ಭೋದಿಸತ್ವ ಮೈತ್ರೇಯ ದೇವಾಲಯವು ಅತ್ಯಂತ ಜನಪ್ರಿಯ ಮಂದಿರಗಳಲ್ಲಿ ಒಂದು. ಇದನ್ನು ಬ್ಯಾಮ್ಸಾ-ಪಾ ಚೆನ್-ಪೊ ಲಾ-ಖಂಗ್ ಅಂತಲೂ ಕರೆಯಲಾಗುತ್ತದೆ. ಇಲ್ಲಿ ಮೈತ್ರೇಯ ಬುದ್ಧನ 20 ಅಡಿ ಎತ್ತರವಾದ ಆಕರ್ಷಕ ಮೂರ್ತಿಯನ್ನು ಕಾಣಬಹುದು. ಇದನ್ನು 'ನಗುತ್ತಿರುವವ ಬುದ್ಧ', 'ಭವಿಷ್ಯದ ಬುದ್ಧ' ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇಲ್ಲಿ ಅತ್ಯಾಕರ್ಷಕ ಮ್ಯೂರಲ್ ಚಿತ್ರಕಲೆ ಹಾಗೂ ಸುಂದರ ಕೆತ್ತನೆಯ ಬಾಗಿಲುಗಳು ಗಮನ ಸೆಳೆಯುತ್ತವೆ. ಗೋಡೆಯ ಮೇಲಿರುವ ಈ ಚಿತ್ರಗಳೇ ದೇವಾಲಯದ ಪ್ರಮುಖ ಆಕರ್ಷಣೆಗಳು.