ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್ 1987ರ ಸೆಪ್ಟೆಂಬರ್ 29ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಯಿತು. 5,532 ಎಕರೆ ಪ್ರದೇಶದಲ್ಲಿ ಈ ಜೈವಿಕ ಪಾರ್ಕ್ ವ್ಯಾಪಿಸಿಕೊಂಡಿದೆ. ಈ ಪಾರ್ಕ್ ನಲ್ಲಿ ಆನೆ, ನವಿಲು, ಜಿಂಕೆ, ಗಿಳಿ, ಚಿರತೆ ಇತರೆ ವನ್ಯ ಜೀವಿ ಹಾಗೂ ಪಕ್ಷಿಗಳ ಆವಾಸವಿದೆ. ಹಸಿರಿನಿಂದ ಆವೃತ್ತವಾಗಿರುವ ಈ ಪ್ರದೇಶವು ಸಣ್ಣ ಹಾಗೂ ದೊಡ್ಡ ಪ್ರಾಣಿ-ಪಕ್ಷಿಗಳ ವಾಸಕ್ಕೆ ಪೂರಕವಾಗಿವೆ.