ಇದು ಕಿ, ಕೇ ಹಾಗೂ ಕೀ ಆಶ್ರಮ ಅಂತೆಲ್ಲಾ ಕರೆಸಿಕೊಳ್ಳುತ್ತದೆ. ಇದು ಸಮುದ್ರ ಮಟ್ಟದಿಂದ 4116 ಮೀಟರ್ ಎತ್ತರದಲ್ಲಿದೆ. ಖಾಜಾದಿಂದ 20 ಕಿ.ಮೀ. ದೂರದಲ್ಲಿದೆ. ಇದು ಸ್ಪಿತಿ ಉಪವಿಭಾಗದ ಕೇಂದ್ರ ಸ್ಥಳವಾಗಿದೆ.
ನೇರವಾದ ಕಾರಿಡಾರ್ ಹಾಗೂ ಕಡಿಮೆ ಎತ್ತರದ ಕೋಣೆಗಳನ್ನು ಒಳಗೊಂಡ ಅಸಮರ್ಪಕ ಆಕಾರದಲ್ಲಿದೆ ಈ ಆಶ್ರಮ. ಇಲ್ಲಿನ ಪ್ರಾರ್ಥನಾ ಕೊಠಡಿಯೂ ಅಸಮರ್ಪಕವಾಗಿದೆ. ಇದು ಉದ್ದನೇ ನೇರವಾದ ಪ್ಯಾಸೇಜ್ನ ಸಂಪರ್ಕವನ್ನು ಹೊಂದಿದೆ. ಬೆಂಡಾದ ಮೆಟ್ಟಿಲುಗಳು, ಚಿಕ್ಕ ಬಾಗಿಲು ಒಳಗೊಂಡಿದೆ.
ಈ ಆಶ್ರಮದ ನಿರ್ಮಾಣ ವಾಸ್ತುಶಿಲ್ಪವು 'ಪಸಾದ' ವಾಸ್ತುಶಿಲ್ಪ ಮಾದರಿಯನ್ನು ಅನುಸರಿಸುತ್ತದೆ. ಈ ಆಶ್ರಮದಲ್ಲಿ ಅತ್ಯಾಕರ್ಷಕ ಪೇಂಟಿಗ್ಗಳಿವೆ. ಥಂಕಗಳು, ಅಪರೂಪದ ಲಿಪಿಗಳು, ಸ್ಟುಕೋ ಚಿತ್ರಗಳು, ಗಾಳಿ ಸಾಧನಗಳಿವೆ. ಈ ಆಶ್ರಮವು ಹೇರಳ ಸಂಖ್ಯೆಯಲ್ಲಿ ಹಳೆಯ ಆಯುಧಗಳನ್ನು ಹೊಂದಿದೆ. ಪುರಾಣಗಳ ಪ್ರಕಾರ, ಇದನ್ನು ವೈರಿಗಳನ್ನು ಹಿಮ್ಮೆಟ್ಟಿಸಲು ಬಳಸಲಾಗುತ್ತಿತ್ತು. ಅಲ್ಲದೇ ಆಶ್ರಮದ ಇನ್ನೊಂದು ವಿಶೇಷ ಅಂದರೆ ನೂರಾರು ಜನರಿಗೆ ಏಕಕಾಲಕ್ಕೆ ಧಾರ್ಮಿಕ ತರಬೇತಿಯನ್ನು ನೀಡಲಾಗುತ್ತದೆ.