

ದೇವಿ ಗ್ರಾ ರಾಜಸ್ಥಾನದಲ್ಲಿರುವ ಪ್ರಸಿದ್ದವಾದ ಪ್ಯಾಲೆಸ್‍ಗಳಲ್ಲಿ ಒಂದಾಗಿದೆ. ರಾಜಸ್ಥಾನದ ಸಂಸ್ಕøತಿಯಲ್ಲಿ ನಡೆಯುವ ಇಲ್ಲಿನ ವಿವಾಹವು ಜೀವನದಲ್ಲಿ ಎಂದು ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ. ದೇವಿ ಗ್ರಾ ಪ್ಯಾಲೆಸ್ 18 ನೇ ಶತಮಾನದಲ್ಲಿ ನಿರ್ಮಾಣವಾದ ಪ್ರಾಚೀನವಾದ ಪ್ಯಾಲೆಸ್. ಇಲ್ಲಿನ ವಿವಾಹಗಳು ಅತ್ಯಂತ ರೋಮಾಂಚನಕಾರಿ ಹಾಗೂ ಐಷಾರಾಮಿಯಾಗಿರುವುದಲ್ಲದೇ, ಈ ಪ್ಯಾಲೆಸ್ ನ ಮುಂಭಾಗದಲ್ಲಿ ಸುಂದರವಾದ ಉದ್ಯಾನ ವನದಿಂದ ಕಂಗೊಳಿಸುತ್ತಿದೆ.
PC:NATIVE PLANET

4.ಸಿಟಿ ಪ್ಯಾಲೆಸ್

4.ಸಿಟಿ ಪ್ಯಾಲೆಸ್

ಸಿಟಿ ಪ್ಯಾಲೆಸ್‍ನಲ್ಲಿ ಸುಮಾರು 1000 ಅತಿಥಿಗಳ ಇರಬಹುದಾದಷ್ಟು ದೊಡ್ಡದಾಗಿದೆ. ಈ ಪ್ಯಾಲೆಸ್ ಕೂಡ ಪ್ರಾಚೀನವಾದುದಾಗಿದ್ದು, 17 ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಉತ್ತಮವಾದ ಹೋಟೆಲ್ ಎಂದು 3 ಬಾರಿ ಪ್ರಶಸ್ತಿಯನ್ನು ಗಳಿಸಿದೆ. ಈ ಪ್ಯಾಲೆಸ್ ಅತ್ಯಂತ ಐಷಾರಾಮಿ ಕೊಠಡಿಗಳನ್ನು ಹೊಂದಿದೆ. ಸಿಟಿ ಪ್ಯಾಲೆಸ್‍ನ ಮುಂಭಾಗ ಕಣ್ಣಿಗೆ ಮುದ ನೀಡುವಂತೆ ಗಾರ್ಡನ್‍ಗಳನ್ನು ಕಾಣಬಹುದಾಗಿದೆ.
PC:Diego Delso

5. ಒಬೆರಾಯ್ ಉದಯ್ ವಿಲಾಸ್

5. ಒಬೆರಾಯ್ ಉದಯ್ ವಿಲಾಸ್

ಒಬೆರಾಯ್ ಉದಯ್ ವಿಲಾಸ್ ಪ್ಯಾಲೆಸ್ ಉದಯಪುರದಲ್ಲಿದೆ. ಅತ್ಯಂತ ಐಷಾರಾಮಿ ಪ್ಯಾಲೆಸ್‍ಗಳಲ್ಲಿ ಇದು ಒಂದು. ಇಲ್ಲಿ ಹಲವಾರು ವಿವಾಹಗಳು ನಡೆಯುತ್ತಿರುತ್ತವೆ. ಇಲ್ಲಿ ಸ್ವಿಂಮಿಂಗ್ ಪೂಲ್, ಗಾರ್ಡನ್, ಭವ್ಯವಾದ ವಿವಾಹ ಸ್ಥಳ, ವಿಲಾಸದ ಒಳಗೆ ಹಲವಾರು ಬಗೆ ಬಗೆಯ ಕಲಾಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.
PC:McKay Savage

6.ಉಮಾಯಿದ್ ಭವನ್ ಪ್ಯಾಲೆಸ್

6.ಉಮಾಯಿದ್ ಭವನ್ ಪ್ಯಾಲೆಸ್

ಈ ಇಮಾಯಿದ್ ಭವನ್ ಪ್ಯಾಲೆಸ್ ಸುಮಾರು 26 ಎಕ್ಕರೆಗಳಲ್ಲಿ ನಿರ್ಮಿಸಲಾಗಿದೆ. ಭಾರತದ ಐಷಾರಾಮಿ ವಿವಾಹ ನಡೆಯುವ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲೂ ಕುಡ ಗಾರ್ಡನ್ ಮತ್ತು ಅತ್ಯಂತ ಸುಂದರವಾದ ಊಟದ ಸ್ಥಳಗಳನ್ನು ಕಾಣಬಹುದು. ಇಲ್ಲಿ ವಿವಾಹ ಮಾಡಿಕೊಳ್ಳುವವರು ರಾಜ ವೈಭವವನ್ನು ಅನುಭವಿಸಬಹುದು.
PC:Ghirlandajo

7.ಅಜಿತ್ ಭವನ್ ಪ್ಯಾಲೆಸ್

7.ಅಜಿತ್ ಭವನ್ ಪ್ಯಾಲೆಸ್

ಈ ಪ್ಯಾಲೆಸ್ ಅನ್ನು ರಾಜ ಶ್ರೀ ಅಜಿತ್ ಸಿಂಗ್‍ಗಾಗಿ ನಿರ್ಮಿಸಿದ ಪ್ಯಾಲೆಸ್ ಇದಾಗಿದೆ. ಇದು ಕೂಡ ಐಷಾರಾಮಿ ಪ್ಯಾಲೆಸ್‍ಗಳಲ್ಲಿ ಒಂದಾಗಿದೆ. ಸಕಲ ಸೌಕರ್ಯಯುತವಾದ ಈ ಪ್ಯಾಲೆಸ್‍ನಲ್ಲಿ ಹಲವಾರು ವಿವಾಹಗಳು ನಡೆಯುತ್ತವೆ.
PC:NATIVE PLANET

8. ತಾಜ್ ಹಾರಿ ಮಹಲ್ ಪ್ಯಾಲೆಸ್

8. ತಾಜ್ ಹಾರಿ ಮಹಲ್ ಪ್ಯಾಲೆಸ್

ಈ ತಾಜ್ ಹಾರಿ ಮಹಲ್ ಪ್ಯಾಲೆಸ್‍ನ ತೋಟಗಳೇ ಸುಮಾರು 6 ಎಕರೆಯಷ್ಟಿದೆ. ಇದು ನವೀನವಾದ ಪ್ಯಾಲೆಸ್ ಆಗಿದ್ದು 21ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಮಹಲ್ ತನ್ನ ವಾಸ್ತು ಶಿಲ್ಪದಿಂದ ಕಂಗೊಳಿಸುತ್ತಿದೆ. ಈ ಪ್ಯಾಲೆಸ್ ಸುಮಾರು 450 ಎಕರೆಗಳಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಇಲ್ಲಿನ ವಿಶೇಷತೆ ಏನೆಂದರೆ ಮದುವೆ ಸಮಾರಂಭಗಳಲ್ಲಿ ಕುದುರೆ, ಆನೆಗಳನ್ನು ನೀಡಲಾಗುತ್ತದೆ.
PC:Leland FranciscO

