ಹೊತಗಿ ಅತಿ ಚಿಕ್ಕದಾದ ಸುಂದರ ಪಟ್ಟಣ. ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿಯೆ ಬರುತ್ತದೆ. ಇಲ್ಲಿ ಸಾಯಿಬಾಬಾ ದೇವಾಲಯವಿದೆ. ಧಾರ್ಮಿಕ ಆಚರಣೆಗೆ ಇದು ಹೇಳಿ ಮಾಡಿಸಿದಂತಿದೆ. ಹಿಂದು ಧರ್ಮಿಯರು ಇಲ್ಲಿ ಆಗಮಿಸುತ್ತಾರೆ.
ಇಲ್ಲಿಗೆ ಸಮೀಪದ ಇತರೆ ಧಾರ್ಮಿಕ ತಾಣಗಳೆಂದರೆ ತುಳಜಾಪುರ ಹಾಗೂ ಪಂಢರಾಪುರ. ಒಸ್ಮಾನಾಬಾದ್ ಕೂಡ ಇದಕ್ಕೆ ಸಮೀಪವಿದೆ ಅನ್ನುವುದನ್ನು ಮರೆಯುವಂತಿಲ್ಲ. ಈ ಪ್ರದೇಶವನ್ನು ರಸ್ತೆ ಹಾಗೂ ರೈಲು ಮಾರ್ಗದ ಮೂಲಕವಾಗಿ ಆರಾಮವಾಗಿ ತಲುಪಬಹುದು.
ಪಟ್ಟಣವು ಸುಮಾರು ಸಮುದ್ರ ಮಟ್ಟದಿಂದ 1475 ಮೀಟರ್ ಎತ್ತರದಲ್ಲಿದ್ದು, ಆಕರ್ಷಣೀಯವಾಗಿದೆ. ಛಾಯಾಗ್ರಹಣಕ್ಕೆ, ಪಟ್ಟಣ ವೀಕ್ಷಣೆಗೆ, ಕಣ್ಮನ ಸೆಳೆಯುವ ದೃಶ್ಯ ವೀಕ್ಷಣೆಗೆ ಹೇಳಿ ಮಾಡಿದ ತಾಣ ಇದಾಗಿದೆ.