ಮಹಾಕಾಲ ವಜ್ರ-ಭೈರವ ದೇವಸ್ಥಾನವು ತಾಬೊ ಆಶ್ರಮ ಆವರಣದಲ್ಲಿಯೇ ಇದೆ. ಹೇರಳ ಸಂಖ್ಯೆಯಲ್ಲಿ ದೇವರ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಬುದ್ದಿಸಂ ಕಾಲದ ಗೆಲುಕೊಪ್ಪಾ ಭಾಗಕ್ಕೆ ಸಂಬಂಧಿಸಿದ ವಿಗ್ರಹಗಳು ಇದಾಗಿವೆ. ಈ ದೇಗುಲವು ಸಾಮಾನ್ಯವಾಗಿ 'ಟೆಂಪಲ್ ಆಫ್ ಹಾರರ್' ಎಂದು ಕರೆಸಿಕೊಳ್ಳುತ್ತದೆ, ಕಾರಣ ದೇವಾಲಯದ ಒಳಗಿರುವ ದೇವರ ಮೂರ್ತಿ ಉಗ್ರ ರೂಪದಲ್ಲಿರುವುದರಿಂದ. ರಕ್ಷಣೆಯ ಜಪ ಮಾಡಿಕೊಂಡೇ ದೇವಾಲಯದ ಒಳಗೆ ಪ್ರವೇಶಿಸುವಂತೆ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಸೂಚಿಸಲಾಗುತ್ತದೆ.