ರಾಮಲಿಂಗೇಶ್ವರ ದೇವಾಲಯವು ಅತ್ಯಂತ ಸುಂದರ ನಿರ್ಮಾಣವಾಗಿದ್ದು, ಸೋಲಾಪುರದಿಂದ 70 ಕಿ.ಮೀ. ದೂರದಲ್ಲಿದೆ. ಇದರ ಸುತ್ತಲಿನ ಪರಿಸರವು ಆಚರಣೆ, ಧಾರ್ಮಿಕ ನಂಬಿಕೆಗೆ ಹೇಳಿ ಮಾಡಿಸಿದಂತಿದೆ. ವಾತಾವರಣ ಅತ್ಯಂತ ಶಾಂತವಾಗಿದ್ದು, ದೇವಾಲಯದ ಸುತ್ತಲೂ ಪ್ರಶಾಂತ ಸ್ಥಿತಿ ನಿರ್ಮಾಣವಾಗಿದೆ.
ಈ ದೇವಾಲಯದ ಸುತ್ತಲಿನ ಸ್ಥಳಗಳು ಕೆಲ ಕಾಲವನ್ನು ಕಳೆಯಲು ಸೂಕ್ತ ಎನಿಸುವಂತಿವೆ. ಕುಟುಂಬ ಸಮೇತರಾಗಿ ಇಲ್ಲಿಗೆ ಬರಲು ಇದೊಂದು ಉತ್ತಮ ಸ್ಥಳ. ಒಂದು ದಿನದ ಪಿಕ್ನಿಕ್ಗೆ ಸೂಕ್ತವಾಗಿದೆ.