9.ಲೀಲಾ ಪ್ಯಾಲೆಸ್

9.ಲೀಲಾ ಪ್ಯಾಲೆಸ್

ಉದಯ್‍ಪುರದ ಮತ್ತೊಂದು ಐಷಾರಾಮಿ ಪ್ಯಾಲೆಸ್‍ನಲ್ಲಿ ಲೀಲಾ ಪ್ಯಾಲೆಸ್ ಕೂಡ ಒಂದು. ಇಲ್ಲಿನ ಬೃಹತ್ ಕಟ್ಟಡಗಳು, ಗಾರ್ಡನ್, ನವನವೀನತೆ ದೃಶ್ಯ ವೈಭವದಿಂದ ಈ ಪ್ಯಾಲೆಸ್ ಕಂಗೊಳಿಸುತ್ತಿದೆ. ವಧು, ವರರಿಗೆ ಹಲವು ಬಗೆ ಬಗೆಯ ಸೌಂದರ್ಯ ವರ್ಧಕಗಳನ್ನು ಮಾಡಲಾಗುತ್ತದೆ. ಇಲ್ಲಿ ವಿವಾಹವಾಗುವುದೇ ಒಂದು ಅದೃಷ್ಟ.
PC:Ramón

10.ಲಲಿತ್ ಲಕ್ಷ್ಮಿ ವಿಲಾಸ್

10.ಲಲಿತ್ ಲಕ್ಷ್ಮಿ ವಿಲಾಸ್

ಈ ಲಲಿತ್ ಲಕ್ಷ್ಮಿ ವಿಲಾಸ್ ಪ್ಯಾಲೆಸ್ 1911ರಲ್ಲಿ ಸ್ಥಾಪಿಸಲಾಯಿತು. ಇದು ಕೂಡ ಉದಯಪುರದಲ್ಲಿರುವುದು ವಿಶೇಷ. ಆಧುನಿಕವಾದ ಹಾಗೂ ಐಷಾರಾಮಿಯಾದ ಪ್ಯಾಲೆಸ್ ಇದಾಗಿದೆ.
PC:Kumar's Edit

11.ಟ್ರಿಡೆಂಟ್

11.ಟ್ರಿಡೆಂಟ್

ಈ ಟ್ರಿಡೆಂಟ್ ಪ್ಯಾಲೆಸ್ ಕೂಡ ಉದಯಪುರದಲ್ಲಿದೆ. ಅತ್ಯಂತ ರೋಮಾಂಚಕಾರಿಯಾಗಿರುವ ಈ ಪ್ಯಾಲೆಸ್ ಪ್ರವಾಸಿಗರ ಮನ ಸೆಳೆಯುತ್ತದೆ. ಹಲವಾರು ಜೋಡಿಗಳ ವಿವಾಹಗಳು ಇಲ್ಲಿ ನಡೆದಿವೆ. ಉದಯಪುರದ ಸಾಂಸ್ಕøತಿಕ ಆತಿಥ್ಯವನ್ನು ನೀವು ಇಲ್ಲಿ ಅಸ್ವಾಧಿಸಬಹುದು.
PC:Nishanth Jois

12. ತಾಜ್ ಲೇಕ್ ಪ್ಯಾಲೆಸ್

12. ತಾಜ್ ಲೇಕ್ ಪ್ಯಾಲೆಸ್

ಈ ಪ್ಯಾಲೆಸ್‍ನಲ್ಲಿ ಪ್ರಪಂಚದಲ್ಲಿ ಎಲ್ಲೂ ಕಾಣಲಾಗದಂತಹ ಅನುಭುತಿಯನ್ನು ನೀವು ಇಲ್ಲಿ ಪಡೆಯಬಹುದಾಗಿದೆ. ನಿಮ್ಮ ಮದುವೆ ವೈಭವದಿಂದ ನಡೆಯಬೇಕು ಎಂದು ಕನಸು ಕಾಣುತ್ತಿದ್ದರೆ ಈ ತಾಜ್ ಲೇಕ್ ಅತ್ಯುತ್ತಮವಾದ ಪ್ಯಾಲೆಸ್ ಆಗಿದೆ. ಈ ಪ್ಯಾಲೆಸ್ ತನ್ನ ವಾಸ್ತು ಶಿಲ್ಪ ಹಾಗೂ, ಗಾಜಿನಿಂದ ಕೂಡಿದ ಅಲಂಕಾರಗಳು, ನೀಲಿ ಬಣ್ಣದ ಸರೋವರಗಳು ಇನ್ನಷ್ಟು ಈ ಪ್ಯಾಲೆಸ್‍ಗೆ ಸೋಬಗು ನೀಡಿದೆ.
PC:Lily Pond

13.ಫೇಚ್ ಪ್ರಕಾಶ ಪ್ಯಾಲೆಸ್

13.ಫೇಚ್ ಪ್ರಕಾಶ ಪ್ಯಾಲೆಸ್

ಊಹಿಸಲಾಗದಂತಹ ಮದುವೆ ಸಮಾರಂಭಗಳು ಈ ಫೇಚ್ ಪ್ರಕಾಶ ಪ್ಯಾಲೆಸ್‍ನಲ್ಲಿ ನಡೆಯುತ್ತವೆ. ಇದು 20ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಪ್ಯಾಲೆಸ್. ಅಂತರಾಷ್ಟ್ರೀಯ ಹಾಗೂ ರಾಜಾಸ್ಥಾನದ ಸಂಸೃತಿಯ ಸಾಕ್ಷಿ ಈ ಫೇಚ್ ಪ್ರಕಾಶ ಪ್ಯಾಲೆಸ್.
PC:Arian Zwegers

14.ಚುಂಡ ಪ್ಯಾಲೆಸ್

14.ಚುಂಡ ಪ್ಯಾಲೆಸ್

ಈ ಚುಂಡ ಪ್ಯಾಲೆಸ್ ಕೂಡ ರಾಜಸ್ಥಾನದ ಉದಯಪುರದಲ್ಲಿದೆ. ಇದು ಕೂಡ ಭಾರತದಲ್ಲಿನ ಐಷಾರಾಮಿ ವಿವಾಹಗಳು ನಡೆಯುವ ತಾಣವಾಗಿದೆ. ನೋಡಲು ಅತ್ಯಾಧುನಿಕವಾಗಿ ಕಂಗೊಳಿಸುವ ಈ ಪ್ಯಾಲೆಸ್ ಹಲವಾರು ವಿಶೇಷತೆಗಳನ್ನು ಈ ಪ್ಯಾಲೆಸ್ ಒಳಗೊಂಡಿದೆ.
PC:denisbin

15.ಜೈ ಮಹಲ್ ಪ್ಯಾಲೆಸ್

15.ಜೈ ಮಹಲ್ ಪ್ಯಾಲೆಸ್

ಇದು ಕೂಡ ರಾಜಾಸ್ಥನದಲ್ಲಿರುವ ಪ್ಯಾಲೆಸ್ ಆಗಿದ್ದು, ಪ್ಯಾಲೆಸ್‍ನ ಒಳಭಾಗದಲ್ಲಿನ ಮೊಗಲರು 18 ಎಕ್ಕರೆಗಳಲ್ಲಿ ಉದ್ಯಾನವನವನ್ನು ನಿರ್ಮಿಸಿರುವುದನ್ನು ಕಾಣಬಹುದಾಗಿದೆ. ಇದನ್ನು ತಾಜ್ ಹೋಟೆಲ್ ನಿರ್ವಹಿಸುತ್ತಿರುವ ಮತ್ತೊಂದು ಹೋಟೆಲ್ ಇದಾಗಿದ್ದು ಹಲಾವರು ಪ್ರವಾಸಿಗರು ಇಷ್ಟ ಪಟ್ಟು ವಿವಾಹವಾಗುವ ತಾಣಗಳಲ್ಲಿ ಈ ಐಷಾರಾಮಿ ಪ್ಯಾಲೆಸ್ ಕೂಡ ಒಂದು.
PC:Jal Mahal Project

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X