ಥೆಂಜ಼ಾಲ್ ಒಂದು ಕಾಲದಲ್ಲಿ ದಟ್ಟಾರಣ್ಯವಾಗಿತ್ತು. ಇತ್ತೀಚೆಗೆ ಅಂದರೆ ಕಳೆದ ಐವತ್ತು ವರ್ಷದಲ್ಲಿ, ಅರಣ್ಯಕ್ಕೆ ಹಾಕಿದ್ದ ಬೇಲಿಯನ್ನು ಸಡಿಲಗೊಳಿಸಿ ಮನುಷ್ಯ ಇಲ್ಲಿ ನಿಷೇಧದ ಹೊರತಾಗಿಯೂ ಪ್ರವೇಶಿಸಲಾರಂಭಿಸಿದ. ಹಾಗಾಗಿ ಇಲ್ಲಿ ಹಲವು ಜಿಂಕೆಗಳನ್ನು ನಾವು ಕಾಣಬಹುದಾಗಿದೆ. ಥೆಂಜ಼ಾಲ್ ಜಿಂಕೆ ಪಾರ್ಕ್ ಜಿಂಕೆಗಳನ್ನು ಕಾಪಾಡುವಗೋಸ್ಕರ ಆರಂಭವಾಗಿರುವ ಪಾರ್ಕ್ ಆಗಿರುತ್ತದೆ.
ಈ ಪಾರ್ಕಿನಲ್ಲೀಗ 17 ಜಿಂಕೆಗಳಿದ್ದು ಅದರಲ್ಲಿ 11 ಹೆಣ್ಣು ಜಿಂಕೆ ಮತ್ತು 6 ಗಂಡು ಜಿಂಕೆಯಾಗಿದೆ. ಇಲ್ಲಿರುವ ಎಲ್ಲಾ ಜಿಂಕೆಗಳನ್ನು ನೈಸರ್ಗಿಕ ವಾತಾವರಣದಲ್ಲಿ ಓಡಾಡುತ್ತಿದ್ದ ಮತ್ತು ಅದಕ್ಕೆ ಸೂಕ್ತ ರಕ್ಷಣೆಯನ್ನೂ ನೀಡಲಾಗಿದೆ. ಪ್ರವಾಸಿಗರು ಥೆಂಜ಼ಾಲ್ ಜಿಂಕೆ ಪಾರ್ಕ್ ಭೇಟಿ ಮಾಡಬಹುದು ಮತ್ತು ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದಾಗಿದೆ.
ಥೆಂಜ಼ಾಲ್ ಜಿಂಕೆ ಪಾರ್ಕ್ ಒಂದು ಹಳ್ಳಿ ಸಮೀಪವಿದ್ದು ಪ್ರವಾಸಿಗರು ಈ ಹಳ್ಳಿಯಲ್ಲಿ ನೆಲೆಸಿ ನಡೆದುಕೊಂಡೇ ಇಲ್ಲಿಗೆ ಭೇಟಿ ನೀಡಬಹುದು. ಐಜ಼ಾಲ್ ನಲ್ಲಿ ತಂಗುವ ಪ್ರವಾಸಿಗರು ಟ್ಯಾಕ್ಸಿ ಮೂಲಕ ಥೆಂಜ಼ಾಲ್ ಜಿಂಕೆ ಪಾರ್ಕಿಗೆ ಭೇಟಿ ನೀಡಬಹುದು.