Search
  • Follow NativePlanet
Share

ತಾಬೊ: ಕಂದು ಬೆಟ್ಟದ ತಪ್ಪಲಿನ ಸುಂದರ ನಗರ

18

ಹಿಮಾಚಲ ಪ್ರದೇಶ ರಾಜ್ಯದ ಸ್ಪಿತಿ ಕಣಿವೆಯಲ್ಲಿರುವ ಅತ್ಯಾಕರ್ಷಕ ಪ್ರವಾಸಿ ತಾಣ ತಾಬೊ. ಸಮುದ್ರ ಮಟ್ಟದಿಂದ ಈ ತಾಣ 3050 ಮೀಟರ್‌ ಎತ್ತರದಲ್ಲಿದೆ. ಪ್ರವಾಸಿಗರ ಪಾಲಿಗೆ ಅತ್ಯಂತ ಆಕರ್ಷಕ ವೀಕ್ಷಣಾ ಯೋಗ್ಯ ತಾಣಗಳನ್ನು ಒಳಗೊಂಡಿದೆ. ಈ ತಾಣವು ಲಾಹೌಲ್‌ ಹಾಗೂ ಸ್ಪಿತಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಸುತ್ತಲೂ ಕಂದು ಬಣ್ಣದ ಬೆಟ್ಟಗಳಿಂದ ಆವೃತ್ತವಾಗಿರುವ ಈ ಪ್ರದೇಶ ಸ್ಪಿತಿ ನದಿ ದಂಡೆಯ ಮೇಲಿದೆ.

ಸಾವಿರ ವರ್ಷ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗುವ ಟಾಬೊ ಆಶ್ರಮ ಇಲ್ಲಿನ ಪ್ರಮುಖ ಆಕರ್ಷಣೆ. ಸ್ಪಿತಿ ಕಣಿವೆಯ ಅತಿ ದೊಡ್ಡ ರಾಯಲ್‌ ಕಾಂಪ್ಲೆಕ್ಸ್‌ ಎಂಬ ಹೆಗ್ಗಳಿಕೆ ಹೊಂದಿರುವ ಇದು 6300 ಚದರ್‌ ಮೀಟರ್‌ ವಿಸ್ತೀರ್ಣದಲ್ಲಿ ಹರಡಿದೆ. ಈ ಆಶ್ರಮವು ಮಣ್ಣಿನ ಇಟ್ಟಂಗಿಯ ಗೋಡೆಯಿಂದ ಸುತ್ತುವರಿಯಲ್ಪಟ್ಟಿದೆ. ಇದರ ನಿರ್ಮಾಣ 996 ರಲ್ಲಿ ಆಗಿರಬಹುದು ಎನ್ನಲಾಗುತ್ತದೆ. ಈ ಆಶ್ರಮವು 9 ಮನೆಗಳು, 23 ಚೋರ್ಟನ್‌ಗಳನ್ನು ಒಳಗೊಂಡಿದೆ. ಇದು ಮೋಂಕ್‌ಗಳ ಚೇಂಬರ್‌ ಹಾಗೂ ನನ್‌ಗಳ ವಸತಿ ನೆಲೆಯನ್ನು ಹೊಂದಿದೆ. ಈ ಆಶ್ರಮವು ತಾಬೊ- ಚೋಸ್‌- ಖಾರ್‌ ಎಂದು ಕರೆಯಲ್ಪಡುತ್ತದೆ. ಇದು ಅಂದಗೊಳಿಸಿದ ವೃತ್ತ ಎಂಬ ಅರ್ಥ ನೀಡುತ್ತದೆ.

ವಾಸ್ತುಶಿಲ್ಪದ ಒಂದು ಸುಂದರ ಮಾದರಿಯಾಗಿ ಈ ಆಶ್ರಮ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಅತ್ಯಾಕರ್ಷಕ ಶಿಲ್ಪಗಳು, ಸಿಮೆಂಟ್‌ನಿಂದ ಸಿದ್ಧಪಡಿಸಿದ ಗೋಡೆ ಚಿತ್ರಗಳು, ಗೋಡೆ ಚಿತ್ರಪಟಗಳು ಆಕರ್ಷಣೀಯವಾಗಿವೆ. ಇಲ್ಲಿನ ಚಿತ್ರಗಳು ಅಜಂತಾ ಹಾಗೂ ಎಲ್ಲೋರಾ ಗುಹೆಗಳಲ್ಲಿರುವ ಚಿತ್ರಕಲೆಯ ಮಾದರಿಯನ್ನೇ ಹೋಲುತ್ತವೆ ಎನ್ನುವುದು ವಿಶೇಷ. ಇದರಿಂದಲೇ ತಾಬೊಗೆ 'ಹಿಮಾಲಯದ ಅಜಂತಾ' ಎಂದೂ ಕರೆಯಲಾಗುತ್ತದೆ.

ಇದು ಟಿಬೆಟ್‌ನ ತೋಲಿಂಗ ಗೊಂಪಾದ ನಂತರದ್ದು. ತಾಬೊವು ದೇಶದಲ್ಲೇ ಅತ್ಯಂತ ಪುರಾತನ ಬುದ್ಧ ಆಶ್ರಮವನ್ನು ಹೊಂದಿದ್ದು, ಇಂದಿಗೂ ಚಾಲನಾ ಸ್ಥಿತಿಯಲ್ಲಿದೆ. ಇಲ್ಲಿರುವ ಚಿತ್ರಕಲೆ 10 ಮತ್ತು 11ನೇ ಶತಮಾನದ್ದು. ಇದಲ್ಲದೇ ಮುಖ್ಯ ದೇಗುಲದ ಒಳಗಿರುವ ಚಿತ್ರಕಲೆಯು 15 ರಿಂದ 20ನೇ ಶತಮಾನದ ನಡುವಿನ ವೈಭವವನ್ನು ಒಳಗೊಂಡಿವೆ. ಇದು ಟಿಬೆಟ್‌ ಹಾಗೂ ಭಾರತೀಯ ಸಂಸ್ಕೃತಿಯನ್ನು ಅರಿಯಲು ಸೂಕ್ತ ತಾಣವಾಗಿದೆ. ತಾಬೊವು ಇಂಡೋ-ಟಿಬೇಟಿಯನ್‌ ಶೈಲಿಯ ಫ್ಯೂಷನ್‌ ಸಂಗೀತದ ಉಗಮ ತಾಣವಾಗಿದೆ ಕೂಡ.

ಈ ತಾಬೊ ಆಶ್ರಮದಲ್ಲಿರುವ ಇತರೆ ಖಾಯಂ ದೇವಾಲಯಗಳಾದ, ಗೋಲ್ಡನ್‌ ದೇವಾಲಯ, ಮಿಸ್ಟಿಕ್‌ ಮಂಡಲ ದೇವಾಲಯಗಳು ಸ್ಮರಿಸಲೇ ಬೇಕಾದ ಧಾರ್ಮಿಕ ಕೇಂದ್ರಗಳು. ಇದಲ್ಲದೇ ಇಲ್ಲಿರುವ ಹೊಳೆಯುವ ದೇಗುಲ (ಎನ್‌ಲೈಟನ್ಡ್‌ ಗಾಡ್‌)ವು ವಿಶೇಷ ಪ್ರಾಧಾನ್ಯತೆ ಹೊಂದಿದೆ. ಅಲ್ಲದೆ ಇದನ್ನು ತುಂಗ್‌-ಲಾ-ಖಂಗ್‌ ಅಂತಲೂ ಕರೆಯಲಾಗುತ್ತದೆ. ಇದು ಒಂದು ಸಮ್ಮೇಳನ ಸಭಾಂಗಣ, ಗರ್ಭಗುಡಿ, ಪ್ರವೇಶದ್ವಾರ ಹೊಂದಿದೆ. ದೇಗುಲದಲ್ಲಿ ನಾಲ್ಕು ಪ್ರತ್ಯೇಕ ವೈರೋಂಕನ ವಿಗ್ರಹ ಗಮನ ಸೆಳೆಯುತ್ತದೆ. ಈತನ ವಿಗ್ರಹ ಸಭಾಂಗಣದಲ್ಲಿ ಕೂರಿಸಲಾಗಿದ್ದು, ವೈರೋಂಕನು ಆದಿ ಬುದ್ಧನ ಐವರು ಧಾರ್ಮಿಕ ಶಕ್ತಿಯುಳ್ಳ ಮಕ್ಕಳಲ್ಲಿ ಒಬ್ಬ.

ಈ ಮೂರ್ತಿಯನ್ನು ಶುದ್ಧ ಚಿನ್ನದಿಂದ ಸಿದ್ಧಪಡಿಸಲಾಗಿದೆ. ಇಲ್ಲಿನ ಗೋಲ್ಡನ್‌ ಟೆಂಪಲ್‌ನ್ನು 16ನೇ ಶತಮಾನದಲ್ಲಿ ಕಟ್ಟಿಸಲಾಗಿದೆ. ಲಡಾಕ್‌ನ ಅರಸು ಸೆಂಗೆ ನಂಗ್ಯಾಲರಿಂದ ಇದು ನಿರ್ಮಾಣವಾಗಿದೆ. ಇನ್ನು ಮಿಸ್ಟಿಕ್‌ ಮಂಡಲ ದೇವಾಲಯವೂ ಅತ್ಯಂತ ಪ್ರಮುಖ ದೇಗುಲವಾಗಿದೆ. ಇಲ್ಲಿ ಆಕರ್ಷಕ ತೈಲಚಿತ್ರವೊಂದು ಅನಾವರಣಗೊಂಡಿದೆ. ಅದರಲ್ಲಿ ವೈರೋಂಕನನು ಎಂಟು ಮಂದಿ ಬೌದ್ಧವಟುಗಳ ಜತೆ ಇದ್ದು, ಮಧ್ಯದಲ್ಲಿ ಹೊಳೆಯುತ್ತಿದ್ದಾನೆ.

ಬೋಧಿಸತ್ವ ಮೈತ್ರೇಯ ದೇವಾಲಯವು ಅತ್ಯಂತ ಜನಪ್ರಿಯ ಮಂದಿರಗಳಲ್ಲಿ ಒಂದು. ಇಲ್ಲಿ ಮೈತ್ರೇಯ ಬುದ್ಧನ 20 ಅಡಿ ಎತ್ತರವಾದ ಆಕರ್ಷಕ ಮೂರ್ತಿಯನ್ನು ಕಾಣಬಹುದು. ಇದನ್ನು ಹೊಳೆಯುವ ಬುದ್ಧ, ಭವಿಷ್ಯದ ಬುದ್ಧ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇಲ್ಲಿ ಅತ್ಯಾಕರ್ಷಕ ಮ್ಯೂರಲ್‌ ಚಿತ್ರಕಲೆ ಹಾಗೂ ಸುಂದರ ಕೆತ್ತನೆಯ ಬಾಗಿಲುಗಳು ಗಮನ ಸೆಳೆಯುತ್ತವೆ. ಗೋಡೆಯ ಮೇಲಿರುವ ಈ ಚಿತ್ರಗಳೇ ದೇವಾಲಯದ ಪ್ರಮುಖ ಆಕರ್ಷಣೆಗಳು. ಅಲ್ಲದೆ ಇವು ಇತ್ತೀಚೆಗೆ ದೇಗುಲಕ್ಕೆ ಸೇರ್ಪಡೆ ಆಗಿವೆ. ಇದು ತಾಬೊ ಆಶ್ರಮದ ಎರಡನೇ ಅತಿದೊಡ್ಡ ದೇಗುಲವಾಗಿದೆ. ಈ ದೇಗುಲವು 70 ಚದರ್‌ ಮೀಟರ್‌ ವಿಸ್ತಾರದಲ್ಲಿ ಹರಡಿಕೊಂಡಿದೆ. ಇದು ಮಹಡಿ ಮೇಲಿನ ಭಾಗವಾಗಿದ್ದು, ಕೆಳ ಮಹಡಿಯ ವರಾಂಡ 42 ಚದರ್‌ ಮೀಟರ್‌ ಅಗಲವಾಗಿದೆ. ಇದು ಹೆಚ್ಚುವರಿ ಸೇರ್ಪಡೆ.

ಮಹಾಕಾಲ ವಜ್ರ-ಭೈರವ ದೇವಾಲಯ ಇಲ್ಲಿದ್ದು, ಇದು ಭಯದ ದೇಗುಲ ಎಂಬ ಹೆಸರು ಕೂಡ ಹೊಂದಿದೆ. ಏಕೆಂದರೆ ಇಲ್ಲಿರುವ ದೇವರುಗಳು ರಕ್ಷಣೆ ಮಾಡುವ ದೇವರಾಗಿದ್ದು, ಉಗ್ರ ರೂಪವನ್ನು ಹೊಂದಿವೆ. ಇದು ಗೇಲ್ಕಪ್ಪಾ ವಿಭಾಗದಲ್ಲಿ ಬರುತ್ತದೆ. ಬೌದ್ಧ ಧರ್ಮದಲ್ಲಿ ಇದನ್ನು ಉಗ್ರ ದೇವತೆ ಎಂದು ಪೂಜಿಸಲಾಗುತ್ತದೆ.

ತಾಬೊ ಆಶ್ರಮವು ಸಾಕಷ್ಟು ದೇವಾಲಯಗಳನ್ನು ಮಾತ್ರವಲ್ಲದೆ ಹೇರಳ ಸಂಖ್ಯೆಯಲ್ಲಿ ಟಿಬೇಟಿಯನ್‌ ಪೇಂಟಿಗ್‌ಗಳನ್ನೂ ಪ್ರದರ್ಶಿಸುತ್ತದೆ. ಇಲ್ಲಿ ಭೇಟಿ ನೀಡುವ ವೀಕ್ಷಕರು ಇಲ್ಲಿರುವ ಅತ್ಯಮೂಲ್ಯ ಚಿತ್ರಗಳನ್ನು  ಚಿತ್ರಗಳ ಭಂಡಾರದಲ್ಲಿರುವುದನ್ನು ಕಾಣಬಹುದು. ಇದನ್ನು ಜಾಲ್‌-ಮಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ತಾಬೊವು ರಸ್ತೆ, ರೈಲು ಹಾಗೂ ವಾಯು ಮಾರ್ಗದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇದಕ್ಕೆ ಸಮೀಪದ ವಿಮಾನ ನಿಲ್ದಾಣ ಕುಲ್ಲು. ತಾಬೊದಿಂದ ಇದು 294 ಕಿ.ಮೀ. ದೂರದಲ್ಲಿದೆ. ಇನ್ನೊಂದೆಡೆ ಸಮೀಪದ ರೈಲು ನಿಲ್ದಾಣ ಇರುವುದು ಕಲ್ಕಾದಲ್ಲಿ, ಇದು ತಾಬೊದಿಂದ 452 ಕಿ.ಮೀ. ದೂರದಲ್ಲಿದೆ.

ಬೇಸಿಗೆಯಲ್ಲಿ ಈ ತಾಣಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಸಲಹೆ ನೀಡಲಾಗುತ್ತದೆ. ಇದು ಮಾರ್ಚ್ ನಿಂದ ಜೂನ್‌ವರೆಗೂ ಇರುತ್ತದೆ. ಚಳಿಗಾಲದ ಸಂದರ್ಭದಲ್ಲಿ ತಾಬೊಗೆ ಬರುವುದು ತುಸು ಕಷ್ಟ. ಏಕೆಂದರೆ ಈ ಸಂದರ್ಭ ಇಲ್ಲಿ ವಿಪರೀತ ಹಿಮ ಬೀಳುತ್ತಿರುತ್ತದೆ.

ತಾಬೊ ಪ್ರಸಿದ್ಧವಾಗಿದೆ

ತಾಬೊ ಹವಾಮಾನ

ಉತ್ತಮ ಸಮಯ ತಾಬೊ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಾಬೊ

  • ರಸ್ತೆಯ ಮೂಲಕ
    ಸ್ಥಳೀಯ ಬಸ್‌ ಸೇವೆ ಮೂಲಕ ತಾಬೊವು ಇತರೆ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಹಿಮಾಚಲಪ್ರದೇಶ ರಸ್ತೆ ಸಾರಿಗೆ ನಿಗಮ (ಎಚ್‌ಆರ್‌ಟಿಸಿ) ಬಸ್‌ಗಳು ಕೂಡ ಉತ್ತಮ ಪ್ರಮಾಣದಲ್ಲಿದ್ದು ಖಾಜಾದಿಂದ ತಾಬೊಗೆ ಸಂಪರ್ಕ ಕಲ್ಪಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕಾವು ತಾಬೊಗೆ ಸಮೀಪದ ರೈಲು ನಿಲ್ದಾಣ. ತಾಬೊನಿಂದ 452 ಕಿ.ಮೀ. ದೂರದಲ್ಲಿದೆ. ಕಲ್ಕಾವು ಪ್ರಮುಖ ನಗರಗಳಾದ ಹೊಸ ದಿಲ್ಲಿ, ಬರಮೇರ್‌, ಬಂದ್ರಾ, ಅಮೃತ್‌ಸರ್‌, ಹಜರತ್‌ ನಿಜಾಮುದ್ದೀನ್‌ ಸೇರಿದಂತೆ ಹಲವೆಡೆಯಿಂದ ಉತ್ತಮ ಸಂಪರ್ಕ ಹೊಂದಿದೆ. ಪ್ರಯಾಣದ ದೂರ ಆಧರಿಸಿ ಪ್ರಯಾಣ ದರ 250 ರೂ.ನಿಂದ 600 ರೂ.ವರೆಗೂ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕುಲ್ಲು ಇದಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ತಾಬೊದಿಂದ 294 ಕಿ.ಮೀ. ದೂರದಲ್ಲಿದೆ. ಈ ವಿಮಾನ ನಿಲ್ದಾಣ ದಿಲ್ಲಿ, ಮುಂಬಯಿ, ಶಿಮ್ಲಾ ಸೇರಿದಂತೆ ಇತರೆ ಅನೇಕ ನಗರಗಳಿಂದ ಉತ್ತಮ ಸಂಪರ್ಕ ಹೊಂದಿದೆ. ತಾಬೊಗೆ ತಲುಪಲು ಈ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಸೌಲಭ್ಯ ಲಭ್ಯವಿದೆ. ಇವರು ಕೇವಲ ಐದು ಗಂಟೆಯಲ್ಲಿ ಸ್ಥಳ ತಲುಪಿಸುತ್ತಾರೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun