Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನೈಕಾವಲ್ » ಹವಾಮಾನ

ತಿರುವನೈಕಾವಲ್ ಹವಾಮಾನ

ಅಕ್ಟೋಬರ್ ನಲ್ಲಿ ಮಳೆ ಕಡಿಮೆಯಾಗಿ ವಾತಾವರಣ ತಂಪಾಗುತ್ತದೆ. ನವೆಂಬರ್ ನಿಂದ ಫೆಬ್ರವರಿಯವರೆಗೆ ವಾತಾವರಣ ಇನ್ನಷ್ಟು ತಂಪಾಗಿರುವುದರಿಂದ ಈ ಕಾಲ ಭೇಟಿಗೆ ಅತ್ಯಂತ ಸೂಕ್ತವಾಗಿದೆ. ಮಧ್ಯಾಹ್ನವೂ ತಾಪಮಾನ 22 ಡಿಗ್ರಿಗಿಂತ ಹೆಚ್ಚಾಗುವುದಿಲ್ಲ. ಸಂಜೆ ಮತ್ತು ರಾತ್ರಿ ವಾತಾವರಣ ತಂಪಾಗಿದ್ದರೂ ತುಂಬಾ ಚಳಿ ಇರದ ಕಾರಣ ಹೊರಗಡೆ ಓಡಾಡಲು ಅಪ್ಯಾಯಮಾನವಾಗಿರುತ್ತದೆ. ಆದರೂ ಚಳಿಗಾಳಿಯಿಂದ ರಕ್ಷಣೆ ಪಡೆಯಲು ಉಣ್ಣೆಯ ಶಾಲು ಅಥವಾ ಜ್ಯಾಕೆಟ್ಟುಗಳನ್ನು ಧರಿಸುವುದು ಒಳಿತು.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ಮಧ್ಯಭಾಗದವರೆಗೂ ಬೇಸಿಗೆ ಕಾಲವಾಗಿದ್ದು ಸಂಜೆ ಮತ್ತು ಬೆಳಿಗ್ಗೆಯ ಹೊರತಾಗಿ ಇಡಿಯ ದಿನ 37 ಡಿಗ್ರಿಗೂ ಮಿಗಿಲಾಗ ಸೆಖೆ ಇರುವುದರಿಂದ ಹಾಗೂ ಆರ್ದ್ರತೆಯೂ ಹೆಚ್ಚಿರುವುದರಿಂದ ಭೇಟಿಗೆ ಈ ಕಾಲ ಸೂಕ್ತವಲ್ಲ.

ಮಳೆಗಾಲ

ಮೇ ಮೂರನೆಯ ವಾರದಿಂದ ಸೆಪ್ಟೆಂಬರ್ ಕೊನೆಯವರೆಗೂ ಮಳೆಗಾಲವಾಗಿದ್ದು ವಾತಾವರಣ 25 ಡಿಗ್ರಿಗಳಷ್ಟಿದ್ದು ಆಹ್ಲಾದಕರವಾಗಿತ್ತುದೆ. ಆದರೆ ಈ ಅವಧಿಯಲ್ಲಿ ಸಾಧಾರದಿಂದ ಭಾರೀ ಪ್ರಮಾಣದ ಮಳೆಯಾಗುವುದರಿಂದ ಭೇಟಿಗೆ ಈ ಕಾಲವೂ ಸೂಕ್ತವಲ್ಲ.

ಚಳಿಗಾಲ