Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಬಸ್ಸೇನ್‌ ಕೋಟೆ

ಬಸ್ಸೇನ್‌ ಕೋಟೆ, ಠಾಣೆ

3

ಬಸ್ಸೇನ್‌ ಕೋಟೆಯು ಪ್ರಸ್ತುತ ವಾಸಾಯ್‌ ಕೋಟೆ ಎಂದೂ ಕರೆಯಲ್ಪಡುತ್ತದೆ. ಠಾಣೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಾಸಾಯ್‌ ಎಂಬ ಊರಿನಲ್ಲಿದೆ. ಬಸ್ಸೇನ್‌ ಪುರಾತನ ಪೋಚರ್ಚುಗೀಸ್‌ ನೆಲೆಯಾಗಿ ಜನಪ್ರಿಯವಾಗಿದೆ. ಇದನ್ನು ಠಾಣೆ ಕ್ರೀಕ್‌ ಅಂತಲೇ ಗುರುತಿಸಲಾಗುತ್ತದೆ. ಬಸ್ಸೇನ್‌ ಕೋಟೆ ಎಂದು ಕರೆಸಿಕೊಳ್ಳುವುದಕ್ಕೆ ಮುನ್ನ ಇದು ವಾಸಾಯ್‌ನ ಸೇಂಟ್‌ ಸೆಬಾಸ್ಟಿಯನ್‌ರ ಕೋಟೆ ಎಂದೇ ಹೆಸರಿಸಲ್ಪಟ್ಟಿತ್ತು. 1532 ರಲ್ಲಿ ಈ ಕೋಟೆ ನಿರ್ಮಾಣಗೊಂಡಿದ್ದು, ಐದು ಶತಮಾನಗಳ ಇತಿಹಾಸವನ್ನು ಹೊತ್ತು ನಿಂತಿದೆ. ಗುಜರಾತ್‌ನ ಸುಲ್ತಾನನಾಗಿದ್ದ ಬಹದ್ದೂರ್‌ ಶಾ ಈ ಕೋಟೆಯ ನಿರ್ಮಾತೃ. ಇದನ್ನು ಪೋರ್ಚುಗೀಸರು ಇನ್ನಷ್ಟು ಉನ್ನತೀಕರಿಸಿದರು. ನಂತರದ ದಿನಗಳಲ್ಲಿ ಪೋರ್ಚುಗೀಸರು ಭಾರತವನ್ನು ಆಳುವ ಸಂದರ್ಭದಲ್ಲಿ ತಮ್ಮ ಅನುಕೂಲಕ್ಕೆ ಈ ಕೋಟೆಯನ್ನು ಉತ್ತಮವಾಗಿ ಬಳಸಿಕೊಂಡರು. ಮುಂದೆ 1739 ರಲ್ಲಿ ಮರಾಠರು ಇದನ್ನು ತಮ್ಮ ವಶಕ್ಕೆ ಪಡೆದರು.

ಬಸ್ಸೇನ್‌ನ ಸಂಪೂರ್ಣ ಭಾಗವನ್ನು ವ್ಯಾಪಿಸಿರುವ ಕೋಟೆ, ಊರಿಗೆ ರಕ್ಷಣೆ ನೀಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ಈ ಪ್ರದೇಶವು 58,000 ಭಾರತೀಯ ಕ್ರಿಶ್ಚಿಯನ್ನರು, 2,000 ಪೋರ್ಚುಗೀಸರು ಹಾಗೂ 60,000 ಮಂದಿ ಇತರೆ ನಿವಾಸಿಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ.

ದುರ್ಗತಿ ಎಂದರೆ ಕೋಟೆ ಶಿಥಿಲಾವಸ್ತೆಗೆ ತಲುಪಿದ್ದು, ಬೀಳುವ ಹಂತಕ್ಕೆ ಬಂದಿದೆ. ಕೆಲವೆಡೆ ಕುಸಿತವನ್ನೂ ಕಂಡಿದೆ. ಈಗಿರುವ ಒಂದಿಷ್ಟು ಗೋಡೆ ಇತಿಹಾಸದ ನೆನಪನ್ನು ಸಾರುತ್ತಿದೆ. ಈಗಿರುವ ಕೋಟೆಯ ಗೋಡೆಯ ಉದ್ದ ಸುಮಾರು 4.5 ಕಿ.ಮೀ.ನಷ್ಟು ಮಾತ್ರ. ಎರಡು ಬಾಗಿಲುಗಳಾದ 'ಪೋರ್ಟಾ ದಾ ತೇರಾ' ಹಾಗೂ 'ಪೋರ್ಟಾ ದೋ ಮಾರ್‌' ಉಳಿದಿವೆ. ಇದಲ್ಲದೆ, ಉಳಿದವುಗಳೆಂದರೆ ಪೋರ್ಚುಗೀಸರು ನಿರ್ಮಿಸಿದ ಚರ್ಚ್ ಹಾಗೂ ಕಟ್ಟಡಗಳು.

ಕೋಟೆಯ ಪ್ರವೇಶದ್ವಾರ ಅತ್ಯಾಕರ್ಷಕವಾಗಿದೆ. ಅತ್ಯಾಕರ್ಷಕ ಲಿಪಿ ಈ ಪ್ರವೇಶದ್ವಾರದ ಬಳಿ ಇದ್ದು, ಗಮನ ಸೆಳೆಯುತ್ತದೆ. 1558 ರಲ್ಲಿ ಪೋರ್ಚುಗೀಸರು ಇಲ್ಲಿದ್ದ ಸಂದರ್ಭದಲ್ಲಿ ಇದು ಸಿದ್ಧವಾಗಿದೆ ಎಂಬುದನ್ನು ಲಿಪಿ ಹೇಳುತ್ತದೆ.

ಕೋಟೆಯ ಸುತ್ತಲಿನ ವಾತಾವರಣ ಆಕರ್ಷಕವಾಗಿದೆ. ಛಾಯಾಗ್ರಹಣಕ್ಕೆ, ಸ್ಥಳ ವೀಕ್ಷಣೆಗೆ ಹಾಗೂ ಕೋಟೆಯ ಮೇಲೆ ನಿಂತು ಪಕ್ಕದ ಸಮುದ್ರ ವೀಕ್ಷಣೆಗೆ ಅತ್ಯುತ್ತಮ ತಾಣವಾಗಿ ಒದಗಿಬಂದಿದೆ. ಅಲ್ಲದೆ, ಈ ಕೋಟೆಯ ಭಾಗವು ಅನೇಕ ಬಾಲಿವುಡ್‌ ಚಿತ್ರದ ಚಿತ್ರೀಕರಣಕ್ಕೂ ಬಳಕೆ ಆಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City