Search
  • Follow NativePlanet
Share

ಸೊಂದಾ – ಹಲವು ಮಠಗಳ ನಾಡು.

7

ಸೊಂದಾ ಅಥವಾ ಸೋದೆ ಎನ್ನುವುದು ಒಂದು ತೀರ್ಥ ಕ್ಷೇತ್ರವಾಗಿದ್ದು, ಇಲ್ಲಿ ವಾದಿರಾಜರ ಮಠವಿದೆ, ಇದು ಕರ್ನಾಟಕದ  ಉತ್ತರ ಕನ್ನಡ ಜಿಲ್ಲೆಯಲ್ಲಿನ ಮತ್ತೊಂದು ಪ್ರಮುಖ ತೀರ್ಥಕ್ಷೇತ್ರ ಶಿರಸಿಗೆ ಸಮೀಪದಲ್ಲಿದೆ.

 

ಸೊಂದಾವು ಸಮುದ್ರಮಟ್ಟದಿಂದ 2000 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಇದು 16ರಿಂದ 18ನೇ ಶತಮಾನದಲ್ಲಿ ಸ್ವಾಡಿ ದೊರೆಗಳ ಕಾಲದಲ್ಲಿ ಒಂದು ಪ್ರಮುಖ ಪಟ್ಟಣವಾಗಿ ಗುರುತಿಸಿಕೊಂಡಿತ್ತು. ಶ್ರೀ ವಾದಿರಾಜರು ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು  ಪ್ರಚಾರ ಮಾಡುವ ಸಲುವಾಗಿ ಇಲ್ಲೊಂದು  ಮಠವನ್ನು ಕಟ್ಟಿದರು.

 

ಪ್ರವಾಸಿಗರ ಹಿಂಡು ಏಕೆ  ಸೊಂದಾಕ್ಕೆ ಬರುತ್ತದೆ.

ಇಲ್ಲಿ ಒಂದು ಮಹಾವಿಷ್ಣುವಿನ ಅವತಾರವಾದ ತ್ರಿವಿಕ್ರಮ ದೇವನ ದೇವಾಲಯವಿದೆ. ಗರ್ಭಗುಡಿಯಲ್ಲಿ ತ್ರಿವಿಕ್ರಮನ ಸುಂದರ ಮೂರ್ತಿಯಿದೆ ಮತ್ತು ದೇವಾಲಯದ ಹೊರಗೆ ಉತ್ಸವಗಳ ಕಾಲದಲ್ಲಿ ಬಳಸಲಾಗುವ ಒಂದು ಕಲ್ಲಿನ ರಥವಿದೆ. ರಥದ ಒಳಭಾಗದಲ್ಲಿ ಶ್ರಿವಿಷ್ಣುವಿನ ಸತಿಯಾದ  ಶ್ರೀ ಮಹಾಲಕ್ಷ್ಮಿಯ ಚಿತ್ರವಿದೆ. ದೇವಾಲಯದ ಉತ್ತರ ಭಾಗದಲ್ಲಿ ರಾಜಾಂಗಣವಿದ್ದು, ಅಲ್ಲಿಂದ ಮಠವನ್ನು ಪ್ರವೇಶಿಸಬಹುದು. ನೀವು ಅದಕ್ಕಾಗಿ  24 ಮೆಟ್ಟಿಲು ಇಳಿದು ಬರಬೇಕು. ಈ ಸ್ಥಳದಲ್ಲಿ ಒಂದು ಅಡುಗೆ ಮನೆ, ಉಗ್ರಾಣಗಳು ಮತ್ತು ಪೂಜಾಮಂದಿರವಿದೆ.

