ಪ್ರವಾಸಿಗರು ಸೊಂದಾದ ಮೂಲಕ ಹಾದು ಹೋಗುವಾಗ ಇಲ್ಲಿನ ವಾದಿರಾಜ ಮಠಕ್ಕೆ ಭೇಟಿಕೊಡಬಹುದು. ಇದು ಈ ಗ್ರಾಮದ ಪ್ರಮುಖ ಆಕರ್ಷಣೆಯೆಂದು ಗುರುತಿಸಲ್ಪಟ್ಟಿದೆ. ಈ ಮಠವು ಎತ್ತರವಾದ ಬೆಟ್ಟಗಳಿಂದ,ಹಚ್ಚ ಹಸಿರಿನಿಂದ ಕೂಡಿದ ದಟ್ಟ ಅಡವಿಗಳಿಂದ ಮತ್ತು ನದಿಯಿಂದ ಸುತ್ತುವರೆದಿದ್ದು, ಇಲ್ಲಿಗೆ ಭೇಟಿ ಕೊಡುವವರು ಇಲ್ಲಿನ ಸೌಂದರ್ಯಕ್ಕೆ ಮತ್ತು ಪ್ರಶಾಂತ ವಾತಾವರಣಕ್ಕೆ ಮನಸೋಲುವಂತೆ ಮಾಡುತ್ತದೆ.