Search
  • Follow NativePlanet
Share
ಮುಖಪುಟ » ಸ್ಥಳಗಳು » ಸುರ್ಗುಜಾ » ಆಕರ್ಷಣೆಗಳು » ಟಮೊರ್ ಪಿಂಗ್ಲ ವನ್ಯಧಾಮ

ಟಮೊರ್ ಪಿಂಗ್ಲ ವನ್ಯಧಾಮ, ಸುರ್ಗುಜಾ

1

ಟಮೊರ್ ಪಿಂಗ್ಲ ವನ್ಯಧಾಮವು ಉತ್ತರ ಪ್ರದೇಶದಲ್ಲಿರುವ ಸುರ್ಗುಜಾ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ವನ್ಯಧಾಮಕ್ಕೆ ಇಲ್ಲಿನ ಟಮೊರ್ ಬೆಟ್ಟ ಮತ್ತು ಪಿಂಗ್ಲ ನಲ್ಲಗಳಿಂದಾಗಿ ಈ ಹೆಸರು ಬಂದಿದೆ. ಈ ಪ್ರದೇಶಕ್ಕೆ ತನ್ನದೇ ಆದ ಪ್ರಾಚೀನ ಮತ್ತು ಮಹತ್ವದ ಲಕ್ಷಣಗಳು ಇವೆ. ಮೊರನ್ ನದಿಯು ಈ ವನ್ಯಧಾಮದ ಗುಂಟ ಹರಿಯುತ್ತದೆ. ಮುಂದೆ ಇದು ಉತ್ತರ ಪ್ರದೇಶದಲ್ಲಿನ ಗೋವಿಂದ್ ಬಲ್ಲಭ್ ಪಂತ್ ಸಾಗರ ಜಲಾಶಯಕ್ಕೆ ಹೋಗಿ ಸೇರುತ್ತದೆ.

ಇದು ಅಂಬಿಕಾಪುರದಿಂದ 100 ಕಿ.ಮೀ ಮತ್ತು ಸುರಜ್‍ಪುರ್ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಸುಮಾರು 608.55 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ವನ್ಯಧಾಮವು ಅಸಂಖ್ಯಾತ ಸಂಖ್ಯೆಯ ಮರಗಳನ್ನು ಮತ್ತು ವನ್ಯಜೀವಿಗಳನ್ನು ಹೊಂದಿದೆ. ಪಿಂಪ್ರಿಯು ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಈ ಪ್ರದೇಶಕ್ಕೆ ಸಂಪರ್ಕದ ಕೊರತೆ ಇದೆ. ಘುಯಿ ಮತ್ತು ಬಿಹಾರಪುರ್ ವಲಯಗಳು ಸುರ್ಗಜಾ ಅರಣ್ಯ ವಿಭಾಗದ ನಡುವೆ ಬರುತ್ತವೆ.

ಮಿಶ್ರ ಮಾದರಿಯ ದಟ್ಟ ಕಾಡುಗಳು ಈ ವನ್ಯಧಾಮದಲ್ಲಿ ಕಂಡು ಬರುತ್ತವೆ. ಸಾಲ್ ಮತ್ತು ಬಿದಿರು ಕಾಡುಗಳನ್ನು ಈ ವನ್ಯಧಾಮದಲ್ಲಿ ನಾವು ನೋಡಬಹುದು. ಹುಲಿಗಳು, ಚಿರತೆಗಳು, ಕರಡಿಗಳು, ಸಾಂಬರ್ ಜಿಂಕೆ, ನೀಲಿ ಹೋರಿಗಳು, ಚೀತಲ್, ಕಡವೆ ಮತ್ತು ಇನ್ನಿತರ ಪ್ರಾಣಿಗಳನ್ನು ನಾವು ಇಲ್ಲಿ ಕಾಣಬಹುದು. ವೈವಿಧ್ಯಮಯ ಪಕ್ಷಿಗಳನ್ನು ಮತ್ತು ಸರಿಸೃಪಗಳನ್ನು ಈ ಪ್ರಾಂತ್ಯದಲ್ಲಿ ನಾವು ಕಾಣಬಹುದು.

ನವೆಂಬರ್ ನಿಂದ ಜೂನ್ ಅವಧಿಯ ನಡುವಿನ ಸಮಯವು ಈ ವನ್ಯಧಾಮಕ್ಕೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿದೆ. ಜಾರ್ಖಂಡ್‍ನ ರಾಂಚಿ ಮತ್ತು ಉತ್ತರ ಪ್ರದೇಶದ ವಾರಣಾಸಿಯು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಸುರಜ್‍ಪುರ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಪ್ರವಾಸಿಗರು ಮತ್ತು ಸಂಶೋಧಕರು ರಾಮ್‍ಕೊಲ ಅಥವಾ ಅಂಬಿಕಾಪುರದಲ್ಲಿ ಉಳಿದುಕೊಳ್ಳಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun