ತ್ರಿಶ್ಶೂರಿನಲ್ಲಿರುವ ರಾಜ್ಯ ವಸ್ತು ಸಂಗ್ರಹಾಲಯವು 1885 ರಲ್ಲಿ ಸ್ಥಾಪನೆಗೊಂಡಿತು. 13.5 ಎಕರೆಗಳಷ್ಟು ವ್ಯಾಪಿಸಿರುವ ಈ ವಸ್ತು ಸಂಗ್ರಹಾಲಯವು ಆರಾಮವಾಗಿ ವಿಶ್ರಾಂತಿ ತೆಗೆದುಕೊಳ್ಳುವಷ್ಟು ವಿಶಾಲವಾದ ಆವರಣವನ್ನು ಹೊಂದಿದೆ. ಈ ವಸ್ತು ಸಂಗ್ರಹಾಲಯವು ದುಬಾರಿಯಾದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ. ಆದರು ಇತಿಹಾಸದ ವಿವಿಧ ಕಾಲಘಟ್ಟಗಳನ್ನು ಪರಿಚಯಿಸುವ ವಿವಿಧ ಕಲಾವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ಕೇರಳದ ಕಥಕ್ಕಳಿ ಚಿತ್ರಗಳು, ಲೋಹದ ಶಿಲ್ಪಗಳು, ಕೇರಳದ ಸಾಂಪ್ರದಾಯಿಕ ದೀಪಗಳ ವಿನ್ಯಾಸಗಳನ್ನು ಇದು ಹೊಂದಿದೆ.
ಪ್ರಾಚೀನ ಆಭರಣಗಳು, ಶಿಲೆಗಳು ಮತ್ತು ಕೆಡದಂತೆ ಸಂರಕ್ಷಿಸಿದ ಚಿಟ್ಟೆಗಳ ನಮೂನೆಗಳನ್ನು ಸಹ ಇಲ್ಲಿ ನೋಡಬಹುದಾಗಿದೆ. ಹಿಂದಿನ ಕಾಲದ ಮತ್ತು ಇಂದಿನ ಕೇರಳದ ಹಲವಾರು ಸಾಂಸ್ಕೃತಿಕ ವಿವರಗಳನ್ನು ತಿಳಿಯಲು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡಬೇಕು. ಇದು ನಗರದ ಹೃದಯಭಾಗದಲ್ಲಿ ನೆಲೆಸಿದ್ದು, ಸುಲಭವಾಗಿ ತಲುಪಬಹುದಾಗಿದೆ.