ಅರ್ಯಂಕವು ತನ್ನಲ್ಲಿರುವ ಪಶ್ಚಿಮ ಘಟ್ಟಗಳ ಶ್ರೇಣಿಯ ಕಣಿವೆಗಳಿಗೆ ಹೆಸರುವಾಸಿಯಾಗಿದೆ. ಇದು ಕೊಲ್ಲಂ ಜಿಲ್ಲೆಯಿಂದ 73 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ತೇನ್‍ಮಲಗೆ ಸಮೀಪದಲ್ಲಿದೆ. ಅರ್ಯಂಕವು ಈ ಜಿಲ್ಲೆಯಲ್ಲಿರುವ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
ಅರ್ಯಂಕವು ಹಳ್ಳಿಯ ಪ್ರಮುಖ ಆಕರ್ಷಣೆಯೆಂದರೆ ಪಲರುವಿ ಜಲಪಾತ. ಸೆಂಟ್ ಮೇರಿಸ್ ರೋಮನ್ ಕ್ಯಾಥೋಲಿಕ್ ಚರ್ಚ್ ಮತ್ತು ಸೆಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಗಳು ಇಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿದ್ದು, ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ತಮ್ಮತ್ತ ಆಕರ್ಷಿಸುತ್ತಿವೆ. ಸಸ್ತ ದೇವ (ಅಯ್ಯಪ್ಪ)ನಿಗಾಗಿ ನಿರ್ಮಿಸಲಾಗಿರುವ ಅರ್ಯಂಕವು ಶಸ್ತ ದೇವಾಲಯವು ಕೇವಲ ಧಾರ್ಮಿಕ ಮಹತ್ವದಿಂದಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದ ಸಹ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಮಂಡಲ ಪೂಜೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಈ ದೇವಾಲಯದಲ್ಲಿ ಜಮಾಯಿಸುತ್ತಾರೆ.
ಅರ್ಯಂಕವು ಹಳ್ಳಿಯ ಆಕರ್ಷಣೆಗಳು ಅಲ್ಲಿಗೆ ಮುಗಿಯುವುದಿಲ್ಲ. ಕಡಮನ್‍ಪರ ಗಂಧದ ಕಾಡು ಎಂಬ ಎರಡನೆ ಅತಿ ದೊಡ್ಡ ಸ್ವಾಭಾವಿಕ ಗಂಧದ ಕಾಡು ಈ ಹಳ್ಳಿಯಲ್ಲಿ ನೆಲೆಗೊಂಡಿದೆ. ಅರ್ಯಂಕವುನಿಂದ 11 ಕಿ.ಮೀ ದೂರದಲ್ಲಿರುವ ರೋಸ್ ಮಲ ಎಂಬ ಸ್ಥಳವು ಇಲ್ಲಿರುವ ಮತ್ತೊಂದು ಜೈವಿಕ ಪ್ರವಾಸೋದ್ಯಮ ತಾಣವಾಗಿದೆ. ಅರ್ಯಂಕವು ತನ್ನಲ್ಲಿರುವ ಅಸಂಖ್ಯಾತ ಆಕರ್ಷಕ ತಾಣಗಳಿಂದ ಕೂಡಿ ಇಲ್ಲಿ ಸುತ್ತಾಡಲು ಮತ್ತು ಮೋಜು ಮಾಡಲು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.