Search
  • Follow NativePlanet
Share
ಮುಖಪುಟ » ಸ್ಥಳಗಳು» ಸೋನಾಮಾರ್ಗ್

ಸೋನಾಮಾರ್ಗ - ಹಿಮನದಿಗಳ ನಾಡು ಸೋನಾಮರ್ಗ

56

ಚುಮುಚುಮು ಮಂಜಿನಲ್ಲಿ ಹೆಪ್ಪುಗಟ್ಟಿದ, ಬೆಳ್ಳಿ ಬೆಟ್ಟದಂತಿರುವ ಸರೋವರ ಹಾಗೂ ಪರ್ವತಗಳನ್ನು ನೋಡಬೇಕೆಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಇಂತಹ ಒಂದು ಸುಂದರ ಅನುಭವವನ್ನು ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ ಕ್ಷಣವಾಗಿರುತ್ತದೆ. ಈ ಮನ ಮೋಹಕ ದೃಶ್ಯಾವಳಿಗಳನ್ನು ಹೊತ್ತುನಿಂತ ಸ್ಥಳ, ಅದುವೇ ಜಮ್ಮುವಿನ ಸೋನಾಮಾರ್ಗ!

ಇಲ್ಲಿನ ಹೆಪ್ಪುಗಟ್ಟಿದ ಸರೋವರಗಳನ್ನು ನೋಡುವುದೇ ಚಂದ. ಸದಾ ಉತ್ತಮ ಹವಾಮಾನವನ್ನು ಹೊಂದಿರುವ ಈ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಸ್ವರ್ಣ - ಬೆಳ್ಳಿ ಮಿಶ್ರಿತ ಪರ್ವತಗಳು, ಹೂವಿನ ಹಾಸಿಗೆಗಳಂತ ಮರಗಳು ಎಂಥವರನ್ನಾದಾರೂ ಮಂತ್ರಮುಗ್ಧರನ್ನಾಗಿಸಿಬಿಡುತ್ತದೆ. ಇಂತಹ ಒಂದು ಅಪರೂಪದ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಸೋನಾಮಾರ್ಗ್,  ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ  ಕಂಡುಬರುವ ಜನಪ್ರಿಯ ಬೆಟ್ಟದ ಪಟ್ಟಣ, ಈ ಪಟ್ಟಣವು ಸಮುದ್ರ ಮಟ್ಟದಿಂದ 2740 ಮೀ ಎತ್ತರದಲ್ಲಿ ನಿಂತಿದೆ ಹಾಗೂ ಹಿಮ ಮುಚ್ಚಿದ ಪರ್ವತಗಳಿಂದ ಆವೃತವಾಗಿದೆ,  ಸೋನಾಮಾರ್ಗ್ ನಗರವು ಜೋಜಿ ಲಾ ಪಾಸ್ ಗಿಂತ ಮೊದಲು ಕಂಡುಬರುತ್ತದೆ. ಸೋನಮಾರ್ಗ್ ಪದದ ಅರ್ಥವು “ಚಿನ್ನದ ಹುಲ್ಲುಗಾವಲು” ಎಂಬುದು. ಈ ಸ್ಥಳವು ತನ್ನ ಈ ಹೆಸರನ್ನು ಪಡೆಯಲು ಕಾರಣವೇನೆಂದರೆ ವಸಂತ ಋತುವಿನಲ್ಲಿ, ಈ ಪ್ರದೇಶವನ್ನು ಸುತ್ತುವರಿದ ಸುಂದರ ಹೂವುಗಳು ಚಿನ್ನದ ಹೂವುಗಳಂತೆ ಗೋಚರಿಸುತ್ತವೆ. ಇಲ್ಲಿನ ಉನ್ನತ ಪರ್ವತ ಶಿಖರಗಳು ಕೂಡ ಸೂರ್ಯನ ಕಿರಣಗಳು ಅವುಗಳ ಮೇಲೆ ಬಿದ್ದಾಗ ಚಿನ್ನದ ಪರ್ವತದಂತೆ ಹೊಳೆಯುತ್ತವೆ.

ಸೋನಾಮಾರ್ಗ್ ಚಾರಣ ಮಾಡುವಿಕೆ ಮತ್ತು ಹೈಕಿಂಗ್ ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿರುವ ಪ್ರವಾಸಿಗರಿಗೆ ಪರಿಪೂರ್ಣ ತಾಣವಾಗಿದೆ. ಎಲ್ಲಾ ಪ್ರಮುಖ ಚಾರಣ ಮಾರ್ಗಗಳೂ ಸೋನಾಮಾರ್ಗ್ ಮೂಲಕವೇ ಆರಂಭವಾಗುವುದರಿಂದ ಇದು ಚಾರಣಕ್ಕೆ ಜನಪ್ರಿಯ ಸ್ಥಳವೆನಿಸಿದೆ. ಸರೋವರಗಳು,  ಮತ್ತು ಪರ್ವತಗಳನ್ನು ಒಳಗೊಂಡಿರುವ ಈ ಸ್ಥಳ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಹೆಸರುವಾಸಿಯಾಗಿದೆ. ಅಮರನಾಥ್ ಪ್ರವಾಸ ಕೈಗೊಂಡಿರುವ  ಯಾತ್ರಿಗಳಿಗೆ ಬೇಸ್ ಕ್ಯಾಂಪ್ ಆಗಿ ಕೂಡ ಸೋನಾಮಾರ್ಗ್ ಕಾರ್ಯನಿರ್ವಹಿಸುತ್ತದೆ.

ಇಲ್ಲಿರುವ ಗಡ್ಸರ್, ಕೃಷ್ಣಾಸರ್, ಸತ್ಸರ್ ಮತ್ತು ಗಂಗಾಬಾಲ್ ಮೊದಲಾದ ಸರೋವರಗಳ ಉಪಸ್ಥಿತಿ ಕೂಡ ಈ ಸ್ಥಳವನ್ನು ಇನ್ನಷ್ಟು ಜನಪ್ರಿಯವನ್ನಾಗಿಸಿದೆ. ಗಡ್ಸರ್ ಸರೋವರ ಸೋನಾಮಾರ್ಗ್ ದಿಂದ15 ಕಿ.ಮೀ ದೂರದಲ್ಲಿದ್ದು, ಸುಂದರ ಹಿಮ ಮತ್ತು ಆಲ್ಪೈನ್ ಹೂಗಳಿಂದ ಸುತ್ತುವರೆದಿದೆ. ಅಲ್ಲದೇ, ಪ್ರವಾಸಿಗರು ಚಳಿಗಾಲದಲ್ಲಿ, ಈ ಸರೋವರದ ಸಮೀಪದಲ್ಲಿ ನೆಲೆಗೊಂಡಿರುವ ಹೆಪ್ಪುಗಟ್ಟಿದ ಸತ್ಸರ್ ಸರೋವರ ಮತ್ತು ಬಲ್ಟನ್/ಬಲ್ತನ್ ಸರೋವರದ ಸೌಂದರ್ಯವನ್ನೂ ನೋಡಿ ಆನಂದಿಸಬಹುದು.

ಕೃಷ್ಣಾಸರ್ ಸರೋವರ ಈ ಸ್ಥಳದ ಮತ್ತೊಂದು ಜನಪ್ರಿಯ ಆಕರ್ಷಣೆಯಾಗಿದೆ. ಇದು ಸಮುದ್ರ ಮಟ್ಟದಿಂದ 3801ಮೀ. ಎತ್ತರದಲ್ಲಿದೆ. ನಿಚಿನೈ ಪಾಸ್ ಮೂಲಕ ತಲುಪಬಹುದಾದ ಈ ಪ್ರದೇಶದಲ್ಲಿ ಪ್ರವಾಸಿಗರು ಸಿಹಿ ನೀರಿನ ಮೀನುಗಾರಿಕಾ ಚಟುವಟಿಕೆಯನ್ನು ಆನಂದಿಸಬಹುದು. ಪ್ರವಾಸಿಗರು ಸೋನಾಮಾರ್ಗದಿಂದ, ಸಮುದ್ರ ಮಟ್ಟದಿಂದ 3600 ಮೀ ಎತ್ತರದಲ್ಲಿರುವ ಸತ್ಸರ್ ಸರೋವರಕ್ಕೆ ಚಾರಣ ಮಾಡಬಹುದು. ಈ ಸರೋವರದ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿರುವ ಎತ್ತರದ ಮರಗಳು ಮತ್ತು ಆಲ್ಪೈನ್ ಹೂಗಳು ಮತ್ತಷ್ಟು ಪುಷ್ಠಿಯನ್ನು ನೀಡುತ್ತವೆ.

ಈ ಸರೋವರಗಳನ್ನು ಹೊರತುಪಡಿಸಿ, ಥಾಜಿವಸ್ ಹಿಮನದಿ (ಗ್ಲೇಸಿಯರ್), ಸೋನಾಮರ್ಗ್  ಹಿಮನದಿಯ ಅತ್ಯಂತ ಸಮೀಪದಲ್ಲಿರುವ ಮತ್ತೊಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಶ್ರೇಣಿಯು, ಭೂರ್ಜ ಮರ ಮತ್ತು ಪೈನ್ ಮರಗಳ ದಟ್ಟ ಕಾಡುಗಳಿಂದ ಮುಚ್ಚಲ್ಪಟ್ಟಿದ್ದು, ಇದೊಂದು ಉತ್ತಮ ಕ್ಯಾಂಪಿಂಗ್ ತಾಣವಾಗಿದೆ. ಈ ಹಿಮನದಿ ವರ್ಷ ಪೂರ್ತಿ ಹಿಮದಿಂದ ಆವೃತವಾಗಿರುತ್ತದೆ. ಸೋನಾಮಾರ್ಗದ ಮತ್ತೊಂದು ಪ್ರಸಿದ್ಧ ಸ್ಥಳ, ಒಂದು ಕಣಿವೆಯ ಮೂಲಕ ಹರಿಯುವ ಒಂದು ಸುಂದರ ಪರ್ವತ ನದಿಯಾದ ನಿಲಗ್ರಾಡ್. ಈ ನದಿ ಮುಂದೆ ಬಾಲ್ಟಿಕ್ ಕಾಲೋನಿಯಲ್ಲಿ ಸಿಂಧೂ ನದಿಯ ಜೊತೆ ಒಂದಾಗುತ್ತದೆ.  ಈ ನದಿಯ ನೀರಿನ ಬಣ್ಣ ಕೆಂಪಾಗಿದ್ದು, ಔಷಧೀಯ ಮತ್ತು ಚಿಕಿತ್ಸಕ ಗುಣಗಳನ್ನು ಹೊಂದಿದೆ.

ಇದರ ಜೊತೆಗೆ, ಪ್ರವಾಸಿಗರು 3680 ಮೀಟರ್ ಎತ್ತರದಲ್ಲಿರುವ ಸಾಮಾನ್ಯವಾಗಿ ಸತ್ಸರನ್ ಗಲಿ (ಪಾಸ್) ಕಣೀಮೆ ಎಂದು ಪ್ರಸಿದ್ಧವಾಗಿರುವ ಸತ್ಸರನ್ ಕಣಿವೆಯನ್ನು ನೋಡಬಹುದು. ಒಂದು ಚಾರಣ ಆಧಾರಿತ ಪ್ರಸಿದ್ಧ ಸ್ಥಳವಾಗಿರುವ ಸತ್ಸರನ್ ಕಣಿವೆಯನ್ನು ಜೂನ್ ಮತ್ತು ಅಕ್ಟೋಬರ್ ತಿಂಗಳುಗಳ ನಡುವೆ ಮಾತ್ರ ಭೇಟಿ ಮಾಡಬಹುದು. ಝೋಜಿ-ಲಾ ಕಣಿವೆ, ನಿಚಿನೈ ಕಣಿವೆ, ಕೃಷ್ಣಾಸರ/ರ್ ಕಣಿವೆ, ಬಾಲಟಾಲ್ /ಬಲ್ಟಲ್ ಮತ್ತು ವಿಶನ್ ಸರ ಸರೋವರ ಸೋನಾಮಾರ್ಗ್ ಪ್ರದೇಶದಲ್ಲಿರುವ ಇತರೆ ಪ್ರವಾಸಿ ತಾಣಗಳು.

ಪ್ರವಾಸಿಗರು ಪ್ರಮುಖ ಸಾರಿಗೆಗಳ ಮೂಲಕ ಈ ಸ್ಥಳವನ್ನು ತಲುಪಬಹುದು. ಶೇಖ್ ಉಲ್ ಆಲಂ ವಿಮಾನ ನಿಲ್ದಾಣ ಎಂದೂ ಕರೆಯಲಾಗುವ ಶ್ರೀನಗರ ವಿಮಾನ ನಿಲ್ದಾಣ, ಸೋನಾಮಾರ್ಗ್ ಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಸೋನಾಮಾರ್ಗದಿಂದ 70 ಕಿ. ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ನವ ದೆಹಲಿ, ಮುಂಬೈ ಮತ್ತು ಚಂಡೀಘಢ, ಸೇರಿದಂತೆ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

ಶ್ರೀನಗರ ರೈಲು ನಿಲ್ದಾಣ, ಸೋನಾಮಾರ್ಗಕ್ಕೆ ಹತ್ತಿರದ ರೈಲು ಮಾರ್ಗವಾಗಿದೆ. ನಗರ ಕೇಂದ್ರದಿಂದ 70 ಕಿ. ಮೀ ದೂರದಲ್ಲಿರುವ ಈ ನಿಲ್ದಾಣ ನಿರ್ಮಾಣ ಹಂತದಲ್ಲಿದ್ದು, ಜಮ್ಮು ತಾವಿ ರೈಲು ನಿಲ್ದಾಣ ಈ ಸ್ಥಳಕ್ಕೆ ಪ್ರಮುಖ ರೈಲು ಸಂಪರ್ಕವನ್ನು ಕಲ್ಪಿಸುತ್ತದೆ. ನಿಯಮಿತವಾಗಿ ಸೋನಾಮಾರ್ಗಕ್ಕೆ ಶ್ರೀನಗರ ಮತ್ತು ಜಮ್ಮುವಿನಿಂದ ಬಸ್ ಸೌಲಭ್ಯಗಳಿವೆ. ಇದಲ್ಲದೆ, ಪ್ರಯಾಣಿಕರು ಶ್ರೀನಗರ ಮತ್ತು ಜಮ್ಮುವಿನಿಂದ ಸೋನಾಮಾರ್ಗಕ್ಕೆ ವಿಶೇಷ ಐಷಾರಾಮಿ ಬಸ್ಸುಗಳ ಮೂಲಕವೂ ಹೋಗಬಹುದು.

ಸೋನಾಮಾರ್ಗದ ಹವಾಮಾನ ವರ್ಷಪೂರ್ತಿ ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸ್ಥಳದ ಉಷ್ಣಾಂಶ, ಚಳಿಗಾಲದಲ್ಲಿ ಶೂನ್ಯ ಡಿಗ್ರಿಗಿಂತಲೂ ಕೆಳಗಿಳಿಯಬಹುದು! ಈ ಸ್ಥಳಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಮೇ ಮತ್ತು ಅಕ್ಟೋಬರ್ ಹಾಗೂ ನವೆಂಬರ್ ಮತ್ತು ಏಪ್ರಿಲ್ ತಿಂಗಳುಗಳ ನಡುವಿನ ಅವಧಿ.  ಮೇ ಮತ್ತು ಅಕ್ಟೋಬರ್ ತಿಂಗಳುಗಳ ನಡುವಿನ ಅವಧಿಯಲ್ಲಿ ಈ ಸ್ಥಳದ ಅದ್ಭುತ ಪರಿ ದೃಶ್ಯಗಳ ಸೌಂದರ್ಯವನ್ನು ಸವಿಯಬಹುದು.ಪ್ರವಾಸಿಗರು ನವೆಂಬರ್ ಮತ್ತು ಏಪ್ರಿಲ್ ತಿಂಗಳುಗಳ ನಡುವಿನ ಅವಧಿಯಲ್ಲಿ ಹಿಮಪಾತದ ಅನುಭವವನ್ನು ಪಡೆಯಬಹುದು.

ಸೋನಾಮಾರ್ಗ್ ಪ್ರಸಿದ್ಧವಾಗಿದೆ

ಸೋನಾಮಾರ್ಗ್ ಹವಾಮಾನ

ಉತ್ತಮ ಸಮಯ ಸೋನಾಮಾರ್ಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೋನಾಮಾರ್ಗ್

  • ರಸ್ತೆಯ ಮೂಲಕ
    ಸೋನಾಮಾರ್ಗ್ ಪ್ರದೇಶವು ಹತ್ತಿರದ ಸ್ಥಳಗಳಾದ ಶ್ರೀನಗರ ಮತ್ತು ಜಮ್ಮುವಿನಂತಹ ಸ್ಥಳಗಳಿಗೆ ಬಸ್ ಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಜಮ್ಮು ಮತ್ತು ಶ್ರೀನಗರ ರಿಂದ ಸೋನಾಮಾರ್ಗ್ ತಲುಪಲು ಜೆ & ಕೆ ರಾಜ್ಯ ರಸ್ತೆ ಸಾರಿಗೆ ನಿಗಮ (ಜೆ & ಕೆಎಸ್ಆರ್ ಟಿಸಿ) ಬಸ್ ಸೇವೆಗಳನ್ನು ಪಡೆಯಬಹುದು. ವಿಶೇಷ ಐಷಾರಾಮಿ ಬಸ್ ಗಳು ಕೂಡ ಈ ಸ್ಥಳಕ್ಕೆ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೋನಾಮಾರ್ಗ್ ಪ್ರದೇಶಕ್ಕೆ ಹತ್ತಿರದ ರೈಲು ಮಾರ್ಗ, 70 ಕಿ. ಮೀ ದೂರದಲ್ಲಿರುವ ಶ್ರೀನಗರ ರೈಲ್ವೆ ನಿಲ್ದಾಣ ಎಂದೂ ಕರೆಯಲ್ಪಡುವ ನೌಗಮ್ ರೈಲ್ವೆ ನಿಲ್ದಾಣ. ಆದರೆ ಇದು ಭಾರತದ ಉಳಿದ ರೈಲ್ವೆ ಜಾಲ/ನಿಲ್ದಾಣದೊಂದಿಗೆ ಉತ್ತಮ ಸಂಪರ್ಕ ಹೊಂದಿಲ್ಲ. ಜಮ್ಮು ತಾವಿ ರೈಲು ನಿಲ್ದಾಣ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಸೋನಾಮಾರ್ಗ್ ದ ಹತ್ತಿರದ ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವಾಗಿದೆ. ಪ್ರವಾಸಿಗರು ಸೋನಾಮಾರ್ಗ್ ತಲುಪಲು ಈ ರೈಲ್ವೆ ನಿಲ್ದಾಣದ ಹೊರಗಿನಿಂದ ಟ್ಯಾಕ್ಸಿಗಳು ಅಥವಾ ಕ್ಯಾಬ್ ಗಳ ಮೂಲಕ ಹೋಗಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶೇಖ್ ಉಲ್ ಆಲಂ ವಿಮಾನ ನಿಲ್ದಾಣ ಎಂದೂ ಕರೆಯಲಾಗುವ ಶ್ರೀನಗರ ವಿಮಾನ ನಿಲ್ದಾಣ, ಸೋನಾಮಾರ್ಗ್ ಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಸೋನಾಮಾರ್ಗದಿಂದ 70 ಕಿ. ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಶಿಮ್ಲಾ, ಚಂಡೀಘಢ, ಮುಂಬೈ ಮತ್ತು ದೆಹಲಿ, ಸೇರಿದಂತೆ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat