Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನಲ್ಲಾರ್ » ಆಕರ್ಷಣೆಗಳು » ಶ್ರೀ ದರ್ಬಾರಣ್ಯೇಶ್ವರ್ ದೇವಾಲಯ

ಶ್ರೀ ದರ್ಬಾರಣ್ಯೇಶ್ವರ್ ದೇವಾಲಯ, ತಿರುನಲ್ಲಾರ್

1

ಪಾಂಡಿಚೆರಿಯಲ್ಲಿರುವ ತಿರುನಲ್ಲಾರಿನ ಶನಿ ಮಹಾತ್ಮ ದೇವಾಲಯವು ಅತ್ಯಂತ ಪ್ರಸಿದ್ದ ಶನಿ ಮಹಾತ್ಮನ ದೇವಾಲಯವಾಗಿದ್ದು, ಮೂಲತಃ ಇದು ಶ್ರೀ ದರ್ಬಾರಣ್ಯೇಶ್ವರ್ ಎಂದು ಕರೆಯಲ್ಪಡುವ ಈಶ್ವರನ ದೇವಾಲಯವಾಗಿದೆ. ಹಲವಾರು ಭಕ್ತರು ಈ ಇಬ್ಬರು ದೇವರುಗಳ ದರ್ಶನ ಪಡೆಯುವ ಸಲುವಾಗಿ ಆಗಮಿಸುತ್ತಿರುತ್ತಾರೆ.

ತಮಿಳುನಾಡಿನಲ್ಲಿರುವ ನವಗ್ರಹ ದೇವಾಸ್ಥಾನಗಳಲ್ಲಿ ಒಂದಾಗಿರುವ ಈ ದೇವಾಲಯವು ಶನೇಶ್ವರನ ದೇವಾಲಯವಾಗಿದೆ. ಈ ಮೊದಲೆ ಹೇಳಿದಂತೆ ಇಲ್ಲಿ ಶನೇಶ್ವರನಿಗಾಗಿ ದೇವಾಲಯವಿದೆ, ಆದರೆ ಈ ದೇವಾಲಯವನ್ನು ಮೂಲತಃ ಶಿವನಿಗಾಗಿ ನಿರ್ಮಿಸಲಾಗಿದೆ. ಅಭಯ ವರದ ಹಸ್ತ ಮುದ್ರೆಯನ್ನು ಹೊಂದಿರುವ ಸ್ವಾಮಿಯ ವಿಗ್ರಹವು ಪೂರ್ವಾಭಿಮುಖವಾಗಿ ನಿಂತಿದೆ. ಇಲ್ಲಿನ ಸ್ವಾಮಿಯನ್ನು ಇಲ್ಲಿ ಹಿಂದೆಯೇ ಇದ್ದ ದೇವರುಗಳ ಜೊತೆಗೆ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವನ್ನು ಚೋಳ ರಾಜರು ನಿರ್ಮಿಸಿದ್ದಾರೆ.

ಈ ದೇವಾಲಯವನ್ನು ಕಾವೇರಿ ನದಿಯ ದಕ್ಷಿಣ ದಂಡೆಯ ಮೇಲೆ ನಿರ್ಮಿಸಲಾಗಿದೆ. ಅಲ್ಲದೇ ಈ ದೇವಾಲಯವನ್ನು ಶನಿ ಮಹಾತ್ಮನಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಪವಿತ್ರ ದೇವಾಲಯವೆಂದು ಪರಿಗಣಿಸಲಾಗಿದೆ. ಇಲ್ಲಿ ತ್ಯಾಗರಾಜ ಮತ್ತು ತಿರುನಲ್ಲಾರರ ಸಪ್ತವಾಟಿಕಾ ಸ್ಥಳಗಳನ್ನೂ ಸಹ ಕಾಣಬಹುದಾಗಿದೆ. ಶನೇಶ್ವರನ ದಯೆ ಇರದೆ ಇದ್ದಲ್ಲಿ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ನಾವು ಕಾಣಬೇಕಾಗುತ್ತದೆ. ಆದರೆ ತಿರುನಲ್ಲಾರಿನ ಈ ದೇವಾಲಯವನ್ನು ನಾವು ಸಂದರ್ಶಿಸುವುದರಿಂದ ಶನಿಯ ಕೃಪಾ ಕಟಾಕ್ಷಕ್ಕೆ ನಾವು ಪಾತ್ರರಾಗಬಹುದೆಂದು ಇಲ್ಲಿ ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed