Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನೆಪತ್ » ಆಕರ್ಷಣೆಗಳು » ಖ್ವಾಜಿಯ ಖಿರ್ಜ ಸಮಾಧಿ

ಖ್ವಾಜಿಯ ಖಿರ್ಜ ಸಮಾಧಿ, ಸೋನೆಪತ್

1

ಖ್ವಾಜಿಯ ಖಿರ್ಜ ಒಬ್ಬ ಸೂಫಿ ಸಂತ ಈತ ಇಬ್ರಾಹಿಂ ಲೋಧಿಯ ಕಾಲದಲ್ಲಿ ಬದುಕಿದ್ದ. 1522-124ರಲ್ಲಿ ಈ ಸಮಾಧಿಯನ್ನು ಈತನ ಸಾವಿನ ನಂತರ ನಿರ್ಮಿಸಲಾಯಿತು. ಈ ಸಮಾಧಿಯ ಮೇಲಿನ ಶಾಸನದ ಪ್ರಕಾರ ಈತ ದರಿಯಾ ಖಾನ್ ಸರ್ವಾನಿಯ ಮಗ. ಇದು ಕೆಂಪು ಮರಳು ಶಿಲೆಗಳು ಮತ್ತು ಕಂಕಾರ್ ಕಲ್ಲುಗಳಿಂದ ಕಟ್ಟಿರುವ ಕೆಲವೇ ಕಟ್ಟಡಗಳಲ್ಲಿ ಒಂದು. ಇದನ್ನು ಎತ್ತರಿಸಿದ ಪೀಠದ ಮೇಲೆ ಕಟ್ಟಲಾಗಿದೆ. ಇದಕ್ಕೆ ಚೌಕಾಕಾರದ ಚೌಕಟ್ಟನ್ನು ಕಟ್ಟಿ ವಿಸ್ತರಿಸಲಾಗಿದೆ.

ಸಮಾಧಿಗೆ ತಲುಪಲು ಮೆಟ್ಟಿಲುಗಳಿವೆ. ಒಳಹೋಗುವಲ್ಲಿ ಕಮಾನಿನಾಕಾರದ ಬಾಗಿಲಿದ್ದು ಒಳಹೋಗಲು ಸಣ್ಣ ಓಣಿಯಂತಹ ಸ್ಥಳವಿದೆ. ಇದರ ಹೊರಭಾಗದಲ್ಲಿ ಕಮಲಗಳನ್ನು, ಹೂವಿನ ವಿನ್ಯಾಸಗಳನ್ನು ಕಾಣಬಹುದಾಗಿದೆ. ಇದರ ಛಾವಣಿಯಲ್ಲೂ ಹೂವಿನ ವಿನ್ಯಾಸಗಳಿದ್ದು  ಹಳದಿ, ಹಸಿರು ಮತ್ತು ಕೆಂಪು ಬಣ್ಣಗಳನ್ನು ಇದಕ್ಕೆ ಬಳಸಲಾಗಿದೆ.

ಸಮಾಧಿಯ ಕೇಂದ್ರ ಭಾಗ ಅಂದರೆ ಶವವನ್ನು ಹೂಳಿರುವ ಸ್ಥಳದಲ್ಲಿ ಅರೆವೃತ್ತಾಕಾರದ ಗುಮ್ಮಟವನ್ನು ತಲೆಕೆಳಗಾದ ಕಮಲದಂತೆ ಸ್ತಂಭಗಳ ಮೇಲೆ ನಿಲ್ಲಸಲಾಗಿದೆ. ಈ ಸಮಾಧಿಯು ನಾಲ್ಕು ಎಕರೆ ಪ್ರದೇಶದಲ್ಲಿ ಹಸಿರು ಉದ್ಯಾನಗಳ ನಡುವೆ ಇದೆ. ಇದನ್ನು ಸಂರಕ್ಷಿತ ಸ್ಮಾರಕವೆಂದು ಭಾರತೀಯ ಪುರಾತತ್ವ ಸಂರಕ್ಷಣಾಲಯವು ಘೋಷಿಸಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat