Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಉದಯ ಕಲರಿ ಶಂಗ್ತಮ್‌

ಉದಯ ಕಲರಿ ಶಂಗ್ತಮ್‌, ತಲಸ್ಸೆರಿ

1

ದಕ್ಷಿಣ ಭಾರತದ ಅತ್ಯಂತ ವಿಶಿಷ್ಟ ಕಲಾ ಪ್ರಕಾರವಾದ ಕಲರಿಪಯಟ್ಟುವನ್ನು ಇಷ್ಟಪಡುವ, ಪ್ರೀತಿಸುವವರಿಗೆ  ಉದಯ ಕಲರಿ ಶಂಗ್ತಮ್‌ ಅತ್ಯಂತ ಪ್ರಶಸ್ತ ತಾಣ. ಕೇರಳದ ವಿಶಿಷ್ಟ ಯುದ್ಧಕಲೆ ಇದಾಗಿದೆ. ನೂರಾರು ವರ್ಷದ ಹಿಂದಿನ ಕಲೆ ಇದಾಗಿದೆ. ಉದಯ ಕಲರಿ ಶಂಗ್ತಮ್‌ನಲ್ಲಿ ಈ ಎರಡು ಸಾವಿರ ವರ್ಷಕ್ಕೂ ಹಳೆಯದಾದ ಕಲೆಯನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ. ಇದರ ಶಕ್ತಿ, ಚಲನವಲನದ ವಿಶೇಷತೆಯನ್ನು ಅರಿಯಬಹುದಾಗಿದೆ.

ಇದು ಚಂಬಲ್‌ ಕಡಲ ತೀರದ ಸಮೀಪ ಇದೆ. ಮಾಹೆಯಿಂದ ಕೆಲವೇ ನಿಮಿಷದ ಪ್ರಯಾಣದಿಂದ ಉದಯ ಕಲರಿ ಶಂಗ್ತಮ್‌ಗೆ ತಲುಪಬಹುದು. ಎತ್ತರವಾದ ಮುಚ್ಚಿಗೆಯನ್ನು ಒಳಗೊಂಡ ಅತಿ ದೊಡ್ಡ ಸಭಾಂಗಣವನ್ನು ಈ ಕೇಂದ್ರ ಹೊಂದಿದೆ. ಸಾಂಪ್ರದಾಯಿಕ ಕಲರಿ ಆಯುಧಗಳು ಇಲ್ಲಿ ಪ್ರದರ್ಶನಕ್ಕಿವೆ. ಹಿನ್ನಲೆ ವೀಕ್ಷಿಸಿದಾಗ ವಸಾಹತು ಕಾಲದಲ್ಲಿ ಕಲರಿ ವಿದ್ಯೆಯ ತರಬೇತಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಕಲಾಪ್ರೇಮಿಗಳು ಇದನ್ನು ಜೀವಂತವಾಗಿರಿಸಿಕೊಂಡು ಬರಲು ಯತ್ನಿಸಿದ್ದರು. ಇದಕ್ಕಾಗಿ ಒಂದು ಗುಂಪನ್ನು ರಚಿಸಿಕೊಂಡಿದ್ದರು.

ಉದಯ ಕಲರಿ ಶಂಗ್ತಮ್‌ ಈ ಕಲೆಯನ್ನು ಪಸರಿಸುವಲ್ಲಿ ಸಾಕಷ್ಟು ಮಹತ್ವದ ಶ್ರಮ ವಹಿಸಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯನ್ನು ಉಳಿಸಲು  ಶ್ರಮಿಸಿದೆ. ಈ ತಾಣವನ್ನು ಸಂಜೆಯ ಹೊತ್ತು ಸಂದರ್ಶಿಸುವುದು ಉತ್ತಮ. ಕಲರಿಪಯಟ್ಟು ಕಲೆಯ ಅಭ್ಯಾಸ ಈ ಸಂದರ್ಭದಲ್ಲಿ ಆಗುವುದರಿಂದ ಅದನ್ನು ವೀಕ್ಷಿಸಬಹುದಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri