Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ಹವಾಮಾನ

ತಿರುವಣ್ಣಾಮಲೈ ಹವಾಮಾನ

ತಿರುವಣ್ಣಾಮಲೈಗೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಅದು ಚಳಿಗಾಲ. ಹಗಲು ಹೊತ್ತಿನಲ್ಲೂ ಸಹಿಸಿಕೊಳ್ಳಬಹುದಾದ ಉಷ್ಣಾಂಶವಿರುತ್ತದೆ.ಚಳಿಗಾಲದ ಹಿತಕರ ವಾತಾವರಣ ಭಕ್ತರು ಮತ್ತು ಪ್ರವಾಸಿಗರಿಗೆ ಮುದ ನೀಡುತ್ತದೆ. ಜೊತೆಗೆ ಹಲವಾರು ಹಬ್ಬಗಳು ಚಳಿಗಾಲದಲ್ಲಿಯೇ ನಡೆಯುತ್ತವೆ. 

ಬೇಸಿಗೆಗಾಲ

ತಿರುವಣ್ಣಾಮಲೈನಲ್ಲಿ ಬೇಸಿಗೆ ಫೇಬ್ರವರಿಯ ಮಧ್ಯಭಾಗದಿಂದ ಶುರುವಾಗಿ ಮೇ ತಿಂಗಳ ಕೊನೆಯವರೆಗೂ ಇರುತ್ತದೆ. ಬೇಸಿಗೆಯ ಸಮಯದಲ್ಲಿ ವಾತಾವರಣದ ಉಷ್ಣಾಂಶ 45 ಡಿಗ್ರಿಯವರೆಗ ಏರುತ್ತದೆ. ಅತಿಯಾದ ಬಿಸಿಯಿರುವುದರಿಂದ ಇದು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಲ್ಲ. ಬೇಸಿಗೆಯಲ್ಲಿ ಒಣಹವೆಯೂ ಹೆಚ್ಚುತ್ತದೆ.

ಮಳೆಗಾಲ

ಜೂನ್ ಮಧ್ಯಭಾಗದಲ್ಲಿ ಶುರುವಾಗುವ ಮಳೆ ಆಗಸ್ಟ್ ತಿಂಗಳ ಕೊನೆಯವರೆಗೂ ಜೋರಾಗಿ ಸುರಿಯುತ್ತದೆ. ಎಷ್ಟೇ ಮಳೆ ಬಿದ್ದರೂ ಕೂಡ ವಾತಾವರಣದಲ್ಲಿ ಹಿತಕರ ಹವೆ ಕಾನುವುದೇ ಇಲ್ಲ. ಮಳೆಗಾಲದಲ್ಲೂ ಗರಿಷ್ಟ 39 ಡಿಗ್ರಿ ಉಷ್ಣಾಂಶ ದಾಖಲಾಗುತ್ತದೆ. ವಾತಾವರಣ ತೇವಾಂಶ ಮಾತ್ರ ಈ ಸಮಯದಲ್ಲಿ ಹೆಚ್ಚುತ್ತದೆ.

ಚಳಿಗಾಲ

ಮಧ್ಯ ನವೆಂಬರ್ ನಲ್ಲಿ ಶುರುವಾಗುವ ಚಳಿಗಾಲ ಫೇಬ್ರವರಿಯ ಮಧ್ಯದವರೆಗೂ ಮುಂದುವರೆಯುತ್ತದೆ. ಕನಿಷ್ಟ 35 ಡಿಗ್ರಿಗೆ ಉಷ್ಣಾಂಶ ಕುಸಯುತ್ತದೆ. ಸಂಜೆಯ ಹೊತ್ತಿನಲ್ಲಿ ಸ್ವಲ್ಪ ಹಿತಕರವಾದ ತಂಗಾಳಿಯಿರುತ್ತದೆ. ಆದರೆ ಯಾವುದೇ ಮೈ ಕೊರೆಯುವ ಚಳಿಯ ಅನುಭವವಾಗುವುದಿಲ್ಲ. ರಾತ್ರಿಯ ಹೊತ್ತು ಹಗುರವಾದ ಬ್ಲ್ಯಾಂಕೇಟ್ ಸಾಕು.