Search
  • Follow NativePlanet
Share
ಮುಖಪುಟ » ಸ್ಥಳಗಳು» ತಮೆಂಗ್ಲಾಂಗ್

ತಮೆಂಗ್ಲಾಂಗ್ - ಶುದ್ಧ ತಾಜಾ ಅರಣ್ಯ ಮತ್ತು ನಯನ ಮನೋಹರ ಬೆಟ್ಟಗಳ ಪ್ರದೇಶ.

11

ತಮೆಂಗ್ಲಾಂಗ್ ನೈಸರ್ಗಿಕ ಸೌಂದರ್ಯ, ಕಾಡುಗಳು, ಸರೋವರಗಳು, ನದಿಗಳು ಮತ್ತು ಕಿತ್ತಳೆ ಉತ್ಸವಕ್ಕೆ ಒಂದು ಹೆಸರುವಾಸಿಯಾದ ಪ್ರದೇಶ. ಒಂದು ಗುಡ್ಡಗಾಡು ಜಿಲ್ಲೆಯ ತಮೆಂಗ್ಲಾಂಗ್, ಎಲ್ಲಾ ಬೆಟ್ಟಗಳು, ಕಣಿವೆಗಳು ಮತ್ತು ಶ್ರೇಣಿಗಳನ್ನೊಳಗೊಂಡಿದೆ.  ಇದು ಮಣಿಪುರದ ಒಂಬತ್ತು ಜಿಲ್ಲೆಗಳಲ್ಲಿ ಒಂದು ಸುಂದರವಾದ ಜಿಲ್ಲೆಯಾಗಿದೆ. ತಮೆಂಗ್ಲಾಂಗ್ ಒಂದು ಸ್ವಾಭಾವಿಕ ಸಾಂಸ್ಕೃತಿಕ ವೈವಿಧ್ಯತೆಯ ಸಂಪೂರ್ಣ ಅದ್ಭುತವಾದ ಜಿಲ್ಲೆಯಾಗಿದೆ. ಇಲ್ಲಿ ಅಪರೂಪದ ಆರ್ಕಿಡ್ ಹೂವುಗಳು, ಸಹಜಾರಣ್ಯಗಳ, ಪಕ್ಷಿಗಳು ಮತ್ತು ಪ್ರಾಣಿಗಳು ಅನೇಕ ಅಪರೂಪದ ಜೀವಿಗಳಿಗೆ ತವರಾಗಿದ್ದು ಈ ಸ್ಥಳವನ್ನು ಹಾರ್ನ್ ಬಿಲ್ ಜಮೀನು (Hornbill Land) ಎಂದೂ ಕರೆಯುತ್ತಾರೆ. ತಮೆಂಗ್ಲಾಂಗ್ ಜಿಲ್ಲೆಯು ಮಣಿಪುರದ ಪಶ್ಚಿಮಭಾಗದಲ್ಲಿದೆ. ಪೂರ್ವ ಮತ್ತು ಉತ್ತರದಲ್ಲಿ ಸೇನಾಪತಿ ಜಿಲ್ಲೆ, ದಕ್ಷಿಣದಲ್ಲಿ ಚುರಾಚಂದಪೂರ್ ಜಿಲ್ಲೆ ಮತ್ತು ಪಶ್ಚಿಮದಲ್ಲಿ ಇಂಫಾಲ್ ವೆಸ್ಟ್ ಜಿಲ್ಲೆ ಮತ್ತು ಅಸ್ಸಾಮ್ ರಾಜ್ಯದ ಕೆಲವು ಭಾಗಗಳಿಂದ ಸುತ್ತುವರೆದಿದೆ. 2011 ನೇ ಜನಗಣತಿ ಪ್ರಕಾರ, ತಮೆಂಗ್ಲಾಂಗ್ ಜಿಲ್ಲೆಯು ಮಣಿಪುರದ ಕನಿಷ್ಠ ಜನನಿಬಿಡ ಜಿಲ್ಲೆಯಾಗಿದೆ.

ಬೆಟ್ಟಗಳ ಮತ್ತು ಶ್ರೇಣಿಗಳ ನಡುವೆಯಲ್ಲಿ, ಅಲ್ಲಲ್ಲಿ ಹರಡಿರುವ ಸಣ್ಣ ಹಳ್ಳಿಗಳು ಸ್ಥಳದ ಅತೀಂದ್ರಿಯ ಸೌಂದರ್ಯ ಹೆಚ್ಚಿಸುವ ಆಕರ್ಷಣೆಯ ನೋಟವಾಗಿದೆ. ತಮೆಂಗ್ಲಾಂಗ್ ಪ್ರದೇಶದ ಭೂಲಕ್ಷಣವು ಮಣ್ಣು ಮತ್ತು ಬಂಡೆಗಳ ದುರ್ಬಲದ ಮರಳುಗಲ್ಲು, ಅಭ್ರಕದ ಪದರು ಶಿಲೆ ಮತ್ತು ಹಾಳೆಕಲ್ಲಿನೊಳಗೊಂಡಿದೆ. ಇದರ ಪರಿಣಾಮವಾಗಿ ತಮೆಂಗ್ಲಾಂಗ್ ಪ್ರದೇಶವು ನಿಯಮಿತವಾಗಿ ಭೂಕುಸಿತಗಳನ್ನು ಅಗಾಗ್ಗೆ ಅನುಭವಿಸುತ್ತಿರುತ್ತದೆ.  

ತಮೆಂಗ್ಲಾಂಗ್ ಸುತ್ತ ಮುತ್ತಲಿನ ಪ್ರವಾಸಿ ಸ್ಥಳಗಳು:

ಪ್ರವಾಸಿ ಸ್ಥಳಗಳಾದ ಬೆರಕ್ ನದಿ ಮತ್ತು ಏಳು ಜಲಪಾತಗಳು, ತರಾನ್ ಗುಹೆ, ಜೆಲಾದ್ ಸರೋವರ ಮತ್ತು ಬ್ಯೂನಿಂಗ್ (N-piulong) ಹುಲ್ಲುಗಾವಲು ಇವುಗಳಿಂದ ತಮೆಂಗ್ಲಾಂಗ್ ಒಂದು ಗಮನಾರ್ಹ ಪ್ರವಾಸಿ ಕ್ಷೇತ್ರವಾಗಿದೆ.

ಜೈವಿಕ ವೈವಿಧ್ಯ ಕೇಂದ್ರ

ತಮೆಂಗ್ಲಾಂಗ್ ಹಲವು ವಿಲಕ್ಷಣ ಮತ್ತು ಅಪರೂಪದ ಜಾತಿಗಳ ಪಕ್ಷಿಗಳ ಮತ್ತು ಪ್ರಾಣಿಗಳ ನೆಲೆಯೆಂದು ಹೇಳಬಹುದಾಗಿದೆ.  ಪ್ರವಾಸಿಗಳಿಗೆ ಮುಳ್ಳು ಹಂದಿ, ಜಿಂಕೆಗಳು, ಬೇಟೆ ಹಕ್ಕಿಗಳು, ಕಾಡು ಹಂದಿಗಳು, ಕಾಡು ನಾಯಿಗಳು, ಕತ್ತೆ ಕಿರುಬಗಳು ಮತ್ತು ಚಿರತೆಗಳು ಇವುಗಳೆನ್ನೆಲ್ಲಾ ನೋಡುವ ಅವಕಾಶ ಸಿಗುವುದು.  ಹುಲಿಗಳು ಸಹಾ ಕಾಡಿನಲ್ಲಿ ಕಾಣಿಸಿಕೊಂಡಿವೆ. ಕಾಡಿನ ವ್ಯಾಪ್ತಿಯನ್ನು ಉಷ್ಣವಲಯದ ನಿತ್ಯಹರಿದ್ವರ್ಣ ಕಾಡು, ಬಿದಿರಿನ ಕಾಡು ಮತ್ತು ಉಪೋಷ್ಣವಲಯದ ಅರಣ್ಯಗಳು ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು.

ಜೆಲಿಯಾನ್ಗ್ರಾಂಗ್ ನಾಗಾಗಳು ಮತ್ತು ಕುಕಿಗಳು ತಮೆಂಗ್ಲಾಂಗಿನ ಮುಖ್ಯ ಬುಡಕಟ್ಟು ಜನತೆಯಾಗಿದ್ದಾರೆ. ಇಲ್ಲಿ ಅನೇಕ ಉತ್ಸವಗಳು ಆಚರಿಸಲ್ಲಗುತ್ತವೆ ಮತ್ತು ಅವುಗಳಲ್ಲಿ ಕೆಲವೆಂದರೆ ಕಿತ್ತಲೆ ಹಣ್ಣಿನ ಹಬ್ಬ(ಒರನ್ಗೆ ಫ಼ೆಸ್ತಿವಲ್), ರೊಂಗ್-ಮೈ, ಗುಡೈ-ಮೈ, ಬನ್ರುಹ್ಮೈ ಮತ್ತು ತರಂಗ್ ಹಬ್ಬಗಳು.

