Search
  • Follow NativePlanet
Share
ಮುಖಪುಟ » ಸ್ಥಳಗಳು » ಸೀರ್ಕಾಳಿ » ಹವಾಮಾನ

ಸೀರ್ಕಾಳಿ ಹವಾಮಾನ

ಸೀರ್ಕಾಳಿಗೆ ಭೇಟಿಕೊಡಲು ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಹೇಳಿಮಾಡಿಸಿದ ಸಮಯವಾಗಿದೆ. ಈ ಅವಧಿಯಲ್ಲಿ ಇಲ್ಲಿ ಚಳಿಗಾಲವಿರುವುದಷ್ಟೇ ಅಲ್ಲದೆ ಈ ಊರಿನ ಸುತ್ತ ಮುತ್ತ ಅನೇಕ ಜಾತ್ರೆ ಮತ್ತು ಉತ್ಸವಗಳು ಇಲ್ಲಿ ಜರುಗುತ್ತಿರುತ್ತವೆ.

ಬೇಸಿಗೆಗಾಲ

ಸೀರ್ಕಾಳಿಯು ಬಂಗಾಳ ಕೊಲ್ಲಿಯ ಪೂರ್ವ ತೀರದಲ್ಲಿ ನೆಲೆಗೊಂಡಿದ್ದು, ಬಿಸಿಲಿನಿಂದ ಮತ್ತು ಆರ್ದ್ರತೆಯಿಂದ ಕೂಡಿದ ಹವಾಮಾನವನ್ನು ಹೊಂದಿದೆ. ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶವು 22-35° ಸೆಲ್ಶಿಯಸ್‍ವರೆಗೆ ಇರುತ್ತದೆ. ಇಲ್ಲಿ ಮಾರ್ಚ್ ತಣ್ಣಗೆ ಇರುವ ಮಾಸವಾದರೆ, ಏಪ್ರಿಲ್ ತಿಂಗಳು ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ ಹಾಗು ಮೇ ತಿಂಗಳು ಬೆಚ್ಚಗೆ ಇರುತ್ತದೆ. ಪ್ರವಾಸಿಗರು ಸೀರ್ಕಾಳಿಗೆ ಬೇಸಿಗೆಯಲ್ಲಿ ಭೇಟಿಕೊಡಲು ಇಚ್ಛಿಸುತ್ತಿರುತ್ತಾರೆ.

ಮಳೆಗಾಲ

ಸೀರ್ಕಾಳಿಯಲ್ಲಿ ಮಳೆಗಾಲದ ಸಮಯದಲ್ಲಿ ಯಥೇಚ್ಛವಾಗಿ ಮಳೆ ಸುರಿಯುತ್ತದೆ. ಈ ಕಾಲವು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ದೇವಾಲಯಗಳು ಮಳೆಯಲ್ಲಿ ಮಿಂದು ಪರಿಶುದ್ಧವಾಗಿ ಕಂಗೊಳಿಸುತ್ತಿರುತ್ತವೆ.

ಚಳಿಗಾಲ

ಸೀರ್ಕಾಳಿಯಲ್ಲಿ ಚಳಿಗಾಲವು ತಕ್ಕ ಮಟ್ಟಿಗೆ ತಂಪಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು 15-28° ಸೆಲ್ಶಿಯಸ್‍ವರೆಗೆ ಇರುತ್ತದೆ. ಇದು ನವೆಂಬರಿನಲ್ಲಿ ಪ್ರಾರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಜನವರಿ ಇಲ್ಲಿನ ಅತ್ಯಂತ ಚಳಿಯಿಂದ ಕೂಡಿದ ತಿಂಗಳಾಗಿರುತ್ತದೆ.