Search
  • Follow NativePlanet
Share
» »ಪರಶುರಾಮರ 108 ಶಿವಾಲಯಗಳು ಭಾಗ 2

ಪರಶುರಾಮರ 108 ಶಿವಾಲಯಗಳು ಭಾಗ 2

By Vijay

ಪರಶುರಾಮರ 108 ಶಿವನ ದೇವಸ್ಥಾನಗಳ ಪೈಕಿ ಈಗಾಗಲೇ 54 ವಿವಿಧ ದೇವಸ್ಥಾನಗಳ ಕುರಿತು ಈ ಸರಣಿಯ ಭಾಗ ಒಂದರ ಲೇಖನದಲ್ಲಿ ತಿಳಿದಿರುತ್ತೀರಿ. ಮಿಕ್ಕ ಶಿವನ ದೇಗುಲಗಳ ಕುರಿತು ಪ್ರಸ್ತುತ ಲೇಖನದ ಭಾಗ ಎರಡರ ಮೂಲಕ ತಿಳಿಯಿರಿ. ಅವಕಾಶ ದೊರೆತಾಗ ಈ ದೇವಾಲಯಗಳಿಗೆ ತೆರಳಲು ಮರೆಯದಿರಿ. ಬಹುತೇಕವಾಗಿ ಈ ದೇವಾಲಯಗಳು ಪ್ರಕೃತಿ ವೈಭವದಿಂದ ಕಂಗೊಳಿಸುವ ಚಿಕ್ಕ ಪುಟ್ಟ ಗ್ರಾಮಗಳಲ್ಲಿ ನೆಲೆಸಿದ್ದು ನಿಮ್ಮ ಪ್ರವಾಸವು ಸುಮಧುರಮಯವಾಗಿದ್ದು ನಿಮ್ಮನ್ನು ಪ್ರಸನ್ನಗೊಳಿಸುವುದರಲ್ಲಿ ಯಾವುದೆ ಅನುಮಾನವಿಲ್ಲ.

ವಿಶೇಷ ಲೇಖನ : ನೀವು ಕೇಳಿರದ ಶಿವನ ಪುರಾತನ ಹಾಗೂ ಅನನ್ಯ ದೇವಸ್ಥಾನಗಳು

ಪರಶುರಾಮರ 108 ಶಿವಾಲಯಗಳು ಭಾಗ 1

ಲೇಖನದಲ್ಲಿ ಬಳಸಲಾಗಿರುವ ದೇವಸ್ಥಾನಗಳಿಗೆ ಚಿತ್ರಕೃಪೆ : shaivam.org

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕೊಡುಂಬು ಮಹಾದೇವರ್ ಕ್ಷೇತ್ರ : ಪರಶುರಾಮರ 108 ಶಿವಾಲಯಗಳ ಪೈಕಿ ಇದು ಇಂದಾಗಿದ್ದರೂ ಸಹ ಮುಖ್ಯವಾಗಿ ಇದು ಸುಬ್ರಹ್ಮಣ್ಯನ ದೇವಸ್ಥಾನ ಎಂದೆ ಖ್ಯಾತಿ ಪಡೆದಿದೆ. ಕೇರಳದ ಪಳನಿ ಎಂತಲೂ ಸಹ ಇದನ್ನು ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಮುಖ್ಯ ದೇವರು ಸುಬ್ರಹ್ಮಣ್ಯನಾಗಿದ್ದು ಶಿವಲಿಂಗವೂ ಸಹ ಪ್ರತಿಷ್ಠಾಪಿಸಲ್ಪಟ್ಟಿದೆ. ಪಾಲಕ್ಕಾಡ್ - ಚಿತ್ತೂರು ರಸ್ತೆ ಮಾರ್ಗದಲ್ಲಿ ಕೊಡುಂಬುರು ಎಂಬಲ್ಲಿಳಿದು ಅಲ್ಲಿಂದ ಐದು ಕಿ.ಮೀ ಕ್ರಮಿಸುವುದರ ಮೂಲಕ ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕಿಲ್ಲಿಕುರಿಸಿಮಂಗಲಂ ದೇವಾಲಯ : ಧ್ಯಾನಾವಸ್ಥೆಯಲ್ಲಿರುವ ಶಿವನನ್ನು ಹೊಂದಿರುವ ಈ ದೊಡ್ಡ ದೇವಾಲಯವು ಪಾಲಕ್ಕಾಡ್ ಜಿಲ್ಲೆಯ ಲಕ್ಕಿಡಿ ರೈಲು ನಿಲ್ದಾಣ ಬಳಿ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತ್ರಿಕ್ಕಪಾಲೇಶ್ವರಂ ದೇವಾಲಯ : ಇದೆ ಹೆಸರಿನ ಒಂದು ದೇವಾಲಯವು ಕೋಳಿಕೋಡ್ ಜಿಲ್ಲೆಯಲ್ಲಿದ್ದರೆ ಈ ಶಿವ ದೇವಾಲಯವು ಪತನಂತಿಟ್ಟ ಜಿಲ್ಲೆಯಲ್ಲಿದೆ. ಜಿಲ್ಲೆಯ ತಿರುವಲ್ಲಾ - ಮಾವೆಲಿಕ್ಕಾರೆ ರಸ್ತೆ ಮಾರ್ಗದಲ್ಲಿ ಬರುವ ಅಲಂತುರ್ತಿ ಸೇತುವೆಯ ಬಳಿ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತಿರುವಟ್ಟಾ ಮಹಾದೇವ ದೇವಾಲಯ : ಮಹಾದೇವನ ಈ ದೇವಾಲಯದಲ್ಲಿ ಶಿವಲಿಂಗವು ಸ್ವಯಂಭು ಲಿಂಗವಾಗಿದ್ದು ದೇವಾಲಯದ ನೆಲದಿಂದ ಕೆಳಗೆ ಪ್ರತಿಷ್ಠಾಪನೆಗೊಂಡಿದೆ. ಮಳೆಗಾಲದ ಸಂದರ್ಭದಲ್ಲಿ ನೀರಿನಲ್ಲಿ ಈ ಲಿಂಗವು ಮುಳುಗಿರುತ್ತದೆ. ಪತನಾಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕುನ್ನಪುರಂ ಕುನ್ನತು ಮಹಾದೇವ ದೇವಾಲಯ : ಈ ದೇವಾಲಯವು ಗುಡ್ಡ ಹಾಗಿರುವ ಎತ್ತರದ ಪ್ರದೇಶವೊಂದರ ಮೇಲೆ ನಿರ್ಮಿಸಲ್ಪಟ್ಟಿದೆ. ಮೊದಲಿ ಇದರ ಸುತ್ತಲು ಕೇವಲ ಕಲ್ಲು ಮುಳ್ಳು, ಗಿಡ ಮರಗಳು ತುಂಬಿಕೊಂಡಿದ್ದವು. ಕಾಲಾಂತರದಲ್ಲಿ ಈ ದೇವಾಲಯಕ್ಕೆ ತೆರಳಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯ ತಿರುವನಂತಪುರಂ ಜಿಲ್ಲೆಯ ಕುದಪ್ಪನಕುಣ್ಣು ಎಂಬಲ್ಲಿ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ರವೀಶ್ವರಪುರಂ ಶಿವ ದೇವಾಲಯ : ತ್ರಿಶ್ಶೂರಿನಲ್ಲಿರುವ ಕೊಡುಂಗಲ್ಲೂರು ಪಾಲಿಕೆ ಕಚೇರಿಯ ಬಳಿ ಶಿವನ ಈ ದೇವಾಲಯ ಸ್ಥಿತವಿದೆ. ಹಚ್ಚಹಸಿರಿನಿಂದ ಕೂಡಿದ ಪ್ರಕೃತಿಯ ಮಧ್ಯೆ ಸುಂದರವಾಗಿ ಈ ದೇವಾಲಯ ನೆಲೆಸಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಮುಂಡಯೂರು ಶಿವ ದೇವಾಲಯ : ಇಂದು ಮಂಡೂರು ಎಂದು ಕರೆಯಲ್ಪಡುವ ಮುಂಡಯೂರಿನಲ್ಲಿ ಶಿವನ ಈ ದೇವಾಲಯವಿದೆ. ಮುಂಡಯೂರಪ್ಪನ್ ಎಂದು ಕರೆಯಲ್ಪಡುವ ಈ ಶಿವನು ಹಿಂದೆ ಇಲ್ಲಿನ ಜನರನ್ನು ಕೋಳಿಕೋಡ್ ರಾಜನ ಸೈನಿಕರಿಂದ ಕಾಪಾಡಿದ್ದನೆಂದು ನಂಬಲಾಗಿದೆ. ತ್ರುಶಿವ ಪೇರೂರಿನ ಮುಂಡಯೂರಿನಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಚೊವ್ವಲೂರು ಶಿವ ದೇವಾಲಯ : ನೀರಿನ ಅಭಿಷೇಕ ಹಾಗೂ ಬಿಲ್ವ ಪತ್ರೆಗಳನ್ನು ಮಾತ್ರ ಇಲ್ಲಿನ ಶಿವಲಿಂಗಕ್ಕೆ ಸಮರ್ಪಿಸಲಾಗುತ್ತದೆ. ಕೇರಳದ ಪ್ರಖ್ಯಾತ ಗುರುವಾಯೂರಿನ ದೇವಸ್ಥಾನದ ಬಳಿ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪನಂಚೆರಿ - ಮುಡಿಕ್ಕೊಡೆ ಶಿವ ದೇವಾಲಯ : ತ್ರಿಶ್ಶೂರಿನಿಂದ 12 ಕಿ.ಮೀ ಗಳಷ್ಟು ದೂರದಲ್ಲಿರುವ ಮುಡಿಕ್ಕೊಡೆ ಎಂಬಲ್ಲಿ ಶಿವನ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಅನ್ನಮನಾದ ಶಿವ ದೇವಾಲಯ : ಮನುಷ್ಯನಷ್ಟೆ ಎತ್ತರವಾದ ಶಿವಲಿಂಗವನ್ನು ಹೊಂದಿದೆ ಈ ದೇವಸ್ಥಾನ. ಅಲ್ಲದೆ ಇತರೆ ಉಪದೇವತೆಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ತ್ರಿಶ್ಶೂರ್ ಜಿಲ್ಲೆಯ ಕೊರಟ್ಟಿ ಅನ್ನಮನಾದ ಮಾರ್ಗದಲ್ಲಿ ಚಾಲಕ್ಕುಡಿ ನದಿಯನ್ನು ದಾಟಿ ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಅವನೂರು ಶ್ರೀಕಂಠೇಶ್ವರಂ ಶಿವ ದೇವಾಲಯ : ಐತಿಹಾಸಿಕವಾಗಿ ಈ ದೇವಾಲಯವು ಚಿಟ್ಟಿಲಪಿಲ್ಲಿ ಗ್ರಾಮದ ಭಾಗವಾಗಿದೆ. ದೇವಾಲಯವು ಮುಂಡೂರು - ವೆಲಪ್ಪಾಯ - ಮನಿತರಾ - ತ್ರಿಶ್ಶೂರು ಮಾರ್ಗದಲ್ಲಿ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತಿರುಮಂಗಲಂ ಶಿವ ದೇವಾಲಯ : ಗುರುವಾಯೂರು - ವದನಪಿಲ್ಲಿ ಬಸ್ಸು ಮಾರ್ಗದಲ್ಲಿ ಬರುವ ಎಂಗಾಂದಿಯೂರು ಬಳಿಯಿರುವ ತಿರುಮಂಗಲಂನಲ್ಲಿ ಈ ಶಿವ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಅಷ್ಟಮಂಗಲಂ ಶಿವ ದೇವಾಲಯ : ರೌದ್ರ ಭಾವದಲ್ಲಿರುವ ಶಿವನ ಈ ದೇವಾಲಯವು ತ್ರಿಶ್ಶೂರು ಕಂಜಾನಿ ರಸ್ತೆ ಮಾರ್ಗದಲ್ಲಿ ಬರುವ ಎಲ್ತುರುತು ನಿಲ್ದಾಣದ ಬಳಿ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಐರಾನಿಕ್ಕುಲಂ ಮಹಾದೇವ ದೇವಾಲಯ : ವಡಕ್ಕೆದತಪ್ಪನ ಹಾಗೂ ತೆಕ್ಕೆಡತಪ್ಪನ್ ಎಂಬ ಎರಡು ರೂಪದಲ್ಲಿ ಶಿವನು ಇಲ್ಲಿ ನೆಲೆಸಿದ್ದಾನೆ. ತ್ರಿಶ್ಶೂರ್ ಜಿಲ್ಲೆಯ ಮಾಲಾದಿಂದ ಆರು ಕಿ.ಮೀ ದೂರದಲ್ಲಿರುವ ಐರಾನಿಕ್ಕುಲಂ ಎಂಬಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕೈನೂರು ಶಿವ ದೇವಾಲಯ : ಪ್ರಕೃತಿಯಿಂದ ಸಂಪದ್ಭರಿತವಾಗಿರುವ ಪ್ರದೇಶದಲ್ಲಿ ಈ ಶಿವ ದೇವಾಲಯವು ಸ್ಥಿತವಿದೆ. ತ್ರಿಶ್ಶೂರು ಜಿಲ್ಲೆಯ ಕೈನೂರು ಎಂಬ ಗ್ರಾಮದಲ್ಲಿ ಈ ಶಿವ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಆಡಟ್ಟು ಮಾಹಾದೇವ ದೇವಾಲಯ : ಮುತುವರೆ ಬಸ್ಸು ನಿಲ್ದಾಣದಿಂದ ಮೂರು ಕಿ.ಮೀ ದೂರದಲ್ಲಿರುವ ಆಡಟ್ ಎಂಬಲ್ಲಿ ಈ ದೇವಾಲಯವಿದೆ. ತ್ರಿಶ್ಶೂರು - ಕುನಂ - ಕುಲಂ ಬಸ್ಸು ಮಾರ್ಗದಲ್ಲಿ ಈ ನಿಲ್ದಾಣವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತ್ರಿಕ್ಕೂರು ಮಹಾದೇವ ದೇವಾಲಯ : ಮನಾಲಿ ನದಿಯ ಬಳಿಯಿರುವ ಒಂದು ಗುಡ್ಡದ ಮೇಲೆ ಈ ಶಿವ ದೇವಾಲಯ ಸ್ಥಿತವಿದೆ. ಇದೊಂದು ಗುಹಾಂತರ ದೇವಾಲಯವಾಗಿದ್ದು ಶಿವನು ಇಲ್ಲಿ ರೌದ್ರ ಭಾವದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ತ್ರಿಶ್ಶೂರ್ - ಪೊನ್ನುಕ್ಕಾರಾ ಮಾರ್ಗದಲ್ಲಿರುವ ತ್ರಿಕ್ಕೂರಿನಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಚೆಮ್ಮಂತಿಟ್ಟ ಶಿವ ದೇವಾಲಯ : ಇಲ್ಲಿ ಶಿವನು ಸತಿಧ್ಯಾನದಲ್ಲಿ ಮುಳುಗಿದ ರೂಪದಲ್ಲಿದೆ. ತ್ರಿಶ್ಶೂರ್ ಕುನ್ನಂಕುಲಂ ಮಾರ್ಗದಲ್ಲಿ ಸಾಗಿ ಪನ್ನಿತಾದಂನಲ್ಲಿಳಿದು ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತ್ರಿಕುಣ್ಣು ಶಿವ ದೇವಾಲಯ : ಹನುಮಂತನಿಂದ ಶೋಧಿಸಲಾದ ತೇಜವು ಈ ದೇವಸ್ಥಾನದಲ್ಲಿದೆ ಎಂದು ನಂಬಲಾಗಿದೆ. ತ್ರಿಶ್ಶೂರ್ ತ್ರಿಪ್ರಯಾರ್ ಮಾರ್ಗದಲ್ಲಿ ಬರುವ ಕಂಜನಿಯ ಬಳಿ ಗುಡ್ಡವೊಂದರ ಮೇಲೆ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಚೆರುವತೂರು ಶಿವ ದೇವಾಲಯ : ತ್ರಿಶ್ಶೂರ್ ಜಿಲ್ಲೆಯ ಕುನ್ನಂಕುಲಂ ಬಸ್ಸು ನಿಲ್ದಾಣದಿಂದ ಒಂದುವರೆ ಕಿ.ಮೀ ದೂರದಲ್ಲಿ ಈ ಶಿವ ದೇವಾಲಯವಿದೆ. ಸ್ವಯಂಭು ಶಿವಲಿಂಗವನ್ನು ಹೊಂದಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪೊಂಗನಂ ಶಿವ ದೇವಾಲಯ : ಪೊಂಗನಂ ಪುಂಗನ್ನಂ ಶಿವ ದೇವಾಲಯ ಎಂತಲೂ ಕರೆಯಲ್ಪಡುವ ಈ ದೇವಸ್ಥಾನವು ತ್ರಿಶ್ಶೂರ್ ನಗರ ಕೇಂದ್ರದಿಂದ ಸುಮಾರು ಎರಡು ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಅವಿಟ್ಟತೂರು ಮಹಾದೇವ ದೇವಾಲಯ : ಪುರಾತನ ಶೈಲಿಯಲ್ಲಿರುವ ಈ ಶಿವ ದೇವಾಲಯವು ತ್ರಿಶ್ಶೂರ್ ಜಿಲ್ಲೆಯಲ್ಲಿದೆ. ತ್ರಿಶ್ಶೂರಿನ ಇರಿಂಜಲಕುಡದಿಂದ ಸುಮಾರು ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕಟ್ಟಕಂಪಾಲಾ ಮಹಾದೇವ ದೇವಾಲಯ : ಪೂರ್ವಕ್ಕೆ ದರ್ಶನ ದ್ವಾರ ಹೊಂದಿರುವ ಈ ಶಿವ ದೇವಾಲಯವು ತ್ರಿಶ್ಶೂರಿನ ಕುನ್ನಂಕುಲಂ ನಿಂದ ಸುಮಾರು ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪಳಯನ್ನೂರು ಎರವಿಮಂಗಲಂ ಶಿವ ದೇವಾಲಯ : ಶಿವನ ಈ ದೇವಸ್ಥಾನವು ಪಳಯನ್ನೂರಿನಲ್ಲಿದೆ. ತ್ರಿಶ್ಶೂರಿನಿಂದ ಪಳಯನ್ನೂರಿಗೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪೆರಕಂ ಮಹಾದೇವ ದೇವಾಲಯ : ಸೌಮ್ಯ ಭಾವದ ಶಿವನನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ಗುರುವಾಯೂರು ಕುನ್ನಂಕುಲಂ ಬಸ್ಸು ಮಾರ್ಗದಲ್ಲಿ ಮುತುವಟ್ಟೂರು ಎಂಬಲ್ಲಿ ಇಳಿದು ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ನೆಡಿಯಾತಳಿ ಮಹಾದೇವ ದೇವಾಲಯ : ಶಿವನ ಈ ದೇವಸ್ಥಾನ ಚಿಕ್ಕದಾಗಿದ್ದರೂ ಇಲ್ಲಿರುವ ಶಿವಲಿಂಗವು ದೊಡ್ಡದಾಗಿದ್ದು ನೋಡಲು ಆಕರ್ಷಕವಾಗಿದೆ. ಚೆಂತಪುರ ಕೊತಪರಂಬು ಮಧ್ಯದಲ್ಲಿರುವ ನೆಡಿಯತಳಿಯಲ್ಲಿ ಈ ಶಿವ ದೇವಸ್ಥಾನವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತಿರುವಂಚಿಕುಲಂ ಶಿವ ಕ್ಷೇತ್ರ : ಈ ಶಿವಾಲಯದಲ್ಲಿ ಮುಖ್ಯ ದೇವ ಶಿವನನ್ನು ಹೊರತು ಪಡಿಸಿ ಇತರೆ 25 ಉಪದೇವತೆಗಳನ್ನೂ ಸಹ ಕಾಣಬಹುದು. ಒಂದೆ ದೇವಾಲಯದಲ್ಲಿ ಇಷ್ಟು ಸಂಖ್ಯೆಯಲ್ಲಿ ಉಪದೇವತೆಗಳಿರುವುದು ಬಲು ಅಪರೂಪ ಎಂದೆ ಹೇಳಬಹುದು. ತ್ರಿಶ್ಶೂರಿನ ತಿರುವಂಚಿಕುಲಂನಲ್ಲಿ ಈ ಶಿವ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪೆರುಂತಟ್ಟ ಮಹಾದೇವ ದೇವಾಲಯ : ಇಲ್ಲಿರುವ ಈ ಶಿವನ ದೇವಾಲಯವು ಶಕ್ತಿಶಾಲಿ ಎಂದು ಸ್ಥಳೀಯವಾಗಿ ನಂಬಲಾಗುತ್ತದೆ. ಏಕೆಂದರೆ ಮೂರ್ಛೆ ಹಾಗೂ ಇತರೆ ಕೆಲವು ದೇಹ ಬಾಧೆಗಳಿದ್ದವರು ಇಲ್ಲಿರುವ ಶಿವನ ಭಸ್ಮವನ್ನು ಸೇವಿಸಿ/ಲೇಪಿಸಿ ಕೊಂಡರೆ ಅದರಿಂದ ಮುಕ್ತರಾಗಬಹುದೆಂಬ ಬಲವಾದ ನಂಬಿಕೆಯಿದೆ. ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರಿನ ಪಶ್ಚಿಮ ಭಾಗದಲ್ಲಿ ಈ ದೇವಾಲಯವು ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಅಷ್ಟಮಿಚಿರಾ ಮಹಾದೇವ ದೇವಾಲಯ : ಶಿವನ ಮುಖ್ಯ ವಿಗ್ರಹ ಹಾಗೂ ಸ್ವಯಂಭು ಶಿವಲಿಂಗವನ್ನು ಈ ದೇವಾಲಯದಲ್ಲಿ ಕಾಣಬಹುದು. ತ್ರಿಶ್ಶೂರಿನಿಂದ ಮಾಲಾಗೆ ಹೊರಡುವ ಬಸ್ಸಿನಲ್ಲಿ ತೆರಳಿ ಅಷ್ಟಮಿಚಿರಾ ನಿಲ್ದಾಣದಲ್ಲಿಳಿದು ಈ ದೇವಸ್ಥಾನವನ್ನು ತಲುಪಬಹುದು.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಸೋಮೇಶ್ವರಂ ಮಹಾದೇವ ದೇವಾಲಯ : ಪಶ್ಚಿಮಾಭಿಮುಖ ಮಾಡಿ ನೆಲೆಸಿರುವ ಶಿವನು ರೌದ್ರ ಭಾವದಲ್ಲಿರುವುದನ್ನು ಕಾಣಬಹುದು. ತ್ರಿಶ್ಶೂರ್ ಜಿಲ್ಲೆಯ ತಿರುವಿಲ್ವಮಲದ ಬಳಿಯಿರುವ ಪಂಪಡಿ ಎಂಬಲ್ಲಿ ಈ ಶಿವನ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ವೆಂಗನೆಲ್ಲೂರು ಮಹಾದೇವ ದೇವಾಲಯ : ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶಿವನನ್ನು ತಿರುವಿಂಬಿಲಪ್ಪನ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಶಿವನು ಸ್ವಯಂಭು ಶಿವಲಿಂಗ ರೂಪನಾಗಿ ಇಲ್ಲಿ ನೆಲೆಸಿದ್ದಾನೆ. ತ್ರಿಶ್ಶೂರ್ - ತಿರುವಿಲ್ವಮಲ ಮಾರ್ಗದಲ್ಲಿ ಬರುವ ಚೇಲಕ್ಕಾರಾ ಎಂಬ ಸ್ಥಳದಿಂದ ಸುಮಾರು ಒಂದುವರೆ ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕುಲಶೇಖರನೆಲ್ಲೂರು ಶಿವ ದೇವಾಲಯ : ತ್ರಿಶ್ಶೂರ್ ಜಿಲ್ಲೆಯ ಚೆರುತುರ್ಥಿಯ ಶಾಲೆಯ ಪಶ್ಚಿಮಕ್ಕೆ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಶ್ರೀಂಗಪುರಂ ಶಿವ ದೇವಾಲಯ : ಮೂರು ಅಂತಸ್ತುಗಳುಳ್ಳ ಈ ಶಿವ ದೇವಸ್ಥಾನವು ಪೂರ್ವಾಭಿಮುಖವಾಗಿ ನೆಲೆಸಿದೆ. ಇಲ್ಲಿ ನಾಲ್ಕು ಉಪದೇವತೆಗಳಿದ್ದು ನಾಲ್ಕೂ ಉಪದೇವತೆಗಳು ಶಿವನೆ ಆಗಿರುವುದು ವಿಶೇಷ. ಕೊಡುಅಂಗಲ್ಲೂರಿನಲ್ಲಿ ಶಿವನ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಮಮ್ಮಿಯೂರು ಮಹಾದೇವ ದೇವಾಲಯ : ಶಿವನ ಈ ದೇವಾಲಯದಲ್ಲಿ ಶಿವ ಹಾಗೂ ಪಾರ್ವತಿಯರ ದರ್ಶನ ಮಾಡಬಹುದು. ಸ್ಥಳ ಪುರಾಣದ ಪ್ರಕಾರ, ಗುರುವಾಯೂರಪ್ಪನಿಗೆ ನೆಲೆಸಲು ಮಮ್ಮಿಯೂರು ಶಿವನೆ ಸ್ಥಳ ನೀಡದನೆಂದು ಹೇಳಲಾಗುತ್ತದೆ. ಗುರುವಾಯೂರು ದೇವಸ್ಥಾನದಿಂದ ಅರ್ಧ ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪರಂಪಂತಳಿ ಶಿವ ದೇವಾಲಯ : ಗುಡ್ಡದ ಮೇಲೆ ಈ ದೇವಾಲಯವಿದ್ದು ಇಲ್ಲಿ ಶಿವನು ಪಶ್ಚಿಮಾಭಿಮುಖವಾಗಿ ಮದತಿಅಲಪ್ಪನ್ ಆಗಿ ನೆಲೆಸಿ ಭಕ್ತರನ್ನು ಹರಸುತ್ತಾನೆ. ಮಹಾಶಿವಲಿಂಗವು ಆರು ಅಡಿಗಳಷ್ಟು ಎತ್ತರವಿದ್ದು ಗಣಪತಿ ಹಾಗೂ ಸುಬ್ರಹ್ಮಣ್ಯರೂ ಸಹ ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ. ಚಾವಕ್ಕಾಡ್ ಮಾರ್ಗವಾಗಿ ಮುಲಚೇರಿ ಎಂಬಲ್ಲಿ ಇಳಿದು ಈ ದೇವಸ್ಥಾನವನ್ನು ತಲುಪಬಹುದು.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕೊಟ್ಟಪ್ಪುರಂ ಶಿವ ದೇವಾಲಯ : ಈ ಶಿವನ ದೇವಸ್ಥಾನವು ವಡಕ್ಕನಾಥರ್ ಶಿವೆ ದೇವಸ್ಥಾನದೊಂದಿಗೆ ನಿಕಟವಾದ ನಂಟು ಹೊಂದಿದೆ. ಗಣಪತಿ, ರಕ್ಷಸ್ಸು ಹಾಗೂ ನಂದಿಯ ವಿಗ್ರಗಳೂ ಸಹ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ತ್ರಿಶ್ಶೂರ್ ಪಟ್ಟಣದಲ್ಲಿರುವ ವಡಕ್ಕನಾಥರ ದೇವಾಲಯದಿಂದ ಒಂದು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಸ್ದಾನವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಮುತ್ತುವರ ಶಿವ ದೇವಾಲಯ : ಇಲ್ಲಿ ಶಿವ ಹಾಗೂ ವಿಷ್ಣುವಿನ (ನರಸಿಂಹನ ರೂಪದಲ್ಲಿ) ಎರಡು ಮುಖ್ಯ ದೇಗುಲಗಳಿವೆ. ತ್ರಿಶ್ಶೂರ್ ಗುರುವಾಯೂರು ರಸ್ತೆ ಮಾರ್ಗದಲ್ಲಿ ತ್ರಿಶ್ಶೂರಿನಿಂದ ಸುಮಾರು ಆರು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ವೇಲಪ್ಪಾಯ ಮಹಾದೇವ ದೇವಾಲಯ : ಕಲ್ಯಾಣಿಯನ್ನು ಅಥವಾ ಚಿಕ್ಕ ಕೊಳವನ್ನು ಹೊಂದಿರುವ ಶಿವನ ಈ ದೇವಸ್ಥಾನದಲ್ಲಿ ಎರಡು ಸನ್ನಿಧಿಗಳಿವೆ. ತ್ರಿಶ್ಶೂರಿನಿಂದ ಮುಂಡೂರಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪೆರುವನಂ ಶಿವ ಕ್ಷೇತ್ರ : ಇದು ಮೂರು ಗೋಪುರಗಳುಳ್ಳ ಶಿವನ ದೇವಾಲಯವಾಗಿದೆ. ತ್ರಿಶ್ಶೂರಿನಿಂದ ಹನ್ನೆರಡು ಕಿ.ಮೀ ದೂರವಿರುವ ಚೆರ್ಪು ಎಂಬಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ತ್ರಿಸ್ಸಿಲೇರಿ ಮಹಾದೇವ ದೇವಾಲಯ : ಸ್ವಯಂಭು ಶಿವಲಿಂಗ, ಸತಿ ದೇವಿಯ ಉಪಸ್ಥಿತಿ ಹಾಗೂ ಓಂ ಪೀಠವಿರುವ ಈ ಶಿವ ದೇವಾಲಯವು ವಯನಾಡ್ ಜಿಲ್ಲೆಯ ತ್ರಿಚಳಿಯೂರಿನ ತಿರುನೆಲ್ಲಿ ದೇವಾಲಯದ ದಕ್ಷಿಣಕ್ಕೆ ಸ್ಥಿತವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕೊಲ್ಲೂರು ಶಿವ ದೇವಾಲಯ : ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರಿನಲ್ಲಿ ಶಿವನ ಈ ದೇವಾಲಯವಿದೆ. ಇದು ಒಂದು ಸ್ವಯಂಭು ಶಿವಲಿಂಗವಾಗಿದ್ದು ಇತರೆ ಉಪದೇವತೆಗಳೂ ಸಹ ಇಲ್ಲಿವೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Sumita Roy Dutta

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪಲೈಯೂರು ಮಹಾದೇವ ದೇವಾಲಯ : ಸಂತ ಥಾಮಸ್ಸರು ಬಂದು ಇಲ್ಲಿನ ನಂಬೂದರಿ ಪಂಥದವರನ್ನು ಕ್ರೈಸ್ತ ಮತಾಂತರಕ್ಕೆ ಪರಿವರ್ತಿಸಿದ ನಂತರದಲ್ಲಿ ಈ ದೇವಾಲಯ ಚರ್ಚ್ ಆಗಿ ಬದಲಾಗಿದೆ ಎನ್ನಲಾಗಿದೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಎನಕ್ಕಾಡು ವೀರಾನಿಮಂಗಲಂ ಶಿವ ದೇವಾಲಯ : ಈ ದೇವಾಲಯದಲ್ಲಿ ಮುಖ್ಯವಾಗಿ ಶಿವ, ವಿಷ್ಣು ಹಾಗೂ ನರಸಿಂಹನ ವಿಗ್ರಹಗಳಿವೆ. ತ್ರಿಶ್ಶೂರಿನ ವಡಕಂಚೇರಿ ಎಂಬಲ್ಲಿ ಈ ದೇವಾಲಯ ಸ್ಥಿತವಿದೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಕಲ್ಲಟ್ಟಪುಳ ಮಹಾದೇವ ದೇವಾಲಯ : ತ್ರಿಶ್ಶೂರ್ ಜಿಲ್ಲೆಯ ಮುಟ್ಟಿಚೂರ್ ನಿಂದ 25 ಕಿ.ಮೀ ಅಂತರದಲ್ಲಿ ಈ ದೇವಾಲಯವಿದೆ. ಒಂದು ಸುಂದರ ಕೊಳ ಹಾಗೂ ಧ್ಯಾನ ಭಂಗಿಯಲ್ಲಿರುವ ಶಿವನನ್ನು ಈ ದೇವಸ್ಥಾನ ಹೊಂದಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Krishna Kumar

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಮತೂರು ಶಿವ ದೇವಾಲಯ : ಕುನ್ನಂಕುಲಂ - ವಡಕಂಚೇರಿ ರಸ್ತೆ ಮಾರ್ಗದಲ್ಲಿ ಬರುವ ಪನ್ನಿತಾದಂ ಬಳಿ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಚೇತಮಂಗಲಂ - ಶಾಸ್ತಮಂಗಲಂ ದೇವಾಲಯ : ತಿರುವನಂತಪುರಂ ಜಿಲ್ಲೆಯ ಶಾಸ್ತಮಂಗಲಂನಲ್ಲಿ ಶಿವನ ಈ ದೇವಾಲಯ ಸ್ಥಿತವಿದೆ. ಗಣಪತಿ, ಅಯ್ಯಪ್ಪ ಹಾಗೂ ಮುರುಗನ್ ಉಪದೇವತೆಗಳಾಗಿದ್ದಾರೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ರಾಮೇಶ್ವರಂ ಶಿವ ದೇವಾಲಯ : ತಿರುವನಂತಪುರಂ ಜಿಲ್ಲೆಯ ನೆಯ್ಯಾತ್ತಿಂಕಾರಾದಿಂದ ಆರು ಕಿ.ಮೀ ದೂರದಲ್ಲಿರುವ ರಾಮೇಶ್ವರಂ ಎಂಬ ತಾಣದಲ್ಲಿ ಶಿವನ ಈ ದೇವಸ್ಥಾನವಿದೆ. ಜೀವನದಲ್ಲಿ ಯಾವುದೆ ಕಷ್ಟಗಳು ತಲೆದೋರಿದಾಗ ಈ ಶಿವನನ್ನು ದರ್ಶನ ಮಾಡಿ ಪ್ರಾರ್ಥಿಸಿದರೆ ತಕ್ಷಣವೆ ಪರಿಹಾರ ದೊರಕುತ್ತದೆಂಬ ನಂಬಿಕೆಯಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: రహ్మానుద్దీన్

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ವಂಚಿಯೂರು ಶ್ರೀಕಂಠೇಶ್ವರಂ ಮಹಾದೇವ ದೇವಾಲಯ : ತಿರುವನಂತಪುರಂನಲ್ಲಿ ಶಿವನ ಈ ದೇವಸ್ಥಾನವಿದೆ. ಮೂಲತಃ ಎರಡು ದೇವಸ್ಥಾನಗಳಿದ್ದು ನಗರದ ಎಂಜಿ ಭಾಗದಲ್ಲಿ ಹಳೆಯ ದೇವಾಲಯವಿದ್ದರೆ ಕಿಳಕ್ಕೆಕ್ಕೊಟ್ಟ ಎಂಬಲ್ಲಿ ಹೊಸದಾಗಿ ನಿರ್ಮಿಸಲಾದ ದೇವಸ್ಥಾನವಿದೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ವಳಪಿಲ್ಲಿ ಮಹಾದೇವ ದೇವಾಲಯ : ಶಿವ, ಪಾರ್ವತಿ ಹಾಗೂ ಗಣಪತಿಯರನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಶಿವನ 108 ದೇವಸ್ಥಾನಗಳ ಪೈಕಿ ಒಂದಾಗಿದ್ದರೂ ಸಹ ಪ್ರಸ್ತುತ ಗಣಪತಿಯಿಂದ ಈ ದೇವಾಲಯ ಪ್ರಖ್ಯಾತಿಗಳಿಸಿದೆ. ಚಂಗಂಚೇರಿ ಪಟ್ಟಣದ ಮಧುಮೂಲ ಎಂಬಲ್ಲಿ ಈ ದೇವಾಲಯವಿದೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪರುಮಾಳ ಪನಯನ್ನಾರಕಾವು ಮಹಾದೇವ ದೇವಾಲಯ : ಪತನಾಂತಿಟ್ಟ ಜಿಲ್ಲೆಯ ತಿರುವೆಲ್ಲಾ - ಮಾವೇಲಿಕ್ಕಾರಾ ಮಾರ್ಗದ ಪರುಮಾಳ ಎಂಬಲ್ಲಿಂದ ಒಂದು ಕಿ.ಮೀ ದೂರದಲ್ಲಿ ಶಿವನ ಈ ದೇವಸ್ಥಾನವಿದೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪಾದನಾಯರ ಕುಲಂಗಾರ ಶಿವ ದೇವಾಲಯ : ಕೊಲ್ಲಂ ಜಿಲ್ಲೆಯ ಕರುಣಗಪಿಲ್ಲಿ ಎಂಬಲ್ಲಿ ಶಿವನ ಈ ದೇವಸ್ಥಾನವಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jonund

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಪೆರಿಂಚೆಲ್ಲೂರು ರಾಜರಾಜೇಶ್ವರ ದೇವಸ್ಥಾನ : ಕಣ್ಣೂರು ಜಿಲ್ಲೆಯ ತಳಿಪರಂಬು ಎಂಬಲ್ಲಿಂದ ಕೇವಲ ಒಂದು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಸ್ಥಾನವಿದೆ. ಸಾಂದರ್ಭಿಕ ಚಿತ್ರ.

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ಚಿಟ್ಟುಕುಲಂ ಮಹಾದೇವ ದೇವಾಲಯ : ಅಲಪುಳ ಜಿಲ್ಲೆಯ ಪನವಲ್ಲಿ ಎಂಬ ಸ್ಥಳದ ಬಳಿ ಶಿವನ ಈ ದೇವಸ್ಥಾನವಿದೆ. ಇಲ್ಲಿ ಶಿವಲಿಂಗದ ಹಿಂದೆ ಜ್ಯೋತಿಯಿಡುವ ಪ್ರತೀತಿಯಿದೆ. ಅಲ್ಲದೆ ಇಲ್ಲಿನ ತೀರ್ಥವು ಮಾನಸಿಕ ಅಸ್ವಸ್ಥರನ್ನು ಗುಣಮುಖರನ್ನಾಗಿಸುತ್ತದೆ ಎಂಬ ನಂಬಿಕೆಯೂ ಇದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: commonswiki

ಪರಶುರಾಮರ 108 ಶಿವಾಲಯಗಳು:

ಪರಶುರಾಮರ 108 ಶಿವಾಲಯಗಳು:

ವೆಲೊರೆವಟ್ಟಂ ಮಹಾದೇವ ದೇವಾಲಯ : ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವ ದೇವಸ್ಥಾನ ಇದಾಗಿದೆ. ಅಲಪುಳ ಜಿಲ್ಲೆಯ ಚೆರ್ತಲೈ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯ ಸ್ಥಿತವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X