ಟೋಂಕ್ ಜಿಲ್ಲೆಯ ಇನ್ನೊಂದು ಹಳ್ಳಿ ಮಂದಕಲಾ. ನಗರಿಪೋರ್ಟ್ ನಿಂದ 2 ಕಿಮೀ. ದೂರದಲ್ಲಿದೆ. ರಾಜಸ್ತಾನದ ಮಿನಿ ಪುಷ್ಕರ್ ಅಂತಲೂ ಇದು ಕರೆಸಿಕೊಳ್ಳುತ್ತದೆ. ಸಾಕಷ್ಟು ಮರಗಳಿಂದ ಆವೃತ್ತವಾಗಿರುವ ತಾಣ, ಹಸಿರಿನಿಂದ ಕಂಗೊಳಿಸುತ್ತಿದೆ. ಪರಿಸರ ಪ್ರೇಮಿಗಳನ್ನು ಅತಿಯಾಗಿ ಮೆಚ್ಚಿಸುವಲ್ಲಿ ಸಂಶಯವೇ ಇಲ್ಲ. ಇಲ್ಲಿ ನಡೆಯುವ ವಾರ್ಷಿಕೋತ್ಸವಕ್ಕೆ ಸುತ್ತಲಿನ ಹಳ್ಳಿಗಳಿಂದಲೂ ಅಪಾರ ಸಂಖ್ಯೆಯ ಜನ ಆಗಮಿಸುತ್ತಾರೆ. ಮುಚ್ಚಕುಂಡೇಶ್ವರ ಮಹದೇವ ದೇವಾಲಯ ಅತ್ಯಂತ ಜನಪ್ರಿಯ ಮಂದಿರದಲ್ಲಿ ಒಂದು. ಇಲ್ಲಿನ ನಾಲ್ಕು ಅಡಿ ಎತ್ತರದ ಶಿವಲಿಂಗ ನೋಡುಗರ ಗಮನ ಸೆಳೆಯುತ್ತದೆ. ಇದು ಕೂಡ ಆಕರ್ಷಕ ತಾಣಗಳಲ್ಲಿ ಒಂದಾಗಿದೆ.