Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಹವಾಮಾನ

ಶ್ರೀನಗರ ಹವಾಮಾನ

ಏಪ್ರಿಲ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಶ್ರೀನಗರಕ್ಕೆ ಭೇಟಿ ನೀಡಲು ಸೂಕ್ತ ಸಮಯ ಎಂದು ಪರಿಗಣಿಸಲಾಗಿದೆ. ಬೇಸಿಗೆ ಅತ್ಯಂತ ಆಹ್ಲಾದಕರವಾಗಿದ್ದು  ಚಳಿಗಾಲದಲ್ಲಿ ಇಲ್ಲಿ ವಿಪರೀತ ಚಳಿಯಿರುತ್ತದೆ. ಅಲ್ಲದೇ ಇಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಚಳಿಗಾಲದಲ್ಲಿ ಹಿಮಪಾತವನ್ನು ಆನಂದಿಸಲು ಶ್ರೀನಗರಕ್ಕೆ ಬರುತ್ತಾರೆ. ಬೇಸಿಗೆ ಕಾಲದಲ್ಲಿ ಇಲ್ಲಿನ ನೈಸರ್ಗಿಕ ಸೌಂದರ್ಯವು ಭವ್ಯವಾಗಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಸೆಪ್ಟಂಬರ್):  ಶ್ರೀನಗರದಲ್ಲಿ ಬೇಸಿಗೆಯು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪವಾನ ಹಗಲಿನಲ್ಲಿ ಗರಿಷ್ಠ 33 ಡಿ. ಸೆ ಮತ್ತು ರಾತ್ರಿಯ ವೇಳೆ ಕನಿಷ್ಠ 10 ಡಿ. ಸೆ ದಾಖಲಾಗುತ್ತದೆ. ಶ್ರೀನಗರದ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಬೇಸಿಗೆಯಲ್ಲಿ ಈ ಸ್ಥಳಕ್ಕೆ ಪ್ರಯಾಣ ಕೈಗೊಳ್ಳುವುದು ಸೂಕ್ತ. ಈ ಸಮಯದಲ್ಲಿ ಇಲ್ಲಿನ ಸರೋವರಗಳು ಮತ್ತು ಉದ್ಯಾನವನಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮಳೆಗಾಲ

ಚಳಿಗಾಲ

(ಅಕ್ಟೋಬರ್ ನಿಂದ ಮಾರ್ಚ್) : ಶ್ರೀನಗರದಲ್ಲಿ ಚಳಿಗಾಲದಲ್ಲಿ ಅತೀ ಹೆಚ್ಚು ಚಳಿ ಇರುತ್ತದೆ. ಈ ಅವಧಿಯಲ್ಲಿ ಶ್ರೀನಗರದ ತಾಮಪಾನ ಕನಿಷ್ಠ 0 ಡಿ. ಸೆ ನಿಂದ ಗರಿಷ್ಠ 15 ಡಿ. ಸೆನಷ್ಟು ದಾಖಲಾಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ಹಿಮಪಾತವನ್ನು ನೋಡಲು ಸಹಸ್ರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಹೆಚ್ಚುವರಿಯಾಗಿ ಇಲ್ಲಿನ ಹಿಮಾಚ್ಛಾದಿತ ಶಿಖರಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.