Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ಹವಾಮಾನ

ಸಿಂಧುದುರ್ಗ ಹವಾಮಾನ

ಸಿಂಧುದುರ್ಗ ಪ್ರದೇಶವು ಅರೆ ಉಷ್ಣವಲಯದ ಮತ್ತು ಆರ್ದ್ರತೆಯ ಹವಾಮಾನವನ್ನು ಹೊಂದಿದೆ. ಚಳಿಗಾಲವು ಸಿಂಧುದುರ್ಗದ  ಸವಿಯನ್ನು ಆನಂದಿಸಲು ಉತ್ತಮ ಸಮಯ.

ಬೇಸಿಗೆಗಾಲ

ಫೆಬ್ರುವರಿಯ ಮಧ್ಯದಿಂದ ಹಿಡಿದು ಮೇ ವರೆಗೆ ಇರುವ ಈ ಕಾಲದ ಉಷ್ಣಾಂಶ ಮಟ್ಟ ಗರಿಷ್ಠ 38 ° C ಹಾಗು ಕನಿಷ್ಠ  32 ° C. ವಾತಾವರಣವೂ ಅತೀ ಹೆಚ್ಚು ಬಿಸಿಲಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ತೇವಾಂಶವು ಹೆಚ್ಚಿದ್ದು ಮೇ ತಿಂಗಳು ವರ್ಷದಲ್ಲೇ ಅತ್ಯಂತ ಉಷ್ಣ ಕಾಲವಾಗಿದೆ.

ಮಳೆಗಾಲ

ಮುಂಗಾರು ಕಾಲವು ಈ ಪ್ರದೇಶದಲ್ಲಿ ಸ್ವಾಗತಾರ್ಹ ಹವಾಮಾನ ಬದಲಾವಣೆಯನ್ನು ತರುತ್ತದೆ. ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ, ಇಡೀ ಪ್ರದೇಶವು  ನೈರುತ್ಯ ಮೊಡಗಳ ಪ್ರಭಾವದಿಂದ ವಿಸ್ತಾರವಾದ ಮಳೆಯನ್ನು ಪಡೆಯುತ್ತದೆ ಮತ್ತು ಇಲ್ಲಿನ ಪ್ರಯಾಣದ ಅನುಭವ ಕಷ್ಟವಾಗುತ್ತದೆ.  ಮುಂಗಾರು ನಂತರದ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಪರಿಸ್ಥಿತಿಯು ಸ್ವಲ್ಪ ತಂಪಾಗಿರುತ್ತದೆ.

ಚಳಿಗಾಲ

ನವೆಂಬರ್ ಮಧ್ಯ ಭಾಗದಿಂದ ಹಿಡಿದು ಫೆಬ್ರವರಿಯ ವರೆಗೆ ಚಳಿಗಾಲವಿರುತ್ತದೆ. ಈ ಸಮಯವು ಇಡೀ ವರ್ಷದಲ್ಲೇ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ವಾತಾವರಣವೂ ಕೇವಲ 20 -22 ಡಿಗ್ರಿ ಉಷ್ಣಾಂಶದಿಂದ ಅತ್ಯಂತ ಹಿತಕರ ಮತ್ತು ತಂಪಾಗಿರುತ್ತದೆ. ಡಿಸೆಂಬರ್ ಮತ್ತು ಜನವರಿ ಈ ಸ್ಥಳದ ಅತ್ಯಂತ ತಂಪಾದ ಸಮಯವಾಗಿದ್ದು, ಪ್ರವಾಸಿಗರು ಈ ಜಾಗವನ್ನು ಸಂಪೂರ್ಣವಾಗಿ ಅನುಭವಿಸಲು ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.