ಸಾಗರೇಶ್ವರ ಬೀಚ್, ಆಕರ್ಷಣೀಯವಾದ ಮತ್ತು ಪ್ರಾಚೀನ ಸಾಗರೇಶ್ವರ್ ದೇವಸ್ಥಾನದ ನೆಲೆಯಾಗಿದೆ. ಕಲ್ಲುಗಳಲ್ಲಿ ಕಟ್ಟಲಾದ ಈ ವೈಭವಪೂರಿತ ದೇವಸ್ಥಾನದ ಹಾದಿಯ ಮೆಟ್ಟಿಲಿನ ಬಳಿಯೇ ಸಮುದ್ರದ ಅಲೆಗಳು ಭೇಟಿ ನೀಡುತ್ತವೆ. ಇದು ಸಿಂಧುದುರ್ಗ ಜಿಲ್ಲೆಯಲ್ಲಿದೆ.
ಸಮುದ್ರದಿಂದ ಸುತ್ತುವರೆದಿರುವ ದೇವಸ್ಥಾನವು ಜಾಣ್ಮೆಯಿಂದ ವಿನ್ಯಾಸಗೊಂಡಿದ್ದು, ಅಂಗಳದಲ್ಲಿ ಎಲ್ಲ ತರಹದ ಬಣ್ಣಗಳಿಂದ ಕೂಡಿದ ವಿವಿಧ ಮಾದರಿಯ ಹೂವುಗಳನ್ನು ಕಾಣಬಹುದಾಗಿದೆ. ದೇವಸ್ಥಾನದ ಪ್ರವೇಶದಲ್ಲೇ ಬೃಹತ್ ದೀಪಸ್ತಂಭವಿದ್ದು, ಅದರೊಂದಿಗೆ ನಂದಿಯ ಮೂರ್ತಿಯು ಸ್ವಾಮಿಯ ದ್ವಾರದಲ್ಲೇ ಇದೆ.