ಚಿನ್ನ ಸುರುಳಿ ಜಲಪಾತವು ಮೇಘಮಲೈನಲ್ಲಿ ಹುಟ್ಟುವುದರಿಂದ ಇದನ್ನು ‘ಮೇಘಮಲೈ ಜಲಪಾತ’ವೆಂದು ಕೂಡ ಕರೆಯುತ್ತಾರೆ. ಇದು ತೇಣಿಯಿಂದ 54 ಕಿ.ಮೀ ದೂರದಲ್ಲಿರುವ ಕೊಂಬಾಯತೊಳುವಿನಲ್ಲಿದೆ. ಬೆಳ್ಳಿಮೋಡಗಳ ನಡುವಿನ ಈ ಜಲಪಾತದ 'ಧಬ ಧಬ' ಎಂದು ಗಡಚಿಕ್ಕುವ ಧ್ವನಿಯು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಚಿನ್ನ ಸುರುಳಿ ಜಲಪಾತವು ಭೇಟಿ ನೀಡಲೇಬೇಕಾದ ಅತ್ಯುತ್ತಮ ಪ್ರವಾಸಿ ತಾಣ.