ನ್-ಪ್ಯೂಲಾಂಗ್ ಎಂಬ ಇನ್ನೊಂದು ಹೆಸರಿನ ಬ್ಯೂನಿಂಗ್ ಹುಲ್ಲುಗಾವಲು ತಮೆಂಗ್ಲಾಂಗ್ ಜಿಲ್ಲೆಯ ಇನ್ನೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ತಮೈ ಪಟ್ಟಣದಲ್ಲಿರುವ ಬ್ಯೂನಿಂಗ್ ಹುಲ್ಲುಗಾವಲು ಒಂದು ವಿಸ್ತಾರವಾಗಿ ಪಸರಿಸಿರುವ ಏರುಪೇರಿನ ಸಣ್ಣ ದಿಣ್ಣೆಗಳ ಕಣಿವೆಯಾಗಿದೆ. ಅನೇಕ ಆರ್ಕಿಡ್ ಹೂವುಗಳು ಅಲ್ಲಿ ಅರಳಿರುವ ಸಮಯದಲ್ಲಿ, ವಿಶೇಷವಾಗಿ ಬೇಸಿಗೆಕಾಲದಲ್ಲಿ, ಖಚಿತವಾಗಿ ಜೂನ್ ತಿಂಗಳಿನಲ್ಲಿ ಅತ್ಯಂತ ಸುಂದರವಾಗಿ ಕಾಣುವ ಹುಲ್ಲುಗಾವಲಾಗಿರುತ್ತದೆ. ವನ್ಯ ಲಿಲ್ಲಿಗಳೂ ಸಹ ಇಲ್ಲಿ ಬೆಳೆಯುತ್ತದೆ.
ನಿಡುದೋಳಿನ ಕೋತಿಗಳು, ನರಿಗಳು ಬ್ಯೂನಿಂಗ್ ಹುಲ್ಲುಗಾವಲಿನಲ್ಲಿ ಕಾಣಿಸಿಕೊಳ್ಳುವ ಪ್ರಾಣಿಗಳು. ಈ ಸ್ಥಳವನ್ನು ಸುಲಭವಾಗಿ ಒಂದು ಸಸ್ಯ ಮತ್ತು ಪ್ರಾಣಿಗಳ ಪ್ರದರ್ಶನಕ್ಕೆ ಹೆಸರಾಗಿದ್ದು ಎಲ್ಲೆಡೆ ಕಾಣಲಾಗುವುದಿಲ್ಲ. ಇಂತಹ ಆಕರ್ಷಕ ಸ್ಥಳಗಳಿರುವ ಬ್ಯೂನಿಂಗ್ ಹುಲ್ಲುಗಾವಲು ತಮೆಂಗ್ಲಾಂಗಿನಲ್ಲಿ ಪ್ರಸಿದ್ಧ ಪ್ರವಾಸಿ ತಾಣವೆಂದು ಹೆಸರಾಗಿದೆ.
ಬೇಸಿಗೆಕಾಲ ಸಮೀಪಿಸುದ್ದಂತೆಯೇ ವಸಂತಕಾಲದಲ್ಲಿ ಈ ಹುಲ್ಲುಗಾವಲು ಒಂದು ಸುಂದರ ಮದುಮಗಳಂತೆ ಕಂಗೊಳಿಸುತ್ತದೆ. ಆರ್ಕಿಡ್ಗಳು, ಕಾಡು ಲಿಲ್ಲಿಗಳಿರುವ ಮತ್ತು ಹಲವಾರು ಇತರ ವರ್ಣರಂಜಿತ ಹೂಗಳಿಂದ ಬಹುತೇಕ ದಿಣ್ಣೆಗಳ ಅಲಂಕಾರದ ದೃಶ್ಯದ ಚಿತ್ರವನ್ನು ಊಹಿಸಲಾಗುವುದು ಬಹಳ ಕಷ್ಟಸಾಧ್ಯ.