ತಮೆಂಗ್ಲಾಂಗ್ ಪ್ರಸಿದ್ಧವಾಗಿದೆ

ತಮೆಂಗ್ಲಾಂಗ್ ಹವಾಮಾನ

ಉತ್ತಮ ಸಮಯ ತಮೆಂಗ್ಲಾಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಮೆಂಗ್ಲಾಂಗ್

  • ರಸ್ತೆಯ ಮೂಲಕ
    ಮಣಿಪುರಕ್ಕೆ ರಾಷ್ಟ್ರೀಯ ಹೆದ್ದಾರಿ 53 ಮತ್ತು 39 ರ ಮೂಲಕ ದೇಶದ ಉಳಿದ ಭಾಗಗಳಿಗೆ ಸಂಪರ್ಕ ಹೊಂದಿದೆ. ತಮೆಂಗ್ಲಾಂಗನ್ನು ಸೇರಲು ಪ್ರವಾಸಿಗಳು ರಾಷ್ಟ್ರೀಯ ಹೆದ್ದಾರಿ 53 ರಲ್ಲಿ ಹಳೇ ಕಾಚರ್ ರಸ್ತೆ ಮತ್ತು ತೆಮನ್ಲಾಂಗ್ ಖೊಂಗ್ಸಾಂಗ್ ರಸ್ತೆ ಮೂಲಕ ಪ್ರಯಾಣಮಾಡಬೇಕು. ರಾಜ್ಯ ಹೆದ್ದಾರಿಗಳು ಇಂಫಾಲಿನಿಂದ ತಮೆಂಗ್ಲಾಂಗನ್ನು ತಲಪುತ್ತವೆ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ಮೂಲಕವೂ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತಮೆಂಗ್ಲಾಂಗಿನಲ್ಲಿ ರೈಲ್ವೇ ಸಂಪರ್ಕವಿಲ್ಲದಿರುವುದರಿಂದ ಬಹಳ ಹತ್ತಿರದ ಸ್ಟೇಶನ್ ದಿಮಾಪುರದಲ್ಲಿದೆ. ತಮೆಂಗ್ಲಾಂಗನ್ನು ಸೇರಲು ಪ್ರವಾಸಿಗಳು ಮೊದಲು ಇಂಫಾಲವನ್ನು ಸೇರಿ, ಅಲ್ಲಿಂದ 215 ಕಿ.ಮೀ. ದೂರವಿರುವ ದಿಮಾಪುರಕ್ಕೆ ರೈಲು ಬದಲಾಯಿಸಬೇಕು. ಅಲ್ಲಿಂದ ಮತ್ತೆ 158 ಕಿ.ಮೀ. ದೂರವಿರುವ ತಮೆಂಗ್ಲಾಂಗನ್ನು ಸೇರಬಹುದು. ಇಂಫಾಲ ಮತ್ತು ದಿಮಾಪುರದಿಂದ ತಮೆಂಗ್ಲಾಂಗನ್ನು ಸೇರಲು ವ್ಯವಸ್ಥಿತ ವಾಹನಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಂಫಾಲ್ ವಿಮಾನ ನಿಲ್ದಾಣವು ತಮೆಂಗ್ಲಾಂಗಿಗೆ ಬಹಳ ಸಮೀಪದಲ್ಲಿದೆ. ಇಂಫಾಲ್ ನಗರವು 158 ಕಿ.ಮೀ. ದೂರದಲ್ಲಿದ್ದು, ವಿಮಾನ ನಿಲ್ದಾಣವು ರಾಜಧಾನಿ ನಗರದಿಂದ 8 ಕಿ.ಮೀ. ದೂರದಲ್ಲಿದೆ. ಇಂಫಾಲ್ ನಗರವು ದೇಶದ ಉಳಿದ ಎಲ್ಲಾ ಭಾಗಗಳಿಗೆ ಪ್ರತಿ ದಿನ ಉತ್ತಮ ಸಂಪರ್ಕವನ್ನು ಹೊಂದಿದೆ. ವಿಮಾನನಿಲ್ದಾಣದಿಂದ ತಮೆಂಗ್ಲಾಂಗನ್ನು ವಿಮಾನನಿಲ್ದಾಣದ ಶಟಲ್ ಸರ್ವೀಸ್ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat