Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವತ್ತೂರು » ಹವಾಮಾನ

ತಿರುವತ್ತೂರು ಹವಾಮಾನ

ತಿರುವತ್ತೂರಿಗೆ ಬರಲು ಸೂಕ್ತ ಸಮಯವೆಂದರೆ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳು. ಈ ಸಮಯದಲ್ಲಿ ಇಲ್ಲಿ ಸಂಚರಿಸಲು ಅಥವಾ ವಿಹರಿಸಲು ಶೀತವಿರುವುದಿಲ್ಲ,ಬಿಸಿಲಿರುವುದಿಲ್ಲ. ಮಧ್ಯಾಹ್ನದಲ್ಲಿ ಬೆಚ್ಚನೆಯ ಅನುಭವ ನೀಡಿತ್ತದೆ. ಬಿಸಿ ಇರುವುದಿಲ್ಲ, ಸಾಯಂಕಾಲ ತಂಪಾಗಿರುತ್ತದೆ, ಶೀತವಿರುವುದಿಲ್ಲ. 

ಬೇಸಿಗೆಗಾಲ

ಕನ್ಯಾಕುಮಾರಿ ಜಿಲ್ಲೆಯಲ್ಲಿನ ಇತರ ಸ್ಥಳಗಳಂತೆ ತಿರುವತ್ತೂರಿನಲ್ಲಿಯೂ ಸುಡು ಬೇಸಿಗೆಯು ಮಾರ್ಚಿ ತಿಂಗಳಿನಲ್ಲಿ ಪ್ರಾರಂಭವಾಗಿ ಮೇ ತಿಂಗಳ ಕೊನೆಯವರೆಗೂ ಇರುತ್ತದೆ. 35 ಡಿಗ್ರಿ ಸೆಲ್ ಶಿಯಸ್ ವರೆಗೂ ಪಾದರಸ ಏರುತ್ತದೆ. ಮಧ್ಯಾಹ್ನವಂತೂ ತೀವ್ರವಾದ ಬಿಸಿಲಿದ್ದು, ಧಗೆಯೂ ಹೆಚ್ಚಿರುತ್ತದೆ.

ಮಳೆಗಾಲ

ತಿರುವತ್ತೂರಿನಲ್ಲಿ ಮಳೆಗಾಲ ಜೂನ್ ನಿಂದ ಸೆಪ್ಟಂಬರ್ ತಿಂಗಳ ಕೊನೆಯವರೆಗೂ ಇರುತ್ತದೆ. ಈ ಸ್ಥಳವು ಅಲ್ಪ ಪ್ರಮಾಣದಿಂದ ಹೆಚ್ಚು ಪ್ರಮಾಣದ ಮಳೆ ಬೀಳುವ ಪ್ರದೇಶವಾಗಿದ್ದು, 25 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶಕ್ಕೆ ಇಳಿದು ವಾತಾವರಣ ಆಹ್ಲಾದಕರವಾಗಿರುತ್ತದೆ. ಆದರೂ ಈ ನಗರ ಜಲಪಾತಗಳಿಗೆ ಹತ್ತಿರ ಇರುವುದರಿಂದ ತಾಪವೂ ಏರುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ತಿರುವತ್ತೂರು ವಾತಾವರಣವು ಆಹ್ಲಾದಕರವಾಗಿದ್ದು, ಉಷ್ಣಾಂಶವು 20 ಡಿಗ್ರಿ ಸೆಲ್ಶಿಯಸ್ ಗೆ ಇಳಿದುಬಿಡುತ್ತದೆ ಹಾಗೂ ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 23 ಡಿಗ್ರಿ ಸೆಲ್ಶಿಯಸ್ ಗಿಂತ ಜಾಸ್ತಿ ಇರುವುದಿಲ್ಲ. ನವೆಂಬರ್ ಕೊನೆಯಿಂದ ಆರಂಭವಾಗುವ ಚಳಿಗಾಲವು ಫೆಬ್ರವರಿ ಮಧ್ಯಭಾಗದವರೆಗೂ ಇರುತ್ತದೆ. ಮಧ್ಯಾಹ್ನವು ಬೆಚ್ಚಗಿದ್ದು, ಸಾಯಂಕಾಲ ಆಹ್ಲಾದಕರವಾಗಿರುತ್ತದೆ.