ತೌಬಲ್ ನ ಜಿಲ್ಲಾಕೇಂದ್ರದ ನಂತರದ ಅತಿ ದೊಡ್ಡ ಪಟ್ಟಣವಾದ ಕಕ್ಚಿಂಗ್ ಒಂದು ಪ್ರಧಾನ ವ್ಯಾಪಾರಿ ಕೇಂದ್ರವೂ ಹೌದು. ಮ್ಯಾನ್ಮಾರ್ ಗಡಿಯಿಂದ 70 ಕಿ. ಮೀ ದೂರ ಹಾಗೂ ಇಮ್ಪ್ಲಾಲ್ ನಿಂದ 44 ಕಿ. ಮೀ ದೂರದಲ್ಲಿರುವ ಕಕ್ಚಿಂಗ್, ತೌಬಲ್ ನ ಒಂದು ಪ್ರಮುಖ ಆಕರ್ಷಣೆಯೂ ಹೌದು. ಕಕ್ಚಿಂಗ್ ತೌಬಲ್ ಜಿಲ್ಲೆಯ ಎರಡು ಉಪಭಾಗಗಳಲ್ಲಿ ಒಂದಾಗಿದ್ದು ಇನ್ನೊಂದು ಉಪಭಾಗ ವೈಖೊಂಗ್ ಆಗಿದೆ.
ವಿವಿಧ ತರಕಾರಿಗಳು, ಹಾಗೂ ಭತ್ತ ವನ್ನು ಇಲ್ಲಿ ಬೆಳೆಯುತ್ತಾರೆ.ಮೀನುಗಾರಿಕೆ ಕೂಡಾ ಇಲ್ಲಿನ ಒಂದು ಜೀವನಮಾರ್ಗ. ರಾಷ್ಟ್ರೀಯ ಹೆದ್ದಾರಿ ಇಲ್ಲಿಂದ ಸ್ವಲ್ಪವೇ ದೂರದಲ್ಲಿದೆ. ಅದಲ್ಲದೆ, ಇಲ್ಲಿಂದ ರಾಜ್ಯದ ಇತರ ಭಾಗಗಳಿಗೆ ರಾಜ್ಯ ಹೆದ್ದಾರಿಯೂ ಇದೆ.
ಕೃಷಿ ಮಾತ್ರವಲ್ಲದೆ, ಕಕ್ಚಿಂಗ್ ಇಲ್ಲಿನ ದೇವಸ್ಥಾನಗಳಾದ ಶ್ರೀ ಕ್ರಿಷ್ಣಚಂದ್ರ ಮಂದಿರ್, ವಿಶ್ವನಾಥ್ ಮಂದಿರ್ ಹಾಗೂ ನರಸಿಂಘ ಮಂದಿರ್ ಗೂ ಪ್ರಖ್ಯಾತವಾಗಿದೆ. ಎರಡನೇ ಮಹಾಯುದ್ದದ ಸಮಯದಲ್ಲಿ ಕಕ್ಚಿಂಗ್ನಲ್ಲಿ ನೂರಾರು ಎಕರೆ ಯಷ್ಟು ಜಾಗದಲ್ಲಿ 'ಪಲ್ಲೆಟ್ ಏರ್ಫೀಲ್ಡ್' ಎಂಬ ವಿಮಾನ ಇಳಿದಾಣ ಇತ್ತು.