ಸೊಂದಾದಲ್ಲಿ ಒಂದು ಹಳೆಯ ಕೋಟೆಯಿದ್ದು ಅದು ಹಲವು ಚಿಕ್ಕ ಮತ್ತು ಹಳೆಯ ಫಿರಂಗಿಗಳನ್ನು ಹೊಂದಿದೆ. ಸೊಂಡದಲ್ಲಿ ವಾದಿರಾಜ ಮಠದ ಹೊರತಾಗಿ ಮತ್ತೆರಡು ಮಠಗಳಿವೆ, ಅವುಗಳೆಂದರೆ ಅಕಲಂಕ ಮಠ ಮತ್ತು ಸ್ವರ್ಣವಲ್ಲಿ ಮಠ. ಇಲ್ಲೊಂದು ಜೈನ ಬಸದಿಯು ಇದೆ. ಅಲ್ಲದೆ ವೆಂಕಟರಮಣಸ್ವಾಮಿಯ ದೇವಾಲಯವಿದೆ. ಸೊಂದಾ ಅಥವಾ ಸೋದೆಯು ತನ್ನ ದೇವಾಲಯ ಮತ್ತು ಮಠಗಳಿಂದಾಗಿ ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿರುವಂತಹ ಸ್ಥಳವಾಗಿದ್ದು, ಪ್ರವಾಸಿಗರಿಗೆ ಭೇಟಿಕೊಡಲು ಒಂದು ಆಸಕ್ತಿದಾಯಕವಾದ ತಾಣವಾಗಿದೆ.

ಸೊಂದಾ ಪ್ರಸಿದ್ಧವಾಗಿದೆ

ಸೊಂದಾ ಹವಾಮಾನ

ಉತ್ತಮ ಸಮಯ ಸೊಂದಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೊಂದಾ

  • ರಸ್ತೆಯ ಮೂಲಕ
    ಸೊಂದಾಕ್ಕೆ ತಲುಪಲು ಹತ್ತಿರದ ಶಿರಸಿಯಿಂದ ನಿರಂತರ ಬಸ್ಸುಗಳ ಸೌಲಭ್ಯವಿದೆ. ಪ್ರವಾಸಿಗರು ಬೆಂಗಳೂರು ( 425 ಕಿ.ಮೀ) ಮತ್ತು ಹುಬ್ಬಳ್ಳಿಯಿಂದ ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಯ ಬಸ್ಸುಗಳಲ್ಲಿ ಶಿರಸಿವರೆಗೆ ತಲುಪಬಹುದು. ಅಲ್ಲಿಂದ ಬಾಡಿಗೆ ಟ್ಯಾಕ್ಸಿಗಳಲ್ಲಿ ಸೊಂದಾಕ್ಕೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕುಮಟಾ ರೈಲುನಿಲ್ದಾಣವು ಸೊಂದಾಗೆ ಹತ್ತಿರದ ರೈಲು ನಿಲ್ದಾಣವಾಗಿದ್ದು, ಅದು ಇಲ್ಲಿಂದ 70 ಕಿ.ಮೀ ದೂರದಲ್ಲಿದೆ. ಕುಮಟಾವು ಗೋವಾ, ಮಂಗಳೂರು ಮತ್ತು ಪಣಜಿಯಂತಹ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕ ಸೇವೆಯನ್ನು ಹೊಂದಿದೆ.ಇಲ್ಲಿಂದ ಯಾತ್ರಾರ್ಥಿಗಳಿಗೆ ಟ್ಯಾಕ್ಸಿ ಮತ್ತು ಬಾಡಿಗೆ ವಾಹನ ಸೌಲಭ್ಯವು ದೊರೆಯುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹುಬ್ಬಳ್ಳಿ ವಿಮಾನನಿಲ್ದಾಣವು ಇಲ್ಲಿಂದ 130 ಕಿ,ಮೀ ದೂರದಲ್ಲಿದ್ದು, ಅದು ಸೊಂದಾಕ್ಕೆ ದೇಶದ ಇತರ ನಗರಗಳಿಂದ ವಿಮಾನ ಸಂಪರ್ಕವನ್ನು ಕಲ್ಪಿಸುತ್ತದೆ. ಇನ್ನು ಯೂರೋಪ್, ಏಶಿಯಾ, ಅಮೆರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರವಾಸಿಗರಿಗೆ ಡಬೊಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅನುಕೂಲಕರವಾಗಿದ್ದು,ಇಲ್ಲಿಗೆ ಕೆಲವು ಚಾರ್ಟರ್ ವಿಮಾನಗಳ ಹಾರಾಟ ಸೌಲಭ್ಯ ಸಹಾ ಇದೆ. ಅದು ಸೊಂದಾದಿಂದ 233 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat