Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಸುಧಾಗಡ್‌ ಕೋಟೆ

ಸುಧಾಗಡ್‌ ಕೋಟೆ, ಠಾಣೆ

1

ಠಾಣೆಯ ಜಿಲ್ಲೆಯ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲಿ ಒಂದೆನಿಸಿದೆ ಸುಧಾಗಡ್‌ ಕೋಟೆ. ಇದನ್ನು ಬೂರಾಪೆಗ್ಡ್‌ ಕೋಟೆ ಅಥವಾ ಬೂರಿಂಗಡ್‌ ಕೋಟೆ ಅಂತಲೂ ಕರೆಯುವುದುಂಟು.

ಈ ಕೋಟೆ ಅತ್ಯಂತ ಪುರಾತನವಾಗಿದ್ದು, ಎರಡನೇ ಶತಮಾನದ ಸಂದರ್ಭದ್ದು ಎಂದು ಹೇಳಲಾಗುತ್ತದೆ. ಇದನ್ನು 1436 ರಲ್ಲಿ ಬಹುಮನಿ ಸುಲ್ತಾನರು ಆಕ್ರಮಿಸಿಕೊಂಡರು. ಆಮೇಲೆ 1650 ರ ಹೊತ್ತಿಗೆ ಮರಾಠರು ಇಲ್ಲಿ ತಮ್ಮ ಪ್ರಭುತ್ವ ಸಾಧಿಸಿದರು ಎನ್ನಲಾಗುತ್ತದೆ. ನಂತರ ಬಾಹೋರ್‌ನ ಪಂಟಸಚಿವರು ಆಕ್ರಮಿಸಿದರು. ಇದು ಬಹುಕಾಲ ಉಳಿಯಲಿಲ್ಲ. ಏಕೆಂದರೆ 1818 ರ ಹೊತ್ತಿಗೆ ಬ್ರಿಟಿಷರು ಈ ಭಾಗವನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಸುಧಾಗಡ್‌ ಕೋಟೆಯು ಭೂರಿಂಗಡ ಕೋಟೆ ಎಂದು ಸಹ ಗುರುತಿಸಿಕೊಂಡಿದೆ. ಅದ್ಹೇಗೆಂದರೆ ಇಲ್ಲೊಂದು ಭೂರಾಯ್‌ದೇವಿ ದೇವಾಲಯವಿದೆ. ಈ ದೇಗುಲವನ್ನು ದೇವಿ ಭೂರಾಯ್‌ದೇವಿಗಾಯೇ ನಿರ್ಮಿಸಲಾಗಿತ್ತು. ಇದರಿಂದಲೂ ಕೋಟೆಗೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಪ್ರಸ್ತುತ ಇದು ಮಹಾರಾಷ್ಟ್ರ ರಾಜ್ಯದ ಅತ್ಯಂತ ಪ್ರಸಿದ್ಧ ಟ್ರೆಕ್ಕಿಂಗ್‌ ತಾಣವಾಗಿ ಅಭಿವೃದ್ಧಿ ಹೊಂದಿದೆ. ಅಲ್ಲದೆ, ಈ ಕೋಟೆ ಸುತ್ತ ಅತ್ಯಂತ ದಟ್ಟ ಹಸಿರಿನ ವಾತಾವರಣವಿದೆ. ಕೆಲ ಗುಡ್ಡಗಳು, ಎರಡು ಸುಂದರ ಕೆರೆ, ದೇವಾಲಯ, ಮನೆಗಳಿವೆ. ಈ ಕೋಟೆಯ ಪ್ರವೇಶಕ್ಕೆ ಮೂರು ಪ್ರತ್ಯೇಕ ದ್ವಾರಗಳಿವೆ. ಇವುಗಳಲ್ಲಿ ಮಹಾದ್ವಾರವು ಉಳಿದರೆಡಕ್ಕಿಂತ ದೊಡ್ಡದಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City