Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಲ್ಲಾ » ಹವಾಮಾನ

ತಿರುವಲ್ಲಾ ಹವಾಮಾನ

ತಿರುವಲ್ಲಾಕ್ಕೆ ಯಾವುದೇ ಸಮಯದಲ್ಲಾದರೂ ನೀವು ಭೇಟಿ ನೀಡಬಹುದು, ಏಕೆಂದರೆ ಉಷ್ಣವಲಯದ ವಾತಾವರಣವೇ ಆಗಿದ್ದರೂ ತಿರುವಲ್ಲಾ ಪ್ರಕೃತಿಯ ಮಡಿಲಿನಲ್ಲಿರುವುದರಿಂದ ಇಲ್ಲಿನ ಹಮಾಮಾನದಲ್ಲಿ ಹೆಚ್ಚಿನ ವೈಪರಿತ್ಯಗಳು ಆಗುವುದಿಲ್ಲ. ಆದರೂ ಬೇಸಿಗೆಯು ನಿಮ್ಮ ಕುತೂಹಲಕ್ಕೆ ಅಡ್ಡಲಾಗಬಹುದು. ಜನವರಿ ಯಿಂದ ಮಾರ್ಚ್ ತಿಂಗಳು ಪ್ರವಾಸಿಗರಿಗೆ  ತಮ್ಮ ಪ್ರವಾಸಕ್ಕೆ ಉತ್ತಮವಾದ ಸಮಯ. ಈ ತಿಂಗಳುಗಳಲ್ಲಿ ಮಧ್ಯಮ ತಾಪಮಾನವಿದ್ದು ಪ್ರವಾಸಿಗರ ಸ್ವಾಗತಕ್ಕೆ ತಿರುವಲ್ಲಾ ಸಿದ್ಧವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಅತೀ ಉಷ್ಣ ಹಾಗೂ ಆರ್ದ್ರತೆ ತಿರುವಲ್ಲಾ ನಗರವನ್ನು ಆವರಿಸಿರುತ್ತದೆ. ಇಲ್ಲಿ ಬೇಸಿಗೆಯು ಮೇಯಲ್ಲಿ ಆರಂಭವಾಗಿ ಜೂನ್ ನಲ್ಲಿ ಕೊನೆಗೊಳ್ಳುತ್ತವೆ. ಬೇಸಿಗೆ ಕಾಲದ ಸಂದರ್ಭದಲ್ಲಿ ಇಲ್ಲಿನ ತಾಪಮಾನ ಗರಿಷ್ಠ 34 ಡಿ.ಸೆ ಹಾಗೂ ಕನಿಷ್ಠ ತಾಪಮಾನ 26 ಡಿ.ಸೆ ದಾಖಲಾಗುತ್ತದೆ. ಈ ಏರಿಳಿತಗಳ ನಡುವೆ ಬೇಸಿಗೆಯಲ್ಲಿ ತಿರುವಲ್ಲಾಕ್ಕೆ ಭೇಟಿ ನೀಡಬಹುದು.

ಮಳೆಗಾಲ

ಮಳೆಗಾಲದಲ್ಲಿ ತಿರುವಲ್ಲಾ ಕೊಂಚ ಹೆಚ್ಚು ಮಳೆಯ ಅನುಭವವನ್ನು ಹೊಂದಿದ್ದು ಈ ಸಮಯದಲ್ಲಿ ಈ ಕಾಲವನ್ನು ಆನಂದಿಸುವವರು ಇಲ್ಲಿಗೆ ಪ್ರವಾಸಕ್ಕಾಗಿ ಬರಬಹುದು. ಜೂನ್ ಜುಲೈ ನಲ್ಲಿ ಪ್ರಾರಂಭವಾಗಿ ನಂತರದ ನಾಲ್ಕು ತಿಂಗಳುಗಳ ವರೆಗೆ ಸುರಿಯುವ ಮುಂಗಾರು ಮಳೆ ಈ ಪಟ್ಟಣವನ್ನು ಅರಳಿಸುತ್ತದೆ. ಈ ಸಮಯದಲ್ಲಿ ಇಲ್ಲಿನ ಹಸಿರನ್ನು ಅದರ ವೈಭವವಕ್ಕೆ, ಇಲ್ಲಿಗೆ ಪ್ರವಾಸಿಗರಾಗಿ ಬಂದು ನೀವೇ ಸಾಕ್ಷಿಯಾಗಬೇಕು ! ಈ ಸಮಯದಲ್ಲಿ ನೀವು ತಿರುವಲ್ಲಾಕ್ಕೆ ಬಂದಿದ್ದೇ ಆದರೆ,  ಐಷಾರಾಮಿ ಸೊಬಗನ್ನು ನೋಡಿ ನಿಮ್ಮ ಮನಸ್ಸಿನಲ್ಲಿ ಆನಂದ ಮೂಡುವುದಂತೂ ಖಚಿತ.

ಚಳಿಗಾಲ

ನವೆಂಬರ್ ನಿಂದ ಜನೆವರಿ ವರೆಗೆ ಚಳಿಗಾಲದ ಸಮಯವಾಗಿದ್ದು ತಿರುವಲ್ಲಾ ಮನಮೋಹಕ ಚಳಿಯ ಅನುಭವವನ್ನು ಪ್ರವಾಸಿಗರಿಗೆ ಕೊಡುತ್ತದೆ. ಈ ಸಮಯದಲ್ಲಿ ತಾಪಮಾನ ಗರಿಷ್ಠ 24 ಡಿ.ಸೆ ಹಾಗೂ ಕನಿಷ್ಠ ತಾಪಮಾನ 18 ಡಿ.ಸೆ ದಾಖಲಾಗುತ್ತದೆ. ಚಳಿಗಾಲದ ಸಮಯದಲ್ಲಿ ತಿರುವಲ್ಲಾಕ್ಕೆ ಬರುವವರು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಇಲ್ಲಿನ ಬೆಚ್ಚನೆಯ ಅನುಭವವನ್ನು ಪಡೆಯಬಹುದು.