ಟೆಂಪಲ್ ಆಫ್ ಡ್ರಾಮೊಟೋನ್ ದೇವಾಲಯವು ಬ್ರೋಮ್-ಸ್ಟೋಮ್ ಲಾ ಖಂಗ್ ಅಂತಲೂ ಕರೆಯಲ್ಪಡುತ್ತದೆ. ಇದು ಕೂಡ ತಾಬೊ ಆಶ್ರಮ ಆವರಣದಲ್ಲಿಯೇ ಇದೆ. ಇದು 1008 ರಿಂದ 1064 ರ ನಡುವಿನ ಅವಧಿಯಲ್ಲಿ ನಿರ್ಮಾಣಗೊಂಡಿದ್ದಾಗಿದೆ. ಆಶ್ರಮ ಆವರಣದ ಉತ್ತರ ಭಾಗದಲ್ಲಿದೆ. ದೇಗುಲದ ಗೋಡೆ ಹಾಗೂ ಬಾಗಿಲುಗಳು ಆಕರ್ಷಕ ಮ್ಯೂರಲ್ ಪೇಂಟಿಂಗ್ ಅಳವಡಿಕೆಯಿಂದ ಸಿಂಗಾರಗೊಂಡಿವೆ. ಉದ್ದನೇಯ ವರಾಂಡ ದೇವಾಲಯದ ವಿಶೇಷ ಆಕರ್ಷಣೆಯಾಗಿದೆ.