Search
  • Follow NativePlanet
Share
ಮುಖಪುಟ » ಸ್ಥಳಗಳು» ತೋರಣಮಲ್

ತೋರಣಮಲ್ - ಹಳೆಯ ಸುಂದರ ಗಿರಿಧಾಮ

10

ತೋರಣಮಲ್ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಗಿರಿಧಾಮವಾಗಿದೆ. 1,150 ಮೀಟರ್ ಎತ್ತರದಲ್ಲಿರುವ ಈ ಗಿರಿಧಾಮ ಸಾತ್ಪುರ ವಲಯದಲ್ಲಿದೆ. ತೋರಣಮಲ್ ಮೂಲತಃ ತಪ್ಪಲಿನ ಆಕಾರದಲ್ಲಿದ್ದು ಕೇವಲ 44 ಚ.ಕಿ.ಮೀ ವಿಸ್ತೀರ್ಣದಲ್ಲಿದೆ.

ಈ ಗಿರಿಧಾಮವು ತೋರ್ನ ಮರದಿಂದ ತನ್ನ ಹೆಸರನ್ನು ಪಡೆಯಿತು. ದಂತಕಥೆಗಳ ಪ್ರಕಾರ, ತೋರಣಮಲ್ ನಲ್ಲಿ ಈ ಮರಗಳು ಯಥೇಚ್ಛವಾಗಿದ್ದಿದ್ದರಿಂದ, ಇಲ್ಲಿನ ಬುಡಕಟ್ಟು ಜನರು ಈ ಮರಗಳನ್ನು ಮರಗಳ ಮತ್ತು ಸಂತಾನದ ದೇವಿಯಾದ ತೋರಣ ದೇವಿಯ ಪ್ರತಿರೂಪವಾಗಿ ಪೂಜಿಸತೊಡಗಿದರು.

ಇಲ್ಲಿರುವ ಆಕರ್ಷಣೆಗಳಲ್ಲಿ ಯಶವಂತ್ ಕೆರೆಯು ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಗೋರಕನಾಥ್ ಮತ್ತು ನಾಗಾರ್ಜುನ ದೇವಾಲಯಗಳು ಸೇರಿದಂತೆ ಹಲವಾರು ದೇವಾಲಯಗಳಿವೆ. ದಿಗಂತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸೀತಾ ಖಾಯಿ ಪಾಯಿಂಟ್ ಮತ್ತು ಸೂರ್ಯಾಸ್ತದ ಪಾಯಿಂಟ್ ಇಲ್ಲಿನ ಪ್ರಾಂತ್ಯದಲ್ಲಿ ನೋಡಲೆಬೇಕಾದ ವಿಹಂಗಮ ನೋಟದ ತಾಣಗಳಾಗಿವೆ.

ತೋರಣಮಲ್ ಗೆ ಏಕೆ ಹೋಗಬೇಕು?

ತೋರಣಮಲ್ ಬೆಟ್ಟದ ತುದಿಯಲ್ಲಿ ನೆಲೆಸಿರುವ ಕಾರಣವಾಗಿ ವರ್ಷಪೂರ್ತಿ ಅತ್ಯಂತ ಅಹ್ಲಾದಕರವಾದ ಹವಾಗುಣದ ವರವನ್ನು ಪಡೆದಿದೆ. ಈ ಗಿರಿಧಾಮವು ಮಹಾರಾಷ್ಟ್ರದ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಯಾತ್ರಾ ಸ್ಥಳವು ದಿಢೀರ್ ಎಂದು ರಜೆ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

ತೋರಣಮಲ್ ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳಿಂದ ಸುತ್ತುವರೆದಿದ್ದು, ಇಡೀ ಮಹಾರಾಷ್ಟ್ರದಲ್ಲಿ ಎರಡನೆ ’ತಂಪಾದ’ ಗಿರಿಧಾಮವೆಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ. ಈ ಯಾತ್ರಾಸ್ಥಳವು ಬಣ್ಣಿಸಲಸಾಧ್ಯವಾದ ಸುಂದರ ಕೆರೆಗಳನ್ನು, ವೀಕ್ಷಣಾ ಸ್ಥಳಗಳನ್ನು ಮತ್ತು ಯಾವುದೇ ಚಾರಣಿಗರು ಸವಾಲಾಗಿ ಸ್ವೀಕರಿಸುವ ಮತ್ತು ಸಂತಸ ಪಡಬಹುದಾದ ಅದ್ಭುತ ಸ್ಥಳಗಳು ಇಲ್ಲಿವೆ. ಹುಚ್ಚು ಹಿಡಿಸುವ ನಗರದ ಜನಸಂದಣಿಯಿಂದ ದೂರವಾಗಿ ಶಾಂತಿ ಮತ್ತು ಏಕಾಂತವನ್ನು ಪಡೆಯಬೇಕಾದಲ್ಲಿ ಈ ಗಿರಿಧಾಮಕ್ಕೆ ಭೇಟಿಕೊಡಿ.

ತೋರಣಮಲ್ ಪ್ರಸಿದ್ಧವಾಗಿದೆ

ತೋರಣಮಲ್ ಹವಾಮಾನ

ಉತ್ತಮ ಸಮಯ ತೋರಣಮಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತೋರಣಮಲ್

  • ರಸ್ತೆಯ ಮೂಲಕ
    ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ನಗರಗಳಿಂದ ಹಲವಾರು ಬಸ್ಸುಗಳು ನಿಮಗೆ ತೋರಣಮಲ್ ಗೆ ಹೋಗಲು ದೊರೆಯುತ್ತವೆ. ಹಲವಾರು ರಾಜ್ಯ ಸಾರಿಗೆ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಮುಂಬೈ, ಪುಣೆ ಮತ್ತು ಹೈದರಾಬಾದ್ ನಗರಗಳಿಂದ ನಿರಂತರವಾಗಿ ಹೋಗಿ ಬರುತ್ತಿರುತ್ತವೆ. ಬಸ್ಸುಗಳ ಪ್ರಯಾಣ ದರವು ನೀವು ಆಯ್ಕೆ ಮಾಡಿಕೊಳ್ಳುವ ಬಸ್ಸಿನ ಸೌಲಭ್ಯಗಳಿಗನುಗುಣವಾಗಿರುತ್ತದೆ. ಆದರು ದರವು ಹವಾ ನಿಯಂತ್ರಿತ ಬಸ್ಸಿಗೆ ಸಾಮಾನ್ಯವಾಗಿ 500 ರೂಪಾಯಿ ಇರಬಹುದು. ತೋರಣಮಲ್ ಮುಂಬೈನಿಂದ 500 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಂದುರ್ಬರ್ ತೋರಣಮಲ್ ಗೆ ಸಮೀಪದ ರೈಲುನಿಲ್ದಾಣವಾಗಿದೆ. ಇದು ಇಲ್ಲಿಂದ 75 ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ರೈಲ್ವೇಯ ಸೂರತ್ – ಭೂಸ್ವಲ್ ಮಾರ್ಗದಲ್ಲಿ ಬರುತ್ತದೆ. ಧುಲೆ ಇಲ್ಲಿಂದ 128 ಕಿ.ಮೀ ದೂರದಲ್ಲಿದ್ದು, ರೈಲಿನಲ್ಲಿ ಬರುವವರಿಗೆ ಮತ್ತೊಂದು ಆಯ್ಕೆಯನ್ನು ಒದಗಿಸುತ್ತದೆ. ನಂದುರ್ಬರ್ ಚೆನ್ನೈ, ಅಹಮದಾಬಾದ್, ಮುಂಬೈ, ಅಮರಾವತಿ ಮತ್ತು ಸೂರತ್ ಗಳಂತಹ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ರೈಲಿನ ಟಿಕೆಟ್ ದರ ಸಾಮಾನ್ಯವಾಗಿ 150 ರೂಪಾಯಿಯಿಂದ 200 ರೂಪಾಯಿಯವರೆಗೆ ಇರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಔರಂಗಬಾದ್ ವಿಮಾನ ನಿಲ್ದಾಣವು ತೋರಣಮಲ್ ಗಿರಿಧಾಮಕ್ಕೆ ಸಮೀಪದ ದೇಶಿಯ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 300 ಕಿ.ಮೀ ದೂರದಲ್ಲಿದೆ. ನೀವು ಇಲ್ಲಿಂದ ತೋರಣಮಲ್ ಗೆ ಕ್ಯಾಬ್ ಗಳಲ್ಲಿ ಸುಲಭವಾಗಿ ತಲುಪಬಹುದು. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ಎರಡು ವಿಮಾನ ನಿಲ್ದಾಣಗಳು ಭಾರತದ ಒಳಗಿನ ಮತ್ತು ಹೊರಗಿನ ಪ್ರಮುಖ ನಗರ ಮತ್ತು ಪಟ್ಟಣಗಳೊಂದಿಗೆ ನೇರ ಮತ್ತು ದೈನಂದಿನ ವಿಮಾನಗಳ ಹಾರಾಟದ ವ್ಯವಸ್ಥೆಯನ್ನು ಹೊಂದಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City