ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ ಇಲ್ಲಿಂದ 14ಕಿ.ಮೀ ದೂರದಲ್ಲಿರುವ ಸುಂದರವಾದ ಕೆರೆತೊನ್ನೂರು ಗ್ರಾಮಕ್ಕೆ ಒಮ್ಮೆ ಭೇಟಿಕೊಡಬಹುದು.ಈ ಊರು ಎತ್ತರಕ್ಕೆ ಬೆಳೆದಿರುವ ಮರಗಳ ನಡುವೆ ನೆಲೆಗೊಂಡಿರುವ ಸುಂದರವಾದ ಕೆರೆಯಿಂದಾಗಿ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಈ ಕೆರೆಯು ಮೊದಲಿಗೆ ಟಿಪ್ಪುಸುಲ್ತಾನನಿಂದ ಮೋತಿಕೆರೆ ಎಂದು ಹೆಸರು ಪಡೆದಿತ್ತು. ಈಗ ಇದನ್ನು ಬ್ಲೂ ಲಗೂನ್ ಎಂದರೆ ನೀಲಿ ಸರೋವರವೆಂದು ಸಹಾ ಕರೆಯುತ್ತಾರೆ. ಪ್ರವಾಸಿಗರು ಈ ಕೆರೆಗೆ ವಿಹಾರಕ್ಕೆ ಬಂದಾಗ ಇಲ್ಲಿ ಈಜಾಡಬಹುದು, ತೆಪ್ಪದ ದೋಣಿಯಲ್ಲಿ ವಿಹಾರಮಾಡಬಹುದು.ಕೆರೆತೊನ್ನೂರಿನ ಇತರ ಪ್ರವಾಸಿ ಆಕರ್ಷಣೆ ಎಂದರೆ ಚೋಳರ ಆಡಳಿತದ ಅವಧಿಯಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳು.