ಹಜಾರ ಪುಖುರಿಯು ತೇಜ್ಪುರದಲ್ಲಿರುವ ಮೂರನೆಯ ಅತ್ಯಂತ ದೊಡ್ಡ ಕೆರೆ ಅಥವಾ ಜಲಾಶಯವಾಗಿದೆ. ಇದು ಸುಮಾರು 70 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿದೆ. ಹಾಗಾಗಿ ಇದು ತೇಜ್ಪುರದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ.
ಹಜಾರ ಪುಖುರಿಯು ಹಜಾರ ವರ್ಮನ್ನಿಂದಾಗಿ ಈ ಹೆಸರು ಪಡೆದಿದೆ. ಇದನ್ನು 19ನೇ ಶತಮಾನದಲ್ಲಿ ಉತ್ಖನನ ಮಾಡಿ ಹೊರತೆಗೆಯಲಾಯಿತು. ಇಲ್ಲಿನ ಬೇಸಿಗೆಗಳಿಗೆ ಬ್ರಹ್ಮ ಪುತ್ರ ನದಿಯು ತನ್ನ ತಂಪಾದ ತಂಗಾಳಿಯ ಸಿಂಚನವನ್ನು ನೀಡುತ್ತದೆ. ಅದಕ್ಕೆ ಇಲ್ಲಿ ಪುಖುರಿಗಳು ಅಥವಾ ಕೊಳಗಳೇನು ಹೊರತಲ್ಲ. ಇವುಗಳು ಸಹ ಇಲ್ಲಿನ ವಾತಾವರಣಕ್ಕೆ ತಂಪನ್ನು ಉಣಿಸುತ್ತವೆ. ಹಜಾರ ಪುಖುರಿಯು ಇದಕ್ಕೆ ಹೊರತಲ್ಲ. ಇದರ ಗಾತ್ರವೇ, ಇದರ ಸೌಂದರ್ಯದ ಗುಟ್ಟಾಗಿದ್ದು, ಈ ನಗರದ ನಿವಾಸಿಗಳ ವಿಹಾರಕ್ಕೆ ಹೇಳಿ ಮಾಡಿಸಿದ ತಾಣವನ್ನಾಗಿಸಿದೆ.
ಹಜಾರ ಪುಖುರಿಯು ನಗರದ ಮಧ್ಯಭಾಗದಲ್ಲಿ ನೆಲೆಗೊಂಡಿದೆ. ಇದರಿಂದಾಗಿ ಪ್ರವಾಸಿಗರು ಸಂಜೆಗಳಲ್ಲಿ ಇಲ್ಲಿ ಸುತ್ತಾಡುತ್ತ ಕಾಲ ಕಳೆಯಬಹುದು. ಕೆರೆಯ ಸುತ್ತ ವಾಯು ವಿಹಾರ ಮಾಡಲು ಮತ್ತು ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳಲು ಇಲ್ಲಿ ಅನುಕೂಲ ಮಾಡಿಕೊದಲಾಗಿದೆ. ಪುಖುರಿಗಳು ಅಸ್ಸಾಂನ ಎಲ್ಲಾ ಭಾಗದಲ್ಲಿ ಕಂಡು ಬರುತ್ತವೆ. ಈ ನಗರದಲ್ಲಿ ಇವುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತವೆ.