Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಆಕರ್ಷಣೆಗಳು » ಶ್ರೀರಂಗನಾಥಸ್ವಾಮಿ ದೇವಾಲಯ

ಶ್ರೀರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

2

ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ 9 ನೇ ಶತಮಾನದಲ್ಲಿ ಗಂಗರು ಕಟ್ಟಿಸಿದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು ದೊಡ್ಡ ದೇವಾಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಂಗರ ನಂತರ ವಿಜಯನಗರ ಅರಸರು ಮತ್ತು ಹೊಯ್ಸಳರ ದೊರೆಗಳು ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರು.  ಇದು ವಿಷ್ಣುವಿನ ರೂಪವಾದ ರಂಗನಾಥಸ್ವಾಮಿಯ ದೇವಾಲಯವಾಗಿದ್ದು, ಪಂಚರಂಗ ಕ್ಷೇತ್ರಗಳಲ್ಲಿ ಒಂದೆಂದು ಹೆಸರಾಗಿದೆ.ಈ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪುಕಲ್ಲಿನಿಂದ ಕಡೆಯಲಾಗಿರುವ ಸ್ವಾಮಿಯ ಮೂರ್ತಿಯಿದ್ದು, ಇದು ನಗುಮೊಗವನ್ನು ಹೊಂದಿದೆ. ಈ ವಿಗ್ರಹವು ಆದಿಶೇಷನ ಮೇಲೆ ಮಲಗಿರುವ ಅನಂತನಾಥನನ್ನು ತೋರಿಸುತ್ತದೆ. ದೇವಾಲಯದಲ್ಲಿ 24 ಸುಂದರ ಕಂಬಗಳಿದ್ದು ಅವು ವಿಷ್ಣುವಿನ 24 ರೂಪಗಳನ್ನು ತೋರಿಸುತ್ತದೆ. ಇವುಗಳು ಈ ಸ್ಮಾರಕದ ಸೌಂದರ್ಯವನ್ನು ದ್ವಿಗುಣಗೊಳಿಸಿದೆ. ಈ ದೇವಾಲಯದ ಒಳಗೋಡೆಗಳು ಶ್ರೀನಿವಾಸ ಸ್ವಾಮಿಯ ವಿವಿಧ ಚಿತ್ರಗಳಿಂದ ಹಾಗು ಪಂಚಮುಖ ಆಂಜನೇಯನ ಚಿತ್ರಗಳಿಂದ ಅಲಂಕೃತವಾಗಿವೆ.ಕರ್ನಾಟಕದ ದೊಡ್ಡ ದೇವಾಲಯಗಳಲ್ಲಿ ಒಂದೆಂದು ಹೆಸರಾಗಿರುವ ಈ ದೇವಾಲಯವು ಒಂದು ಮಹಾದ್ವಾರವನ್ನು ,ಸದೃಡವಾದ ಗೋಪುರವನ್ನು ಹಾಗು ಕಂಬಗಳಿರುವ ಮೊಗಸಾಲೆಯನ್ನು ಹೊಂದಿದೆ. ಇವುಗಳನ್ನು ಮೂರು ಅಥವಾ ನಾಲ್ಕು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರು ಇಲ್ಲಿಗೆ ಸಂಕ್ರಾಂತಿಯ ಶುಭದಿನದಂದು ನಡೆಯುವ ಲಕ್ಷದೀಪೋತ್ಸವಕ್ಕೆ ಆಗಮಿಸಬಹುದು. ಈ ದೇವಾಲಯವು ವರ್ಷಪೂರ್ತಿ ಬೆಳಗ್ಗೆ 8ರಿಂದ 9;30ರವರೆಗೆ ಮತ್ತು ಸಂಜೆ 7ರಿಂದ  8ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu