ಸಿಮಡೆಗಾದಿಂದ ಕೇವಲ 4 ಕಿ.ಮೀ. ದೂರದಲ್ಲಿ ಕೆಲಘಡ್ ಅಣೆಕಟ್ಟು ಇದೆ. ಇದರ ಸುತ್ತಮುತ್ತಲಿರುವ ನಿಸರ್ಗ ಸೊಬಗು ಈ ಅಣಿಕಟ್ಟಿನ ಸೌಂದರ್ಯವನ್ನು ಹೆಚ್ಚಿಸಿದೆ. ಅಣೆಕಟ್ಟಿನ ಸುತ್ತ ಬೆಟ್ಟ ಮತ್ತು ಪಾರ್ಕ್ ಇದೆ. ಪ್ರವಾಸಿಗಳಿಗೆ ಇಲ್ಲಿ ವಾಟರ್ ಬೋಟಿಂಗ್ ಮತ್ತು ಪ್ಯಾರಾಸೈಲಿಂಗ್ ವ್ಯವಸ್ಥೆಯಿದೆ.
ರಾಮರೇಖಾ ಧಾಮವು ಯಾತ್ರಾ ಸ್ಥಳವಾಗಿದ್ದು, ಸಿಮಡೆಗಾದಿಂದ ಇದು 28 ಕಿ.ಮೀ. ದೂರದಲ್ಲಿದೆ. ರಾಮ ವನವಾಸದಲ್ಲಿ 14 ವರ್ಷ ಕಳೆದ ಸಮಯದಲ್ಲಿ ಸೀತಾ ಮಾತೆ ಮತ್ತು ಲಕ್ಷ್ಮಣ ಈ ಪ್ರದೇಶದಲ್ಲಿ ಕೆಲವು ಸಮಯ ಕಳೆದಿದ್ದರು ಎಂದು ಪುರಾಣಗಳಲ್ಲಿದೆ.
ಅಗ್ನಿ ಕುಂಡ, ಚರಣ ಪಾದುಕ, ಸೀತಾ ಚೂಲ ಮತ್ತು ಗುಪ್ತ ಗಂಗಾ ರಾಮರೇಖಾ ಧಾಮದಲ್ಲಿರುವ...