ಸುವಾಲಿ ಕಪ್ಪುಮಣ್ಣಿನ ಸಮುದ್ರತೀರ. ಇದು ನಗರದಿಂದ 28ಕಿಮೀ ದೂರದಲ್ಲಿರುವ ಹಜಿರ ಎನ್ನುವ ಸ್ಥಳದಲ್ಲಿದ್ದು ಇಲ್ಲಿ ಅಷ್ಟಾಗಿ ಜನ ಬರುವುದಿಲ್ಲ. ಹಾಗಾಗಿ ಇಲ್ಲಿ ಏಕಾಂತದಲ್ಲಿ ಪ್ರಕೃತಿಯನ್ನು ಸವಿಯಬಹುದು. ಸುವಾಲಿಯಲ್ಲಿ ಸಲ್ಫರ್ ಮತ್ತು ಕಬ್ಬಿಣ ಹೆಚ್ಚಾಗಿರುವ ಎರಡು ಬಾವಿಗಳಿವೆ. ಈ ತೀರದಲ್ಲಿ ಗಾಳಿ ಮರ ಅಥವ ಸರ್ವೇ ಮರಗಳು ಹೆಚ್ಚಾಗಿವೆ.