ನೆನ್ಮೆನಿ ವೈಪ್ಪರು ನದಿಯ ದಡದಲ್ಲಿ ಸತ್ತೂರಿನಲ್ಲಿ ನೆಲೆಯಾಗಿದೆ. ಇದು ಇಲ್ಲಿನ ಭತ್ತವನ್ನು ಬೆಳೆಯುವ ಗದ್ದೆಗಳಿಗೆ ಪ್ರಝ್ಯಾತವಾಗಿದೆ. ಇದರ ಹೆಸರು ಕೂಡ ಭತ್ತದ ಗದ್ದೆ ಎಂಬ ಅರ್ಥ ಬರುವ ನೆಲ್ಮೆನಿ ಯಿಂದ ವ್ಯುತ್ಪತ್ತಿಯಾಗಿದೆ. ಲೋಕೋಪಯೋಗಿ ಇಲಾಖೆ ಕಟ್ಟಿರುವ ಕೊಳ ಇಲ್ಲಿ ಹಲವಾರು ಮಂದಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಹಲವು ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತದೆ. ಇಲ್ಲಿನ ಕೊಳದಲ್ಲಿ ನೀರು ಭರ್ತಿಯಾಗಿರುವಾಗ ಇದು ಪಕ್ಷಿಗಳಿಗೆ ಒಂದು ಸ್ವರ್ಗದಂತೆಯೇ ಇದೆ. ಆಸ್ಟ್ರೇಲಿಯಾ ಮತ್ತು ಇನ್ನಿತರ ದೇಶಗಳಿಂದ ಇಲ್ಲಿಗೆ ಹಲವಾರು ಪಕ್ಷಿಗಳು ವಲಸೆ ಬರುತ್ತವೆ.